More

    ವೆಂಟಿಲೇಟರ್ ಸಹಿತ ಅಗತ್ಯ ಸೌಲಭ್ಯ

    ಹೊಸದುರ್ಗ: ಕರೊನಾ ರೋಗದ ಚಿಕಿತ್ಸೆಗಾಗಿ ವೆಂಟಿಲೇಟರ್ ಸೇರಿ ಅಗತ್ಯ ಸೌಲಭ್ಯಗಳನ್ನು ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಒದಗಿಸಲಾಗುವುದು ಎಂದು ಜಿಪಂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಡಾ.ಕೆ.ಅನಂತ್ ಹೇಳಿದರು.

    ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಕರೊನಾ ಸೋಂಕು ತಡೆ ಹಾಗೂ ನಿರ್ವಹಣೆ ಕುರಿತು ಆರೋಗ್ಯ ಇಲಾಖೆ ಸಿಬ್ಬಂದಿಯೊಂದಿಗೆ ಸಭೆ ನಡೆಸಿ ಮಾತನಾಡಿದರು.

    ಕರೊನಾ ವಿರುದ್ಧ ಹೋರಾಡಲು ಸರ್ಕಾರ ಅಗತ್ಯ ಕ್ರಮ ತೆಗೆದುಕೊಂಡಿದೆ. ತಾಲೂಕು ಆಸ್ಪತ್ರೆಯಲ್ಲಿ ಐಸೋಲೇಷನ್ ವಾರ್ಡ್ ಸಿದ್ಧವಾಗಿದ್ದು ತುರ್ತಾಗಿ ವೆಂಟಿಲೇಟರ್ ಸೌಲಭ್ಯ ಒದಗಿಸಲಾಗುವುದು. ಇದಕ್ಕೆ ಅವಶ್ಯಕ ಟೆಕ್ನೀಷಿಯನ್ ಒದಗಿಸುವ ಜತೆಗೆ ಸ್ಥಳೀಯ ವೈದ್ಯರಿಗೆ ತರಬೇತಿ ನೀಡಲಾಗುವುದು ಎಂದರು.

    ತಾಲೂಕಿನ ಜನರನ್ನು ಕರೊನಾ ರೋಗದಿಂದ ಮುಕ್ತಗೊಳಿಸಲು ಆರೋಗ್ಯ ಇಲಾಖೆ ಸಿಬ್ಬಂದಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶೀಘ್ರವೇ ಗುಣಮಟ್ಟದ ಮಾಸ್ಕ್, ಸ್ಯಾನಿಟೈಸರ್ ಒದಗಿಸಲಾಗುವುದು ಎಂದರು.

    ಕೀಲುಮೂಳೆ ತಜ್ಞ ಡಾ. ಸಂಜಯ್ ಮಾತನಾಡಿ, ರೋಗದ ಆತಂಕಕ್ಕೀಡಾದ ಜನರು ಸುಮ್ಮನೆ ಆಸ್ಪತ್ರೆಗೆ ಬರುತ್ತಿರುವುದರಿಂದ ಒತ್ತಡ ಹೆಚ್ಚಾಗಿದೆ. ಇತರೆ ರೋಗಿಗಳಿಂದ ಕರೊನಾ ಶಂಕಿತರನ್ನು ಬೇರ್ಪಡಿಸಲು ಟಿಎಚ್‌ಒ ಕಚೇರಿಯ ಕಟ್ಟಡದಲ್ಲಿ ಕರೊನಾ ಕೇರ್ ಸೆಂಟರ್ ತೆರೆಯಲಾಗುವುದು ಎಂದರು.

    ವೈದ್ಯರಾದ ಡಾ. ಸುದರ್ಶನ್, ಡಾ.ಪ್ರಶಾಂತ್, ಡಾ. ಸುಧಾ, ಡಾ.ರೂಪಾ, ಫಾರ್ಮಸಿಸ್ಟ್ ರಾಮಚಂದ್ರಪ್ಪ ಇದ್ದರು.

    ಕರೊನಾ ರೋಗ ತಡೆಗಟ್ಟಲು ತಾಲೂಕು ಆಸ್ಪತ್ರೆಯಲ್ಲಿ ಸಿಬ್ಬಂದಿಗೆ ಸರಿಯಾದ ವ್ಯವಸ್ಥೆಯಿಲ್ಲ ಎನ್ನುವ ವರದಿ ಶುಕ್ರವಾರ ವಿಜಯವಾಣಿಯಲ್ಲಿ ಪ್ರಕಟವಾದ ಹಿನ್ನೆಲೆಯಲ್ಲಿ ಜಿಪಂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಡಾ.ಕೆ.ಅನಂತ್ ಆಸ್ಪತ್ರೆಗೆ ಭೇಟಿ ನೀಡಿ ಸಭೆ ನಡೆಸಿ ವ್ಯವಸ್ಥೆ ಸರಿಪಡಿಸುವ ಕ್ರಮ ತೆಗೆದುಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts