More

    ನವೃಂದಾವನ ಬಳಿ ಸಚಿವ ಆನಂದ ಸಿಂಗ್ ರಿಕ್ರಿಯೇಷನ್ ಕ್ಲಬ್?

    ಹೊಸಪೇಟೆ: ತಾಲೂಕಿನ ಹಂಪಿ ಸಮೀಪದ ನವವೃಂದಾವನದಿಂದ ಅನತಿ ದೂರದಲ್ಲಿ ಸಚಿವ ಆನಂದ ಸಿಂಗ್ ಅವರ ಕುಟುಂಬಸ್ಥರು ರಿಕ್ರಿಯೇಷನ್ ಕ್ಲಬ್ ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಕೊಪ್ಪಳ ಜಿಪಂ ಮಾಜಿ ಅಧ್ಯಕ್ಷ ರಾಜಶೇಖರ್ ಹಿಟ್ನಾಳ್ ಆರೋಪಿಸಿದ್ದಾರೆ.

    ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈ ನಿಲುವಿಗೆ ಸಾಕಷ್ಟು ಭಕ್ತರು ವಿರೋಧಿಸಿದ್ದಾರೆ. ಆದರೂ ಯಾವುದೋ ಒತ್ತಡಕ್ಕೆ ಮಣಿದು ಸರ್ಕಾರ ಅನುಮತಿ ನೀಡಲು ಮುಂದಾದರೆ ಹೊಸಪೇಟ್ ಬಂದ್‌ಗೆ ಕರೆ ನೀಡಲಾಗುವುದು ಎಂದು ಎಚ್ಚರಿಸಿದರು.

    ನವವೃಂದಾವನದಲ್ಲಿ 9 ಮಾಧ್ವ ಯತಿಗಳ ವೃಂದಾವನ (ಸಮಾಧಿ) ಇವೆ. ಇದು ಪವಿತ್ರವಾದ ಸ್ಥಳ. ದೇಶದ ನಾನಾ ಕಡೆಗಳಿಂದ ನಿತ್ಯ ಭಕ್ತರು ಇಲ್ಲಿಗೆ ಬರುತ್ತಾರೆ. ಈ ಪುಣ್ಯಸ್ಥಳದಿಂದ ಕೇವಲ ನೂರಿನ್ನೂರು ಮೀಟರ್ ದೂರದಲ್ಲಿ ಸಚಿವ ಆನಂದ ಸಿಂಗ್ ಕುಟುಂಬಸ್ಥರ ಹೆಸರಲ್ಲಿ 51.64 ಎಕರೆ ಜಮೀನಿದೆ. ಅದರಲ್ಲಿ ರಿಕ್ರಿಯೇಷನ್ ಕ್ಲಬ್ ತೆರೆಯಲು ಉದ್ದೇಶಿಸಿ, ಸರ್ಕಾರಕ್ಕೆ ಅರ್ಜಿ ಹಾಕಲಾಗಿದೆ. ಕ್ಲಬ್‌ಗಳಲ್ಲಿ ಮದ್ಯ, ಮಾಂಸ ಸೇವನೆ, ಇಸ್ಪೀಟ್ ಜೂಜಾಟ, ಕ್ಯಾಷಿನೋ ಮತ್ತಿತರ ಅನೈತಿಕ ಚಟುಕವಟಿಕೆಗಳು ನಡೆಯುತ್ತವೆ. ಇದರಿಂದ ಭಕ್ತರ ಧಾರ್ಮಿಕ ಭಾವನೆಗಳಗೆ ಧಕ್ಕೆಯಾಗುತ್ತದೆ ಎಂದರು.

    ಇಲ್ಲಿಗೆ ಬರುವ ಭಕ್ತರನ್ನೇ ಗುರಿಯಾಗಿಸಿಕೊಂಡು ಆನಂದ ಸಿಂಗ್ ಕುಟುಂಬಸ್ಥರು ವಾಣಿಜ್ಯ ಉದ್ದೇಶಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಅದರ ಮಂಜೂರಾತಿಗಾಗಿ ಇನ್ನಿಲ್ಲದ ಪ್ರಯಾಸ ನಡೆಸಿದ್ದಾರೆ. ಸರ್ಕಾರದ ಮೇಲೆ ಸಾಕಷ್ಟು ಪ್ರಭಾವ ಬೀರಲು ಮುಂದಾಗಿದ್ದಾರೆ. ಎಲ್ಲರೂ ಚುನಾವಣಾ ಪ್ರಕ್ರಿಯೆಗಳಲ್ಲಿ ಮಗ್ನರಾಗಿರುವಾಗ ಹೇಗಾದರೂ ಮಾಡಿ ವಾಣಿಜ್ಯ ಮತ್ತು ಮನೋರಂಜನಾ ಸಂಸ್ಥೆಗೆ ಅನುಮತಿ ಪಡೆಯಲು ಸಚಿವ ಆನಂದ ಸಿಂಗ್ ತೆರೆಮರೆಯಲ್ಲಿ ಕಸರತ್ತು ನಡೆಸಿದ್ದಾರೆ. ಸರ್ಕಾರ ಇದಕ್ಕೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.

    ಕುರಿ ಶಿವಮೂರ್ತಿ, ವಿನಾಯಕ ಶೆಟ್ಟರ್, ಗುಜ್ಜಲ ನಾಗರಾಜ, ರಾಮಚಂದ್ರ, ರಾಮಕೃಷ್ಣ ನಿಂಬಗಲ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts