More

    ಕ್ರೀಡಾಪಟುಗಳಿಗೆ ಬೇಕು ಅವಕಾಶ

    ಹೊಸದುರ್ಗ; ನೈಜ ಹಾಗೂ ಅರ್ಹತೆ ಹೊಂದಿರುವ ಕ್ರೀಡಾಪಟುಗಳ ಪ್ರತಿಭೆ ಅನಾವರಣಕ್ಕೆ ಸೂಕ್ತ ಅವಕಾಶ ದೊರೆತರೆ ಮಾತ್ರ ಕ್ರೀಡಾಕ್ಷೇತ್ರದ ಅಭಿವೃದ್ಧಿ ಸಾಧ್ಯ ಎಂದು ಕುಂಚಿಟಿಗ ಮಠದ ಶ್ರೀ ಶಾಂತವೀರ ಸ್ವಾಮೀಜಿ ತಿಳಿಸಿದರು.

    ಸಂಗೊಳ್ಳಿ ರಾಯಣ್ಣ ಗೌರವಾರ್ಥ ಪಟ್ಟಣದ ಸರ್ಕಾರಿ ಕ್ಷೇತ್ರ ಮಾದರಿ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ರಾಯಣ್ಣ ಕ್ರಿಕೆಟ್ ಲೀಗ್ ಪಂದ್ಯಾವಳಿ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

    ವಿಶ್ವದಲ್ಲಿಯೇ ಜನಸಂಖ್ಯೆಯಲ್ಲಿ ಅಗ್ರಗಣ್ಯ ಸ್ಥಾನದಲ್ಲಿರುವ ಭಾರತ ಕ್ರೀಡಾ ಕ್ಷೇತ್ರದ ಸಾಧನೆಯಲ್ಲಿ ಮಾತ್ರ ಹಿಂದುಳಿದಿರುವುದು ವಿಪರ್ಯಾಸ. ಪುಟ್ಟ ದೇಶಗಳಾದ ಅಸ್ಟ್ರೇಲಿಯಾ, ಜಪಾನ್ ಕ್ರೀಡೆಯಲ್ಲಿ ಹೆಚ್ಚಿನ ಸಾಧನೆ ಮಾಡಲು ಅಲ್ಲಿರುವ ಪ್ರೋತ್ಸಾಹ ಕಾರಣವಾಗಿದೆ. ಭಾರತದಲ್ಲಿ ಅರ್ಹತೆಗಿಂತ ಪ್ರಭಾವಕ್ಕೆ ಹೆಚ್ಚಿನ ಮನ್ನಣೆ ದೊರೆಯುತ್ತಿರುವುದೆ ಹಿನ್ನೆಡೆಗೆ ಕಾರಣ ಎಂದು ವಿಷಾದಿಸಿದರು.

    ಕನಕ ಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿ, ದೇಶ ಹಾಗೂ ಮನಸ್ಸುಗಳನ್ನು ಒಗ್ಗೂಡಿಸುವ ಶಕ್ತಿ ಕ್ರೀಡೆಗಿದೆ. ಕ್ರೀಡಾಕ್ಷೇತ್ರಕ್ಕೆ ಜಾತಿ, ಯಾರ ಪ್ರಭಾವದ ಸೋಂಕು ತಗುಲಬಾರದು. ಕ್ರೀಡಾಪಟುಗಳು ಸೋಲು ಗೆಲುವಿನ ಬಗ್ಗೆ ಚಿಂತಿಸದೆ ಸ್ಪರ್ಧಾ ಮನೋಭಾವನೆಯಿಂದ ಪಾಲ್ಗೊಳ್ಳಬೇಕು ಎಂದು ಸಲಹೆ ನೀಡಿದರು.

    ಮಾಜಿ ಶಾಸಕ ಬಿ.ಜಿ.ಗೋವಿಂದಪ್ಪ ಮಾತನಾಡಿ, ಕ್ರೀಡಾಕೂಟ ಆಯೋಜಿಸಿ ರಾಯಣ್ಣನಂತಹ ಹುತಾತ್ಮನನ್ನು ಸ್ಮರಿಸಿಕೊಳ್ಳುವುದು ಮಾದರಿ ಕಾರ್ಯ. ಬದುಕಿನ ಕ್ರಿಯಾಶೀಲತೆಗೆ ಕ್ರೀಡೆ ಸಹಕಾರಿ ಎಂದರು.

    ನಾಯಕ ಸಮಾಜದ ಅಧ್ಯಕ್ಷ ತುಂಬಿನಕೆರೆ ಬಸವರಾಜ್, ಕುರುಬ ಸಮಾಜದ ಅಧ್ಯಕ್ಷ ಮಂಜುನಾಥ್, ಬೆಸ್ಕಾಂ ಎಇಇ ತಿರುಪತಿನಾಯ್ಕ, ಅರುಣ್, ಗೋವಿಂದಪ್ಪ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts