More

    ಹುಟ್ಟೂರಲ್ಲಿ ಬೀಡು ಬಿಟ್ಟ ವಲಸಿಗರು

    ಹೊಸದುರ್ಗ: ಪಟ್ಟಣದಲ್ಲಿ ಕರೊನಾ ರೋಗದ ನಿರ್ಬಂಧದಿಂದ ಜನರು ಮನೆ ಸೇರಿದ್ದರೆ ಹಳ್ಳಿ ಜನರಲ್ಲಿ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೊರ ರಾಜ್ಯ ಹಾಗೂ ಜಿಲ್ಲೆಗಳಿಂದ ಆಗಮಿಸಿರುವ ಜನರು ಆತಂಕ ಹೆಚ್ಚಾಗಲು ಕಾರಣವಾಗಿದ್ದಾರೆ.

    ಪಟ್ಟಣ ಸೇರಿ ತಾಲೂಕಿನ 25 ಸಾವಿರ ಜನ ಕಳೆದ ಒಂದು ದಶಕದಿಂದ ಉದ್ಯೋಗಕ್ಕಾಗಿ ಮಹಾರಾಷ್ಟ್ರ, ತಮಿಳುನಾಡು, ಕೇರಳ ಹಾಗೂ ಬೆಂಗಳೂರಿಗೆ ಹೋಗಿ ಅಲ್ಲೇ ನೆಲೆಸಿದ್ದರು. ಪ್ರತಿವರ್ಷದಂತೆ ಈ ಬಾರಿಯೂ ಯುಗಾದಿ ಹಬ್ಬಕ್ಕೆ ಬಂದವರು ಊರಿನಲ್ಲಿಯೇ ಉಳಿದಿದ್ದಾರೆ.

    ಬೆಂಗಳೂರಿನಿಂದ ಬಂದವರಿಗಿಂತ ಕೇರಳದಿಂದ ಬಂದವರು ಸೋಂಕು ತಂದಿದ್ದಾರೆ ಎನ್ನುವ ಆತಂಕ ಜನರಲ್ಲಿ ಹೆಚ್ಚಾಗಿದೆ. ಅಪರೂಪಕ್ಕೆ ಊರಿಗೆ ಬಂದವರು ಲಾಕ್‌ಡೌನ್‌ಗೆ ಸಿಲುಕಿ ಊರಿನಲ್ಲಿಯೇ ಉಳಿಯುವ ಅನಿವಾರ್ಯತೆಗೆ ಸಿಲುಕಿದ್ದಾರೆ.

    ವಿದೇಶದಿಂದ ಬಂದವರು ಹಾಗೂ ವಿಮಾನದಲ್ಲಿ ಪ್ರಯಾಣಿಸಿದವರ ಮಾಹಿತಿ ಮಾತ್ರ ಅಧಿಕೃತವಾಗಿ ತಾಲೂಕು ಆಡಳಿತಕ್ಕೆ ದೊರೆಯುತ್ತಿದೆ. ಆದರೆ, ಕೇರಳ ಮತ್ತಿತರ ಕಡೆಗಳಿಂದ ಬಂದವರ ಮಾಹಿತಿ ಸಿಗುತ್ತಿಲ್ಲ. ಸ್ಥಳೀಯರು ಕೂಡ ಮಾಹಿತಿ ನೀಡಲು ಹಿಂಜರಿಯುತ್ತಿದ್ದಾರೆ. ಇದರೊಂದಿಗೆ ಗಾಳಿ ಸುದ್ದಿ ಹಾವಳಿಯಿಂದ ಹಳ್ಳಿ ಜನ ಆತಂಕಗೊಂಡಿದ್ದಾರೆ.

    20 ಜನರಿಗೆ ಬಿಸಿಎಂ ಹಾಸ್ಟೆಲ್‌ನಲ್ಲಿ ವ್ಯವಸ್ಥೆ: ಶನಿವಾರ ಮುಂಜಾನೆ ಮಂಡ್ಯ ಜಿಲ್ಲೆಯಲ್ಲಿ ಕಬ್ಬಿನ ಗದ್ದೆಗಳಲ್ಲಿ ಕೆಲಸಕ್ಕೆ ಹೋಗಿದ್ದ ವಿಜಾಪುರದ 20 ಜನರ ತಂಡವನ್ನು ಲಾರಿಯಲ್ಲಿ ಕರೆದುಕೊಂಡು ಬಂದವರು ತಾಲೂಕಿನ ಶ್ರೀರಾಂಪುರದಲ್ಲಿ ಇಳಿಸಿ ಪರಾರಿಯಾಗಿದ್ದಾರೆ. ವಿಷಯ ತಿಳಿದ ತಾಲೂಕು ಆಡಳಿತ ಸಂಕಷ್ಟಕ್ಕೆ ಸಿಲುಕಿದ್ದ ಜನರನ್ನು ತಪಾಸಣೆ ನಡೆಸಿ ಬಿಸಿಎಂ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts