More

    ಕಮಲಾಪುರದಲ್ಲಿ ಲಂಬಾಣಿಗರಿಂದ ಸಾಂಪ್ರದಾಯಿಕ ನೃತ್ಯ ಪ್ರದರ್ಶನ

    ಹೊಸಪೇಟೆ: ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಸಂತ ಸೇವಾಲಾಲ್ ಮಹಾರಾಜರ 285ನೇ ಜಯಂತಿ ಆಚರಿಸಲಾಯಿತು.

    ಜಿಪಂ ಸದಾಶಿವ ಬಿ.ಪ್ರಭು, ಅಪರ ಜಿಲ್ಲಾಧಿಕಾರಿ ಅನುರಾಧಾ, ಪ್ರಮುಖರಾದ ಎಲ್.ವಾಲ್ಯಾನಾಯ್ಕಾ, ನಾರಾಯಣ್ ನಾಯ್ಕ, ರಾಮ್‌ಜಿ ನಾಯ್ಕ, ಭೀಮಾನಾಯ್ಕ, ಚಂದ್ರನಾಯ್ಕ, ತೇಜಸ್ವಿನಾಯ್ಕ, ನಾರಾಯಣ ನಾಯ್ಕ, ಸೋಮ್ಲಾನಾಯ್ಕ ಇತರರಿದ್ದರು.

    ಕಮಲಾಪುರ: ಲಂಬಾಣಿಗರ ಆರಾಧ್ಯ ದೈವ ಸಂತ ಸೇವಾಲಾಲ್ ಮಹಾರಾಜರ ಜಯಂತಿಯನ್ನು ತಾಲೂಕಿನ ಕಮಲಾಪುರ ಪಟ್ಟಣದಲ್ಲಿ ಗುರುವಾರ ಅದ್ದೂರಿಯಾಗಿ ಆಚರಿಸಲಾಯಿತು. ಕೆರೆತಾಂಡಾದ ಸೇವಾಲಾಲ್ ಮಂದಿರದಲ್ಲಿ ವಿಶೇಷ ಪೂಜೆ, ಮಹಾ ಮಂಗಳಾರತಿ ಸಲ್ಲಿಸಿದ ಸಮುದಾಯದ ಮುಖಂಡರು, ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

    ವಿಶೇಷವಾಗಿ ಸಿಂಗರಿಸಿದ್ದ ಸೇವಾಲಾಲ್ ಮಹಾರಾಜರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಸಲಾಯಿತು. ಕಮಲಾಪುರದ ಕೋಟೆ ಆಂಜನೇಯ ದೇವಸ್ಥಾನದಿಂದ ಆರಂಭವಾದ ಮೆರವಣಿಗೆ ಅಂಬೇಡ್ಕರ್ ವೃತ್ತ, ಕೃಷ್ಣದೇವರಾಯ ವೃತ್ತ, ಊರಮ್ಮನ ಬಯಲು, ಮನ್ಮಥಕೇರಿ, ಚೌಡಿಕೇರಿ, ಮೀನುಗಾರ ಓಣಿ ಮೂಲಕ ಕೆರೆತಾಂಡ ತಲುಪಿತು. ಮೆರವಣಿಗೆಯಲ್ಲಿ ಮಹಿಳೆಯರು ಬಂಜಾರ ಸಾಂಪ್ರದಾಯಿಕ ನೃತ್ಯ ಪ್ರದರ್ಶಿಸಿದರು. ಮುಖಂಡರಾದ ಜನ್ಯಾನಾಯ್ಕ, ಹನುಮನಾಯ್ಕ, ಪೀರುನಾಯ್ಕ, ಯಮುನನಾಯ್ಕ, ಎಸ್.ಎಸ್.ನಾಯ್ಕ, ದರ್ಗ್ಯನಾಯ್ಕ, ಗೋಲ್ಯನಾಯ್ಕ, ಸೋಮಶೇಖರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts