More

    ಗೌರವಯುತ ಬದುಕಿಗೆ ಬದು ನಿರ್ಮಾಣ ಅಭಿಯಾನ ಸಹಕಾರಿ

    ಹೊಸದುರ್ಗ: ಸಣ್ಣ ರೈತರು ತಮ್ಮ ಜಮೀನಿನಲ್ಲಿಯೇ ಗೌರವಯುತವಾಗಿ ಕೃಷಿ ಕಾಯಕ ಮಾಡಲು ಬದು ನಿರ್ಮಾಣ ಅಭಿಯಾನದಡಿ ಅವಕಾಶ ಕಲ್ಪಿಸಲಾಗಿದೆ ಎಂದು ಶಾಸಕ ಗೂಳಿಹಟ್ಟಿ ಡಿ.ಶೇಖರ್ ತಿಳಿಸಿದರು.

    ತಾಲೂಕಿನ ಕಾರೇಹಳ್ಳಿಯಲ್ಲಿ ಸೋಮವಾರ ಕೃಷಿ ಹಾಗೂ ಪಂಚಾಯತ್‌ರಾಜ್ ಇಲಾಖೆ ಆಯೋಜಿಸಿದ್ದ ಬದು ನಿರ್ಮಾಣ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

    ನರೆಗಾ ಯೋಜನೆಯಡಿ ಸಣ್ಣ ರೈತರ ಜಮೀನುಗಳಲ್ಲಿ ಬದು ನಿರ್ಮಾಣ ಮಾಡಲು ಪಂಚಾಯತ್‌ರಾಜ್ ಇಲಾಖೆ ವಿಶೇಷ ಅಭಿಯಾನ ನಡೆಸುತ್ತಿದೆ. ಲಾಕ್‌ಡೌನ್‌ನಿಂದ ಹಳ್ಳಿಗಳಿಗೆ ಹಿಂದಿರುಗಿರುವ ಜನರಿಗೆ ತಮ್ಮ ಜಮೀನಿನಲ್ಲಿಯೇ ಕೆಲಸ ಕೊಡುವ ಜತೆಗೆ ನೀರಿನ ಸಂರಕ್ಷಣೆಗೆ ಒತ್ತು ನೀಡುವುದು ಅಭಿಯಾನದ ಉದ್ದೇಶವಾಗಿದೆ. ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

    ಕೃಷಿ ಇಲಾಖೆ ಎಡಿ ಸಿ.ಎಸ್. ಈಶ್ವರ್ ಮಾತನಾಡಿ, ಇಳಿಜಾರಿಗೆ ಅಡ್ಡವಾಗಿ ಬದು ನಿರ್ಮಿಸುವ ಮೂಲಕ ಮಣ್ಣಿನ ಸವಕಳಿ ತಡೆ ಜತೆಗೆ ಮಣ್ಣಿನ ಫಲವತ್ತತೆ ಸಂರಕ್ಷಣೆಗೆ ಆದ್ಯತೆ ನೀಡಲಾಗಿದೆ. ಪ್ರತಿ ಕುಟುಂಬಕ್ಕೆ 30 ಸಾವಿರ ರೂ. ವರೆಗೆ ಕೂಲಿ ಹಣ ಪಡೆಯಲು ಅವಕಾಶವಿದೆ. ಬಿಪಿಎಲ್ ಕಾರ್ಡ್ ಹೊಂದಿರುವ ಸಣ್ಣ ರೈತರು ಈ ಅವಕಾಶ ಪಡೆಯಬಹುದು ಎಂದರು.

    ಕಾರ್ಯಕ್ರಮದಲ್ಲಿ ತಾಪಂ ಇಒ ಜಾನಕೀರಾಮ್, ಗ್ರಾಪಂ ಅಧ್ಯಕ್ಷ ರಾಮಣ್ಣ, ಸುರೇಶ್ ಸಾಗರ್, ಮಂಜುನಾಥ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts