More

    ಜಗದ್ಗುರು ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದ ಸರ್ವಧರ್ಮ ಸಮನ್ವಯ ರಥೋತ್ಸವ ಅದ್ದೂರಿ

    ಹೊಸಪೇಟೆ: ಜಗದ್ಗುರು ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದಿಂದ ಮಂಗಳವಾರ ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸರ್ವಧರ್ಮ ಸಮನ್ವಯ ಮಹಾರಥೋತ್ಸವ ಸಂಭ್ರಮದಿಂದ ನೆರವೇರಿತು.

    ಶ್ರೀಮಠದ ಹತ್ತೊಂಬತ್ತನೇ ಜಗದ್ಗುರು ಲಿಂ. ಡಾ.ಸಂಗನಬಸವ ಸಾನ್ನಿಧ್ಯದಲ್ಲಿ ಕುದರೆಮೋತಿಯ ಶ್ರೀ ಜಗದ್ಗುರು ವಿಜಯ ಮಹಾಂತೇಶ್ವರ ಸಂಸ್ಥಾನಮಠದ ಜಗದ್ಗುರು ವಿಜಯ ಮಹಾಂತ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿದರು. ಮಠದಿಂದ ಆರಂಭಗೊಂಡ ಮಹಾರಥೋತ್ಸವ ಪಾದಗಟ್ಟೆ ಆಂಜನೇಯ ದೇವಸ್ಥಾನದ ವರೆಗೆ ಸಾಗಿ, ಮೂಲಸ್ಥಾನಕ್ಕೆ ಮರಳಿತು.

    ಸಿದ್ದಲಿಂಗ ಮಹಾಸ್ವಾಮೀಜಿ, ಗುರುಬಸವ ಮಹಾಸ್ವಾಮೀಜಿ, ಪ್ರಭುನೀಲಕಂಠ ಮಹಾಸ್ವಾಮೀಜಿ, ಶಿವಲಿಂಗ ಮಹಾಸ್ವಾಮೀಜಿ, ಸದಾಶಿವ ಮಹಾಸ್ವಾಮೀಜಿ, ಬಸವಲಿಂಗ ಮಹಾಸ್ವಾಮೀಜಿ, ತೋಂಟದಾರ್ಯ ಮಹಾಸ್ವಾಮೀಜಿ, ನಿರಂಜನ ದೇವರು, ಶಿವಬಸವ ದೇವರು ಇತರರು ಇದ್ದರು.

    ಜಾನಪದ ಗೀತ ಸಂಭ್ರಮ: ಅದಕ್ಕೂ ಮುನ್ನ ಜಗದ್ಗುರು ಶ್ರೀ ಕೊಟ್ಟೂರು ಸ್ವಾಮಿ ಮಠದ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಜಾನಪದ ಗೀತ ಸಂಭ್ರಮ ಕಾರ್ಯಕ್ರಮದದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಜ.ಕೊಟ್ಟೂರು ಬಸವಲಿಂಗ ಸ್ವಾಮೀಜಿ, ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿ ನಮ್ಮ ಧರ್ಮ, ಸಂಸ್ಕೃತಿ, ಸಂಪ್ರದಾಯಗಳ ಬಗ್ಗೆ ಪಾಲಕರು ಅರಿವು ಮೂಡಿಸಬೇಕು. ಮಠ ಮಾನ್ಯಗಳಿಂದ ಸಮಾಜದಲ್ಲಿ ಧರ್ಮ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದರು.
    ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಡಾ.ಶ್ರೀಶೈಲ ಹುದ್ದಾರ ನೇತೃತ್ವದ ಕಲಾತಂಡ ಜಾನಪದ ಗೀತ ಸಂಭ್ರಮ ನಡೆಸಿಕೊಟ್ಟಿತು. ಮರಿಯಮ್ಮನಹಳ್ಳಿ ಗುರುಪಾದ ದೇವರ ಮಠದ ಮಲ್ಲಿಕಾರ್ಜುನ ಶಿವಾಚಾರ್ಯರು, ಪ್ರಮುಖರಾದ ಕೆ.ಕೊಟ್ರೇಶ್, ರಾಜಶೇಖರ ಹಿಟ್ನಾಳ್, ವಿಶ್ವನಾಥ ಹಿರೇಮಠ, ಭೂಪಾಳ ರಾಘವೇಂದ್ರ ಶೆಟ್ಟಿ, ಕೆ.ಎಂ.ಹೇಮಯ್ಯ ಸ್ವಾಮಿ, ಮಧುರಚೆನ್ನ ಶಾಸ್ತ್ರಿ, ಅಸುಂಡಿ ನಾಗರಾಜ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts