More

    ರಾಗಿ ಫಾರಂನಲ್ಲಿ ಎರಡು ಚಿರತೆ ಪ್ರತ್ಯಕ್ಷ

    ಹೊಸದುರ್ಗ: ಪಟ್ಟಣದ ಕುಂಚಿಟಿಗ ಸಂಸ್ಥಾನಮಠ ಸಮೀಪದ ರಾಗಿ ಫಾರಂನಲ್ಲಿ ಕಳೆದ ಮೂರು ದಿನಗಳಿಂದ 2 ಚಿರತೆಗಳು ಓಡಾಡುತ್ತಿದ್ದು ಜನರಲ್ಲಿ ಆತಂಕ ಮೂಡಿಸಿವೆ.

    ಜನವರಿ ತಿಂಗಳಲ್ಲಿ ಇದೇ ಜಾಗದಲ್ಲಿ ಎರಡು ಚಿರತೆಗಳನ್ನು ಸೆರೆ ಹಿಡಿಯಲಾಗಿತ್ತು. ಕುವೆಂಪು ಬಡಾವಣೆಯ ನಿಜಲಿಂಗಪ್ಪ ಶಾಲೆ ಹಿಂಭಾಗದ ದಾಳಿಂಬೆ ತೋಟದಲ್ಲಿ ಜನವರಿ ತಿಂಗಳಲ್ಲಿ ಕಾಣಿಸಿಕೊಂಡಿದ್ದ ಚಿರತೆಗಳು ಮನೆಯಲ್ಲಿ ಕಟ್ಟಿಹಾಕಿದ್ದ ಹಸುವಿನ ಮೇಲೆ ದಾಳಿ ನಡೆಸಿ ಅದನ್ನು ತಿಂದು ಹಾಕಿದ್ದವು. ನಂತರ ಅರಣ್ಯ ಇಲಾಖೆ ನಡೆಸಿದ ಕಾರ್ಯಾಚರಣೆಯಲ್ಲಿ ಸೆರೆಯಾಗಿದ್ದವು.

    ಮೂರಕ್ಕೂ ಹೆಚ್ಚು ಚಿರತೆಗಳಿರುವ ಸಂಗತಿ ಸಿಸಿ ಕ್ಯಾಮರಾದಿಂದ ಬಯಲಾಗಿತ್ತು. ಎರಡು ಚಿರತೆಗಳನ್ನು ಹಿಡಿದ ನಂತರ ಮತ್ತೆ ಅವು ಕಾಣಿಸಿಕೊಂಡಿರಲಿಲ್ಲ. ಕಳೆದ ಮೂರ‌್ನಾಲ್ಕು ದಿನಗಳಿಂದ ಎರಡು ಚಿರತೆಗಳು ತೋಟದೊಳಗೆ ಓಡಾಡುತ್ತಿರುವ ಕುರುಹು ಸಿಕ್ಕಿದೆ. ಸೋಮವಾರ ರಾತ್ರಿ ರಾಗಿ ಫಾರಂ ಮಾಲೀಕರ ಪುತ್ರ ನಂದೀಶ್‌ಗೆ ಕಾಣಿಸಿಕೊಂಡಿವೆ.

    ಚಿರತೆ ಕಾಣಿಸಿಕೊಂಡ ಸ್ಥಳದ ಸಮೀಪವೇ ಡಾಲರ್ಸ್ ಕಾಲನಿ, ಸದ್ಗುರು ಆಶ್ರಮವಿದ್ದು, ನಿತ್ಯ ವಾಯುವಿಹಾರಕ್ಕೆ ಬರುವವರು ಗುಂಪು ಗುಂಪಾಗಿ ಓಡಾಡುವಂತಾಗಿದೆ. ಅರಣ್ಯ ಇಲಾಖೆ ರಾಗಿ ಫಾರಂನಲ್ಲಿ ಬೋನು ಅಳವಡಿಸಿದೆ.

    ಎರಡು ಚಿರತೆಗಳು ಕಾಣಿಸಿಕೊಂಡ ಮಾಹಿತಿ ಇದ್ದು, ಅವು ಸೆರೆಯಾಗುವ ತನಕ ಕಾರ್ಯಾಚರಣೆ ಮುಂದುವರಿಯಲಿದೆ. ವಾಕ್ ಮಾಡುವ ಜನರು ಎಚ್ಚರದಿಂದ ಇರಬೇಕೆಂದು ಅರಣ್ಯ ರಕ್ಷಣಾಧಿಕಾರಿ ರಾಘವೇಂದ್ರ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts