More

    ಕಣ್ಣು ರಕ್ಷಣೆಗೆ ಆಸಕ್ತಿ ವಹಿಸಿ

    ಹಗರಿಬೊಮ್ಮನಹಳ್ಳಿ: ಒತ್ತಡದ ಬದುಕಿನಲ್ಲಿ ದೇಹದ ಆರೋಗ್ಯದ ಕಾಪಾಡಿಕೊಳ್ಳಲು ಸಮತೋಲನ ಆಹಾರ ಸೇವಿಸುವುದು ಅತ್ಯಗತ್ಯ ಎಂದು ಹೊಸಪೇಟೆಯ ನೇತ್ರ ತಜ್ಞ ಶ್ರೀನಿವಾಸ್ ದೇಶಪಾಂಡೆ ಹೇಳಿದರು.

    ಸಮತೋಲನ ಆಹಾರ ಸೇವಿಸಿ

    ಪಟ್ಟಣದ ಸಪ್ತಗಿರಿ ಕಣ್ಣಿನ ಆಸ್ಪತ್ರೆ ಮತ್ತು ನೇತ್ರಲಕ್ಷ್ಮೀ ವೈದ್ಯಾಲಯದಿಂದ ಏರ್ಪಡಿಸಿದ್ದ ಕಣ್ಣಿನ ಉಚಿತ ಶಸ್ತ್ರ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಬುಧವಾರ ಮಾತನಾಡಿದರು. ಸೂಕ್ಷ್ಮ ಅಂಗವಾಗಿರುವ ಕಣ್ಣು ರಕ್ಷಣೆಗೆ ಹೆಚ್ಚಿನ ಆಸಕ್ತಿ ವಹಿಸಬೇಕಿದೆ. ದುಶ್ಚಟಗಳಿಂದಲೂ ಕಣ್ಣಿಗೆ ಹಾನಿಯಾಗುವ ಸಂಭವವಿದೆ ಎಂದರು.
    ಇತ್ತೀಚೆಗೆ ಆಹಾರದ ಜ್ಞಾನ ಸಾರ್ವಜನಿಕರಲ್ಲಿ ಹೆಚ್ಚಾಗುತ್ತಿದೆ. ಆದರೆ, ಯುವಪೀಳಿಗೆ ಮಾತ್ರ ಜಂಕಪುಡ್‌ಗೆ ಆಸಕ್ತಿ ವಹಿಸುತ್ತಿದ್ದು, ಅದರಿಂದ ಹೊರಬೇಕು. ಮರಣ ನಂತರ ಕಣ್ಣುಗಳನ್ನು ದಾನ ಮಾಡುವ ಸಾಮಾಜಿಕ ಕಾರ್ಯ ಎಲ್ಲರಿಂದಾಗಬೇಕಿದೆ ಎಂದರು.

    ಇದನ್ನೂ ಓದಿ: ಅಕ್ರಮದ ವಿರುದ್ಧ ಸರ್ಜಿಕಲ್ ದಾಳಿ: ‘ಕೈ’ ಸುಡುತ್ತಿರುವುದು ಏಕೆ ನ್ಯಾಷನಲ್ ಹೆರಾಲ್ಡ್ ಹಗರಣ?

    ಸರ್ಕಾರಿ ಆಸ್ಪತ್ರೆ ವೈದ್ಯ ಶರತ್ ಮಾತನಾಡಿ, ಕಣ್ಣಿನ ಸಮಸ್ಯೆ ಸೃಷ್ಟಿಯಾದ ಮೇಲೆ ಅದರ ಮೌಲ್ಯ ಅರಿಯುವುದು ಸಾಮಾನ್ಯವಾಗಿದೆ. ಮುಂಚಿತವಾಗಿ ಕಣ್ಣಿನ ಪೋಷಣೆ, ಆರೈಕೆಗೆ ಪ್ರತಿಯೊಬ್ಬರು ಮುಂದಾಗಬೇಕು ಎಂದರು.

    ಶಿಬಿರದಲ್ಲಿ 80 ಜನರು ತಪಾಸಣೆಗೆ ಒಳಗಾದರು. ಈ ಪೈಕಿ 40 ಜನರನ್ನು ಶಸ್ತ್ರ ಚಿಕಿತ್ಸೆಗೆ ಆಯ್ಕೆ ಮಾಡಿಕೊಳ್ಳಲಾಯಿತು. ಆಸ್ಪತ್ರೆಯ ಡಾ.ಸುಬ್ರಮಣ್ಯ, ರಮೇಶ್ ಬಾಬು, ಸರ್ಕಾರಿ ಆಸ್ಪತ್ರೆ ಹಿರಿಯ ಆರೋಗ್ಯ ಸಹಾಯಕ ಶ್ರೀನಿವಾಸ ರೆಡ್ಡಿ, ಪ್ರಮುಖರಾದ ಡಿ.ರಮೇಶ್ ಶೆಟ್ಟಿ, ಕೆ.ಶಿವಕುಮಾರ್ ಶೆಟ್ಟಿ, ವಿ.ರಾಘವೇಂದ್ರ, ರಾಮು, ಎಚ್.ಎಸ್.ಸೌಮ್ಯ, ಪ್ರಕಾಶ್, ವಿಶ್ವನಾಥ, ವಾಸವಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts