More

    ಲಾಕ್​ಡೌನ್ ನಿಯಮಗಳನ್ನು ಗಾಳಿಗೆ ತೂರಿ ಪುತ್ರನ ವಿವಾಹ ನೆರವೇರಿಸಿದ ಮಾಜಿ ಶಾಸಕ; ಮಾಸ್ಕ್​ ಇರಲಿಲ್ಲ, ಸಾಮಾಜಿಕ ಅಂತರ ಪಾಲನೆಯಾಗಿಲ್ಲ…!

    ಚಿತ್ರದುರ್ಗ: ಲಾಕ್​ಡೌನ್​ ಇದೆ. ಸಮಾರಂಭಗಳನ್ನು ನಡೆಸಬೇಡಿ..ಹಾಗೊಮ್ಮೆ ಅನಿವಾರ್ಯತೆ ಇದ್ದರೂ ಸರ್ಕಾರಕ್ಕೆ ಮಾಹಿತಿ ನೀಡಿ, ಅನುಮತಿ ಪಡೆಯಬೇಕು. ಆದರೆ ಸಾಮಾಜಿಕ ಅಂತರದ ನಿಯಮ ಪರಿಪಾಲನೆ ಆಗಲೇಬೇಕು.
    ಆದರೆ ಇಲ್ಲೋರ್ವ ಮಾಜಿ ಶಾಸಕರು ಈ ಎಲ್ಲ ನಿಯಮಗಳನ್ನೂ ಗಾಳಿಗೆ ತೂರಿ, ತಮಗೂ ಅದಕ್ಕೂ ಸಂಬಂಧವೇ ಇಲ್ಲವೇನೋ ಎಂಬಂತೆ ಪುತ್ರನ ವಿವಾಹ ಕಾರ್ಯ ನೆರವೇರಿಸಿದ್ದಾರೆ.

    ಹೊಸದುರ್ಗ ತಾಲೂಕಿನ ಕಾಂಗ್ರೆಸ್ ಮಾಜಿ ಶಾಸಕ ಬಿ.ಜಿ. ಗೋವಿಂದಪ್ಪ ಅವರು ತಾಲೂಕು ಆಡಳಿತನ ಅನುಮತಿ ಪಡೆಯದೆ ಮಗನ ವಿವಾಹ ಮಾಡಿದ್ದಾರೆ. ಮಾಜಿ ಶಾಸಕರ ಮನೆಯಲ್ಲಿ ವಿವಾಹವಾಗಿದ್ದರೂ ಜಿಲ್ಲಾಡಳಿತ, ತಾಲೂಕು ಆಡಳಿತಗಳು ಸುಮ್ಮನೆ ಇವೆ.

    ಹೊಸದುರ್ಗದ ಬೆಲಗೂರು ಗ್ರಾಮದಲ್ಲಿ ನಡೆದ ವಿವಾಹದಲ್ಲಿ ಹಲವರು ಪಾಲ್ಗೊಂಡಿದ್ದರು. ಇಲ್ಲಿ ಸಾಮಾಜಿಕ ಅಂತರ ನಿಯಮ ಪಾಲನೆಯಾಗಿಲ್ಲ. ಯಾರೂ ಮಾಸ್ಕ್​ ಕೂಡ ಧರಿಸಿರಲಿಲ್ಲ. ಮಾಜಿ ಸಂಸದ ಬಿ.ಎನ್​.ಚಂದ್ರಪ್ಪ, ಚಳ್ಳಕೆರೆ ಹಾಲಿ ಶಾಸಕ ರಘುಮೂರ್ತಿ ಇತರರು ಭಾಗವಹಿಸಿದ್ದರು. ಬಿ.ಎನ್​ ಚಂದ್ರಪ್ಪ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಶೇರ್​ ಮಾಡಿಕೊಂಡಿದ್ದಾರೆ.

    ಈ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿವೆ. ಜನರಿಗೊಂದು ಕಾನೂನು, ರಾಜಕಾರಣಿಗಳಿಗೊಂದು ಕಾನೂನಾ? ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)

    ಲಾಕ್​ಡೌನ್ ನಿಯಮಗಳನ್ನು ಗಾಳಿಗೆ ತೂರಿ ಪುತ್ರನ ವಿವಾಹ ನೆರವೇರಿಸಿದ ಮಾಜಿ ಶಾಸಕ; ಮಾಸ್ಕ್​ ಇರಲಿಲ್ಲ, ಸಾಮಾಜಿಕ ಅಂತರ ಪಾಲನೆಯಾಗಿಲ್ಲ...!

    ದಾರಿ ಮಧ್ಯ ನೋಟು ನೋಡಿದ ಸ್ಥಳೀಯರಿಗೆ ಭಯ..ಅದರ ಮೇಲೆ ಮತ್ತೊಂದು ವಸ್ತು ಇದ್ದಿದ್ದರಿಂದ ಉದ್ದೇಶಪೂರ್ವಕವಾಗಿಯೇ ಇಟ್ಟಿದ್ದಾರೆಂಬ ಶಂಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts