More

    ಮೇ 10ರಿಂದ 20ರವರೆಗೆ ತೀವ್ರ ಪ್ರತಿಭಟನೆ, ರಸ್ತೆ ರೋಖೋ, ರೈಲು ತಡೆ ಚಳವಳಿ ನಡೆಸುವುದಾಗಿ ಹೇಳಿದ ಬಿಬಿಎಂಪಿ ಮಾಜಿ ಕಾರ್ಪೊರೇಟರ್, ಮುಖಂಡ ನರಸಿಂಹ ನಾಯ್ಕ

    ಹೊಸಪೇಟೆ: ನಿರಂತರ 75 ದಿನ ಧರಣಿ ಸತ್ಯಾಗ್ರಹ ನಡೆಸಿದರೂ ಸರ್ಕಾರ ಎಸ್ಸಿ, ಎಸ್ಟಿ ಹೋರಾಟ ಸಮಿತಿಯ ಬೇಡಿಕೆಗಳಿಗೆ ಸ್ಪಂದಿಸದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಹೋರಾಟವನ್ನು ತೀವ್ರಗೊಳಿಸಲು ತೀರ್ಮಾನಿಸಲಾಗಿದೆ ಎಂದು ಬೆಂಗಳೂರು ಬಿಬಿಎಂಪಿ ಮಾಜಿ ಕಾರ್ಪೊರೇಟರ್, ಮುಖಂಡ ನರಸಿಂಹ ನಾಯ್ಕ ಹೇಳಿದರು.

    ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಮೇ 10ರಿಂದ 20ರವರೆಗೆ ತೀವ್ರ ಪ್ರತಿಭಟನೆ, ರಸ್ತೆ ರೋಖೋ, ರೈಲು ತಡೆ ಚಳವಳಿ ಸೇರಿದಂತೆ ಗಂಭೀರ ಸ್ವರೂಪದಲ್ಲಿ ಹೋರಾಟ ನಡೆಸುವ ಕುರಿತು ಈಗಾಗಲೇ ನಿರ್ಣಯಿಸಲಾಗಿದೆ. ಈ ಕುರಿತು ಸಮುದಾಯದ ಜನರಿಗೆ, ಹೋರಾಟಗಾರರಿಗೆ ಮನವರಿಕೆ ಮಾಡಿಕೊಡುವುದಕ್ಕಾಗಿ ರಾಜ್ಯಾದ್ಯಂತ ಪ್ರವಾಸ ಹಮ್ಮಿಕೊಂಡಿದ್ದೇವೆ. ಕಲಬುರಗಿ ವಿಭಾಗದ ಮಟ್ಟದ ತಂಡವಾಗಿ ನಾವು ಬಂದಿದ್ದು, ಈ ಭಾಗದಲ್ಲಿ ವಿಜಯನಗರ ಜಿಲ್ಲೆಯಿಂದ ಜನರಲ್ಲಿ ಜಾಗೃತಿ, ಸರ್ಕಾರದ ವಿರುದ್ಧ ಚಳವಳಿ ರೂಪಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿದ್ದೇವೆ ಎಂದರು.

    ಬಿಜೆಪಿ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿಲ್ಲ. ಈ ಹಿಂದೆ ಅಧಿಕಾರಕ್ಕೆ ಬಂದ 24ಗಂಟೆಯಲ್ಲಿ ಮೀಸಲಾತಿ ಹೆಚ್ಚಿಸುವ ಭರವಸೆ ನೀಡಿತ್ತು. ಸರ್ಕಾರದ ಅವಧಿ ಮುಗಿಯುವ ಹಂತಕ್ಕೆ ಬಂದರೂ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಕೊಡುತ್ತಿಲ್ಲ. ಬೆಂಗಳೂರಿನ ವಿಧಾನಸೌಧದ ಎದುರು ಧರಣಿ ನಡೆಸುತ್ತಿರುವ ವಾಲ್ಮೀಕಿ ಶ್ರೀಗಳನ್ನು ಔದಾರ್ಯಕ್ಕೂ ಸಿಎಂ ಮಾತನಾಡಿಸಿಲ್ಲ. ಹೀಗಾದರೇ ಹೇಗೆ..?ಹೀಗಾಗಿ ಸಮುದಾಯದ ಜನರೆಲ್ಲ ಒಗ್ಗಟ್ಟಾಗಿ ಹೋರಾಟ ತೀವ್ರಗೊಳಿಸಲಾಗುವುದು ಅಗತ್ಯವಾಗಿದೆ ಎಂದರು.

    ಮುಖಂಡರಾದ ಸಿಂಗಪುರ ವೆಂಕಟೇಶ, ಶ್ರೀನಿವಾಸ, ನಾನಿಕೇರಿ ತಿಮ್ಮಯ್ಯ, ಬಿ.ಎಸ್.ಜಂಬಯ್ಯ ನಾಯಕ, ಮರಡಿ ಜಂಬಯ್ಯ ನಾಯಕ, ಎಲ್.ಜಿ.ಹೊನ್ನಪ್ಪ, ವೆಂಕಟರಮಣ, ಎಂ.ಸಿ.ವೀರಸ್ವಾಮಿ, ನಾಗರತ್ನಮ್ಮ, ಸೋಮಶೇಖರ ಬಣ್ಣದ ಮನಿ ಇದ್ದರು.

    ಮೇ 20ಕ್ಕೆ ವಿಜಯನಗರ ಜಿಲ್ಲೆ ಬಂದ್: ಸರ್ಕಾರದ ವಿಳಂಬ ನೀತಿ ಖಂಡಿಸಿ ಮೇ 20ರಂದು ವಿಜಯನಗರ ಜಿಲ್ಲೆೆ ಬಂದ್‌ಗೆ ಕರೆ ನೀಡಲಾಗುತ್ತಿದೆ ಎಂದು ಸಮುದಾಯದ ಮುಖಂಡ ಜಂಬಯ್ಯ ನಾಯಕ ಹೇಳಿದರು. ರಾಜ್ಯ ಕಾರ್ಯಕಾರಿಣಿಗೆ ನಗರಕ್ಕೆ ಆಗಮಿಸಿದ್ದ ಸಿಎಂ ಬಸವರಾಜ ಬೊಮ್ಮಾಯಿ ನಮ್ಮ ಮನವಿ ಆಲಿಸಲೂ ಬರಲಿಲ್ಲ. ಸರ್ಕಾರ ನಮ್ಮನ್ನು ವೋಟ್ ಬ್ಯಾಂಕ್‌ನ್ನಾಗಿ ಪರಿವರ್ತಿಸಿಕೊಂಡಿದೆ ಹೊರತು ಬೇಡಿಕೆಗೆ ಮನ್ನಣೆ ನೀಡುತ್ತಿಲ್ಲ. ಹೀಗಾಗಿ ಜಿಲ್ಲಾ ಘಟಕದಿಂದ ವಿಜಯನಗರ ಜಿಲ್ಲೆಗೆ ಬಂದ್‌ಗೆ ನಿರ್ಣಯಿಸಲಾಗಿದೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts