More

    ಸಹಕಾರಿ ರಂಗಕ್ಕೆ ಪ್ರಾಮಾಣಿಕತೆ ಕೊರತೆ- ಮಾಜಿ ಸಚಿವ ಜಿ.ಟಿ.ದೇವೆಗೌಡ ಬೇಸರ

    ಹೊಸಪೇಟೆ: ಕೆಳವರ್ಗ ಸೇರಿ ಎಲ್ಲ ಹಂತಗಳಲ್ಲಿ ಕಾರ್ಯ ನಿರ್ವಹಿಸುವ ಸಹಕಾರಿ ಕ್ಷೇತ್ರದಲ್ಲಿ ಪ್ರಾಮಾಣಿಕತೆ ಕಡಿಮೆಯಾಗುತ್ತಿದೆ ಎಂದು ಕರ್ನಾಟಕ ಸಹಕಾರ ಮಹಾಮಂಡಳದ ಅಧ್ಯಕ್ಷ ಹಾಗೂ ಮಾಜಿ ಸಚಿವ ಜಿ.ಟಿ.ದೇವೆಗೌಡ ಹೇಳಿದರು.

    ನಗರದ ಸಹಕಾರಿ ಕಲ್ಯಾಣ ಮಂಟಪದಲ್ಲಿ ಸಹಕಾರ ಇಲಾಖೆ, ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಜಿಲ್ಲಾ ಸಹಕಾರಿ ಯೂನಿಯನ್ ಹೊಸಪೇಟೆ ಹಾಗೂ ಬಿಡಿಸಿಸಿ ಬ್ಯಾಂಕ್ ಮಂಗಳವಾರ ಆಯೋಜಿಸಿದ್ದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಒಂದು ದಿನದ ರಾಜ್ಯ ಮಟ್ಟದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಸಹಕಾರಿ ಕ್ಷೇತ್ರ ಅಧಿಕಾರ ಮತ್ತು ಗೌರವ ತಂದುಕೊಡುತ್ತದೆ. ಇದರಲ್ಲಿ ಸೇವೆ ಸಲ್ಲಿಸಲು ಹಿಂಜರಿತ ಬೇಡ. ಇದರಿಂದ ವೈಯಕ್ತಿತ, ಸಮಾಜದ ಪ್ರಗತಿಗೆ ಸಹಕಾರಿ ಎಂದರು.

    ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಜೆ.ಎಂ.ಶಿವಪ್ರಸಾದ್ ಮಾತನಾಡಿ, ಸಹಕಾರಿಗಳನ್ನು ಸರಿಯಾದ ಮಾರ್ಗದಲ್ಲಿ ತರಬೇತಿಗೊಳಿಸಬೇಕಾಗಿದೆ. ಸಹಕಾರಿ ಸಂಘಗಳ ಭೇಟಿ, ಸಂಪರ್ಕ ಇಂತಹ ಅನೇಕ ಹಂತದ ಮಾರ್ಗದ ಮೂಲಕ ಸಹಕಾರಿ ಆಂದೋಲನ ಗಟ್ಟಿಗೊಳಿಸಬೇಕಾಗಿದೆ ಎಂದರು.

    ಸಹಕಾರಿ ರಂಗದ ವಿವಿಧ ಸಾಧಕರನ್ನು ಸನ್ಮಾನಿಸಲಾಯಿತು. ಮಹಾಮಂಡಳದ ನಿರ್ದೇಶಕರಾದ ಡಾ.ಶೇಖರಗೌಡ ಮಾಲಿಪಾಟೀಲ್, ಬಾಪುಗೌಡ ಪಾಟೀಲ್, ಬಿಡಿಸಿಸಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರೀಶ, ಪ್ರಮುಖರಾದ ರಾಮಿರೆಡ್ಡಿ, ಬಿ.ಕೆ.ನಾಗರಾಜರಾವ್, ಜೆ.ಎಂ ವೃಷಭೇಂದ್ರಯ್ಯ, ಅಯ್ಯಳಿ ಶಂಕ್ರಪ್ಪ, ಡಿ.ಹೆಚ್ ರಾಮಣ್ಣ, ಎಲ್.ಎಸ್.ಆನಂದ, ಗೌಳಿಕುಮಾರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts