More

  ಟಿಪ್ಪರ್ ಚಾಲಕಗೆ ಜೈಲು ಶಿಕ್ಷೆ

  ಹೊಸಪೇಟೆ: ಇಬ್ಬರ ಸಾವಿಗೆ ಕಾರಣನಾದ ಟಿಪ್ಪರ್ ಚಾಲಕನಿಗೆ ನಗರದ ಜೆಎಂಎಫ್ ನ್ಯಾಯಾಲಯ ಎಂಟು ತಿಂಗಳು ಜೈಲು ಶಿಕ್ಷೆ ಹಾಗೂ 5800 ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ.

  ಇದನ್ನೂ ಓದಿ: ರೈಲಿನಲ್ಲಿ ಮಹಿಳೆಯ ಬ್ಯಾಗ್ ಕಿತ್ತುಕೊಂಡವನಿಗೆ 4 ತಿಂಗಳು ಜೈಲು ಶಿಕ್ಷೆ

  ನಗರದ ಕಾರಿಗನೂರು ಬಡಾವಣೆ ನಿವಾಸಿ ಟಿಪ್ಪರ್ ಚಾಲಕ ಎಂ.ಬಸವರಾಜ್ ಶಿಕ್ಷೆಗೆ ಒಳಗಾಗಿದ್ದಾರೆ. 2017ರ ಫೆ.24ರಂದು ಹೊಸಪೇಟೆಯಿಂದ ಬಳ್ಳಾರಿ ಕಡೆಗೆ ಟಿಪ್ಪರ್‌ನಲ್ಲಿ ಹೊರಟಿದ್ದ ಬಸವರಾಜ್‌, ಬಳ್ಳಾರಿಯಿಂದ ಹೊಸಪೇಟೆಗೆ ಬೈಕ್‌ನಲ್ಲಿ ಬರುತ್ತಿದ್ದ ಜಿಲಾನ್ ಬಾಷಾ ಹಾಗೂ ಹಿಂಬದಿ ಸವಾರ ಜಾಫ‌ರ್ ಸಾಧಿಕ್ ಅವರಿಗೆ ಡಿಕ್ಕಿ ಹೊಡೆದಿದ್ದರಿಂದ ಇಬ್ಬರೂ ಮೃತಪಟ್ಟಿದ್ದರು.

  ಇಲ್ಲಿನ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪಿಐ ರಾಧಕೃಷ್ಣ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಕೋರ್ಟ್‌ಗೆ ಸಲ್ಲಿಸಿದ್ದರು. ಶುಕ್ರವಾರ ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶೆ ತೃಪ್ತಿ ಧರಣಿ ಅವರು ಜೈಲು ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts