More

    ವ್ಯಕ್ತಿ ಬದಲಾಗಲು ಶಿಕ್ಷಣ, ಸಂಸ್ಕಾರ ಅಗತ್ಯ: ನಿವೃತ್ತ ಪ್ರಾಧ್ಯಾಪಕ ಡಾ.ಎಸ್.ಶಿವಾನಂದ ಹೇಳಿಕೆ; ಕನ್ನಡ ವಿವಿಯಲ್ಲಿ ಕನಕದಾಸರ ಕೀರ್ತನೆಗಳ ಉಪನ್ಯಾಸ

    ಹೊಸಪೇಟೆ: ಸಮಾಜ ಪರಿವರ್ತನೆ ಆಗಬೇಕಾದರೆ ಮನುಷ್ಯ ಬದಲಾಗಬೇಕು. ವ್ಯಕ್ತಿ ಬದಲಾಗಲು ಉತ್ತಮ ಶಿಕ್ಷಣ ಮತ್ತು ಸಂಸ್ಕಾರ ಅಗತ್ಯ ಎಂದು ವಿಜಯನಗರ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ.ಎಸ್.ಶಿವಾನಂದ ಹೇಳಿದರು.

    ಕನಕದಾಸರ ಜಯಂತಿ ಪ್ರಯುಕ್ತ ಕನ್ನಡ ವಿಶ್ವವಿದ್ಯಾಲಯದಲ್ಲಿ ಹಾಲುಮತ ಅಧ್ಯಯನ ಪೀಠ ಗುರುವಾರ ಹಮ್ಮಿಕೊಂಡಿದ್ದ ‘ಕನಕದಾಸರ ಕೀರ್ತನೆಗಳಲ್ಲಿ ಸಾಮಾಜಿಕ ಚಿಂತನೆಗಳು’ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕನಕದಾಸರು ವೈದಿಕ ಪರಂಪರೆ ಹೊರಗಿನಿಂದ ಒಳಹೋದವರು. ವೈದಿಕ ಪರಂಪರೆ ಒಳಗಿದ್ದುಕೊಂಡು ಸಮಾಜದ ಅಂಕು-ಡೊಂಕು ತಿದ್ದುವ ಪ್ರಯತ್ನ ಮಾಡಿದರು. ಅರಿವನ್ನು ವಿಸ್ತರಣೆ ಮಾಡುವುದೋ ಅದೇ ನಿಜವಾದ ಧರ್ಮ. ಪುಸ್ತಕದಿಂದ ದೊರೆತ ಜ್ಞಾನಕ್ಕಿಂತ, ಮಸ್ತಕದಿಂದ ದೊರೆತ ಜ್ಞಾನ ಮುಖ್ಯ. ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ.. ಹೀಗೆ ಕನಕದಾಸರ ಎಲ್ಲ ಕೀರ್ತನೆಗಳಲ್ಲೂ ಸಮಾಜಮುಖಿ ಚಿಂತನೆ ಕಾಣಬಹುದು ಎಂದರು.

    ವಿವಿ ಕುಲಪತಿ ಡಾ.ಸ.ಚಿ.ರಮೇಶ ಮಾತನಾಡಿ, ಸಮಸಮಾಜ ನಿರ್ಮಾಣದ ಹಾದಿ ನಿರ್ಮಿಸುವಲ್ಲಿ ಮಹತ್ವದ ಪಾತ್ರವಹಿಸಿದರು ಎಂದರು. ಅಧ್ಯಯನ ಪೀಠದ ಸಂಚಾಲಕ ಡಾ.ಎಫ್.ಟಿ.ಹಳ್ಳಿಕೇರಿ ಪ್ರಾಸ್ತಾವಿಕ ಮಾತನಾಡಿದರು. ಕುಲಸಚಿವ ಡಾ.ಎ.ಸುಬ್ಬಣ್ಣ ರೈ ಪಾಲ್ಗೊಂಡಿದ್ದರು. ಸಂಗೀತ ವಿಭಾಗದ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಪ್ರಾರ್ಥನೆ ಮಾಡಿದರು. ಸಂಶೋಧನಾರ್ಥಿ ಸ್ವಾಮಿಲಿಂಗ ಹಾಳಿ ನಿರೂಪಿಸಿದರು. ಸಾಗರ ಜೋಶಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts