More

    ಹೆಚ್ಚಿನ ಬೆಲೆಗೆ ದಿನಸಿ ಮಾರಾಟ ಮಾಡಿದ ಐದು ಅಂಗಡಿಗಳ ಮೇಲೆ ಎಸಿ ದಾಳಿ, ಪ್ರಕರಣ ದಾಖಲು

    ದಾಳಿ ನಡೆಸಿದ ಸಹಾಯಕ ಆಯುಕ್ತ ಶೇಕ್ ತನ್ವೀರ್ ಆಸೀಫ್ ಮತ್ತು ತಂಡ

    ಹೊಸಪೇಟೆ: ನಗರದಲ್ಲಿ ಹೆಚ್ಚಿನ ಬೆಲೆಗೆ ದಿನಸಿ ಮಾರಾಟ ಮಾಡುತ್ತಿದ್ದ ಐದು ಅಂಗಡಿಗಳ ಮೇಲೆ ಸಹಾಯಕ ಆಯುಕ್ತ ಶೇಕ್ ತನ್ವೀರ್ ಆಸೀಫ್ ಸೋಮವಾರ ದಾಳಿ ನಡೆಸಿ, ಪ್ರಕರಣ ದಾಖಲಿಸಿದ್ದಾರೆ.

    ನಗರದಲ್ಲಿ ಸೋಮವಾರ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಲಾಕ್‌ಡೌನ್ ಸಂದಿಗ್ಧ ಸಮಯದಲ್ಲೂ ಕೆಲ ದಿನಸಿ ಅಂಗಡಿಗಳು ಅಗತ್ಯ ವಸ್ತುಗಳನ್ನು ಅಧಿಕ ಬೆಲೆಗೆ ಮಾರಾಟ ಮಾಡುತ್ತಿವೆ. ಬಡವರು ಕೊಳ್ಳಲಾಗುತ್ತಿಲ್ಲ ಎಂಬ ದೂರುಗಳು ಕೇಳಿಬಂದ ಬೆನ್ನಲ್ಲೆ ಗ್ರಾಹಕನಿಗೆ ಹಣ ನೀಡಿ ಅಗತ್ಯ ವಸ್ತು ಖರೀದಿಸಲು ಸೂಚಿಸಲಾಗಿತ್ತು. ಒಂದು ಕೆ.ಜಿಗೆ 100 ರೂ. ಇರುವ ಉದ್ದಿನ ಬೇಳೆಯನ್ನು 150 ರೂ.ಗೆ ಮತ್ತು 70.ರೂ ಬೆಲೆಯ ಅಲಸಂದಿಯನ್ನು 120ಗೆ ಹೆಚ್ಚಿಸಿ ಮಾರಾಟ ಮಾಡಿರುವುದನ್ನು ಖಚಿತಪಡಿಸಿ ದಾಳಿ ನಡೆಸಲಾಯಿತು. ಮೂರಂಗಡಿ ವೃತ್ತದ ಬಳಿ ಇರುವ ದೇವಿನಾರಾಯಣೆ ಕಿರಾಣಿ ಅಂಗಡಿ, ಕೇಂದ್ರ ಬಸ್ ನಿಲ್ದಾಣದ ಎದುರಿನ ಶ್ರೀ ಬಾಲಾಜಿ ಬಜಾರ್, ಪೊಲೀಸ್ ವಸತಿ ಗೃಹದ ಎದುರಿನ ಲಕ್ಷ್ಮ್ಮೀನಾರಾಯಣ ಜನರಲ್ ಸ್ಟೋರ್ಸ್‌, ಮೇನ್ ಬಜಾರಿನ ಜನಾದ್ರಿ ರಾಮಚಂದ್ರಪ್ಪ ಅಂಡ್ ಸನ್ಸ್ ಹಾಗೂ ಪಟೇಲ್ ನಗರದ ಶಿರಡಿ ಸಾಯಿ ಬಜಾರ್ ಅಂಗಡಿ ಮಾಲೀಕರ ವಿರುದ್ಧ ನಗರಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.

    ಹೆಚ್ಚಲಿದೆ ಭದ್ರತೆ: ನಗರದಲ್ಲಿ ಏಳು ಕರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು ಈವರೆಗೆ ಒಟ್ಟು 11 ಪ್ರಕರಣಗಳು ಬೆಳಕಿಗೆ ಬಂದಿವೆ. ಏ.20 ಮತ್ತು ಏ.21 ರಂದು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಏ.22ರಿಂದ ಸರ್ಕಾರ ನಿಯಮಗಳನ್ನು ಜಾರಿಗೊಳಿಸಿ, ಅನಗತ್ಯ ರಸ್ತೆಗಿಳಿಯುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು. ಈಗಾಗಲೇ ನಗರದಲ್ಲಿ ಅಗತ್ಯ ವಸ್ತುಗಳ ಅಡಿ ಬಾರದ ಹಾರ್ಡ್‌ವೇರ್, ಎಲೆಕ್ಟ್ರಿಕಲ್ ಶಾಪ್, ಸೆಲೂನ್ ಶಾಪ್ ಸೇರಿದಂತೆ ವಿವಿಧ ಅಂಗಡಿಗಳನ್ನು ಬಂದ್ ಮಾಡಿಸಿ ವಶಕ್ಕೆ ಪಡೆಯಲಾಗಿದೆ. ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿದರೆ ಅವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts