More

    ಅಗತ್ಯ ವಸ್ತುಗಳ ಖರೀದಿಗೆ ವ್ಯವಸ್ಥೆ

    ಹೊಸದುರ್ಗ: ಪಟ್ಟಣದಲ್ಲಿ ಬೆಳಗ್ಗೆ 6 ರಿಂದ 9 ರವರೆಗೆ ಸಾಮೂಹಿಕ ಅಂತರ ಕಾಯ್ದುಕೊಂಡು ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಪಿಎಸ್‌ಐ ಶಿವಕುಮಾರ್ ಹೇಳಿದರು.

    ಲಾಕ್‌ಡೌನ್ ಮುಂದುವರಿಕೆ ಪಾಲಿಸುವ ಕುರಿತು ಇಲ್ಲಿನ ಗಣೇಶ ಸದನದಲ್ಲಿ ಮಂಗಳವಾರ ಪೊಲೀಸ್ ಇಲಾಖೆ ಆಯೋಜಿಸಿದ್ದ ವರ್ತಕರ ಸಭೆಯಲ್ಲಿ ಮಾತನಾಡಿದರು.

    ಸರ್ಕಾರದ ಆದೇಶದ ಮೇರೆಗೆ ಮೇ 3 ರವರೆಗೆ ಕಡ್ಡಾಯವಾಗಿ ಲಾಕ್‌ಡೌನ್ ಪಾಲಿಸಬೇಕು. ಈ ಅವಧಿಯಲ್ಲಿ ಮನೆಯ ಬಾಗಿಲಿಗೆ ಅಗತ್ಯ ವಸ್ತುಗಳನ್ನು ತಲುಪಿಸುವ ವ್ಯವಸ್ಥೆ ಮಾಡಲಾಗಿತ್ತು. ವ್ಯವಸ್ಥೆಯಲ್ಲಿ ಕಂಡುಬಂದ ಕೆಲವು ದೋಷಗಳಿಂದ ಹಾಗೂ ಕೆಲವರು ಕದ್ದುಮುಚ್ಚಿ ಅಂಗಡಿ ತೆರೆದು ವ್ಯಾಪಾರ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಬೆಳಗ್ಗೆ ಮಾರುಕಟ್ಟೆ ವ್ಯವಸ್ಥೆ ಮಾಡಲಾಗಿದೆ ಎಂದರು.

    ಉದ್ಯಮಿ ಪ್ರದೀಪ್ ಮಾತನಾಡಿದರು. ಎಪಿಎಂಸಿ ಅಧ್ಯಕ್ಷ ಎಚ್.ಸಿ.ಮಲ್ಲಿಕಾರ್ಜುನ್, ಪುರಸಭೆ ಸದಸ್ಯ ನಾಗರಾಜು, ಶಂಕರಪ್ಪ, ವರ್ತಕರ ಸಂಘದ ಅಧ್ಯಕ್ಷ ಇ.ಟಿ.ಬಾಹುಬಲಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts