More

    ರಾಜಕಾಲುವೆ ದಾರಿ ಉಳಿವಿಗೆ ಕ್ರಮ

    ಹೊಸದುರ್ಗ: ರಾಜಕಾಲುವೆಗಳ ಉಳಿವಿಗಾಗಿ, ಒತ್ತುವರಿ ಕಾರ್ಯವನ್ನು ಶೀಘ್ರ ಆರಂಭಿಸಲಾಗುವುದು ಎಂದು ಶಾಸಕ ಗೂಳಿಹಟ್ಟಿ ಡಿ.ಶೇಖರ್ ತಿಳಿಸಿದರು.

    ಪಟ್ಟಣದ ಸದ್ಗುರು ಆಶ್ರಮದ ಬಳಿ ಸೋಮವಾರ ಕಂದಾಯ ಹಾಗೂ ಭೂಮಾಪನ ಇಲಾಖೆ ಅಧಿಕಾರಿಗಳೊಂದಿಗೆ ರಾಜಕಾಲುವೆ ಒತ್ತುವರಿ ಪರಿಶೀಲನೆ ನಡೆಸಿ ಮಾತನಾಡಿದರು.

    ಆಶ್ರಮದ ಹಿಂಭಾಗದ ಗುಡ್ಡದಿಂದ ಅರಂಭವಾಗುವ ರಾಜಕಾಲುವೆ ಅಂದಾಜು 60 ಆಡಿ ಆಗಲವಿದ್ದು, ಕಂದಾಯ ಇಲಾಖೆಯ ದಾಖಲೆಗಳಲ್ಲಿ ಸ್ಪಷ್ಟವಾಗಿ ದಾಖಲಾಗಿದೆ. ಗೊರವಿನಕಲ್ಲು ಸರ್ವೇ ನಂ 86ರಲ್ಲಿ ಖಾಸಗಿ ಲೇಔಟ್‌ಗಳನ್ನು ನಿರ್ಮಾಣ ಮಾಡುವಾಗ ರಾಜಾಕಾಲುವೆ ಮಾರ್ಗ ಬದಲಿಸುವ ಜತೆಗೆ ಒತ್ತುವರಿ ಮಾಡಿ ಕಾಲುವೆಯನ್ನು ಕಿರಿದಾಗಿಸಲಾಗಿದೆ ಎಂದು ಆರೋಪಿಸಿದರು.

    ರಾಜಕಾಲುವೆ ಒತ್ತುವರಿಯಿಂದಾಗಿ ಮಳೆ ಕಾಲ ಸೇರಿ ವಿವಿಧ ಸಂದರ್ಭದಲ್ಲಿ ನೀರು ಸರಾಗವಾಗಿ ಹರಿಯಲು ಸಮಸ್ಯೆ ಆಗಿದೆ. ಜನವಸತಿ ಪ್ರದೇಶಕ್ಕೆ ನೀರು ನುಗ್ಗಿ, ಸಮಸ್ಯೆ ಆಗುತ್ತಿದೆ ಎಂದರು.

    ಪಟ್ಟಣದ ವ್ಯಾಪ್ತಿಯಲ್ಲಿ ಬಡವಾಣೆಗಳು ನಿರ್ಮಾಣಗೊಳ್ಳುತ್ತಿದ್ದು, ಭವಿಷ್ಯದಲ್ಲಿ ರಾಜಕಾಲುವೆ ಒತ್ತುವರಿ ಆಗಿರುವುದರಿಂದ ಅಪಾಯ ಸಂಭವ ಹೆಚ್ಚು ಇದೆ. ಆದ್ದರಿಂದ ಎಷ್ಟೇ ಪ್ರಭಾವಶಾಲಿಗಳು ಆಗಿದ್ದರೂ ಒತ್ತುವರಿ ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

    ಒತ್ತುವರಿ ತೆರವುಗೊಳಿಸಲು ಅಗತ್ಯ ದಾಖಲೆಗಳನ್ನು ಸಿದ್ದಪಡಿಸಿಕೊಂಡು ಕಂದಾಯ ಹಾಗೂ ಭೂಮಾಪನ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಬೇಕು. ತಾಲೂಕು ಆಡಳಿತ ಹಾಗೂ ಪುರಸಭೆ ಅಧಿಕಾರಿಗಳು ಈ ಕಾರ್ಯದಲ್ಲಿ ಪಾಲ್ಗೊಂಡು ರಾಜಕಾಲುವೆ ಒತ್ತುವರಿ ತೆರವುಗೊಳಿಸಲೇ ಬೇಕು ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts