More

    ಬೆಲಗೂರಲ್ಲಿ ಶ್ರೀ ವೀರಭದ್ರಸ್ವಾಮಿ ಗುಗ್ಗಳೋತ್ಸವ

    ಹೊಸದುರ್ಗ: ತಾಲೂಕಿನ ಬೆಲಗೂರು ಗ್ರಾಮದಲ್ಲಿ ಮಂಗಳವಾರ ಶ್ರೀ ವೀರಭದ್ರೇಶ್ವರ ಸ್ವಾಮಿ 46ನೇ ವರ್ಷದ ಗುಗ್ಗಳ ಮಹೋತ್ಸವ ಹಾಗೂ ಕೆಂಡ ಹಾಯುವ ಧಾರ್ಮಿಕ ಕಾರ್ಯಕ್ರಮ ಕಂಚುಗಲ್ಲು ಬಿದರೆ ದೊಡ್ಡಮಠದ ಶ್ರೀ ಪ್ರಭುಕುಮಾರ ಸ್ವಾಮೀಜಿ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

    ಶ್ರೀ ವೀರಭದ್ರಸ್ವಾಮಿ ಕೆಂಡ ಹಾಯುವ ಮುನ್ನ ಸೋಮವಾರ ಬೆಳಗ್ಗೆ ಶ್ರೀ ಪ್ರಸನ್ನ ರಾಮೇಶ್ವರ ಸ್ವಾಮಿ ಮೂಲಸ್ಥಾನದಲ್ಲಿ ರುದ್ರಾಭಿಷೇಕ, ಬಿಲ್ವಾರ್ಚನೆ, ಅಷ್ಟೋತ್ತರ ಸೇವೆ ಜರುಗಿತು. ನಂತರ ದಾಸೋಹ ಏರ್ಪಟ್ಟಿತ್ತು.

    ಸಂಜೆ ಗಂಗಾ ಪೂಜೆ ಮತ್ತಿತರ ಕಾರ್ಯಕ್ರಮ ನೆರವೇರಿದವು. ಮಂಗಳವಾರ ಮುಂಜಾನೆ ಗಂಗಾ ಪೂಜೆ ಸಲ್ಲಿಸಲಾಯಿತು. ಶ್ರೀ ಪ್ರಭುಕುಮಾರ ಸ್ವಾಮೀಜಿ ನೇತೃತ್ವದಲ್ಲಿ ಪ್ರಸನ್ನ ರಾಮೇಶ್ವರ ಸ್ವಾಮಿ, ವೀರಭದ್ರೇಶ್ವರ ಸ್ವಾಮಿ ಹಾಗೂ ಭದ್ರಕಾಳಮ್ಮ ದೇವಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ ಜರುಗಿತು.

    ಪ್ರಸನ್ನ ರಾಮೇಶ್ವರ ಸ್ವಾಮಿ ದೇವಾಲಯದ ಮುಂಭಾಗದಲ್ಲಿ ನಿರ್ಮಿಸಿದ್ದ ಅಗ್ನಿ ಕುಂಡಕ್ಕೆ ಪೂಜೆ ಸಲ್ಲಿಸಿದ ನಂತರ ಶ್ರೀ ವೀರಭದ್ರೇಶ್ವರ ಸ್ವಾಮಿ ಭಕ್ತರಿಂದ ಕೆಂಡ ಹಾಯುವ ಕಾರ್ಯಕ್ರಮ ಹಾಗೂ ಭದ್ರಕಾಳಮ್ಮ ದೇವಿಗೆ ಕುಂಕುಮಾರ್ಚನೆ ನೆರವೇರಿಸಲಾಯಿತು.

    ಶ್ರೀ ಪ್ರಸನ್ನ ರಾಮೇಶ್ವರ ಸ್ವಾಮಿ, ಶ್ರೀ ವೀರಭದ್ರ ಸ್ವಾಮಿ ಹಾಗೂ ಪರಿವಾರ ದೇವರುಗಳು ಅಗ್ನಿ ಕುಂಡ ಹಾಯುವ ಕಾರ್ಯಕ್ರಮ ನಡೆಯಿತು. ಭಕ್ತರೂ ಬರಿಗಾಲಲ್ಲಿ ಕೆಂಡದ ಮೇಲೆ ನಡೆಯುವ ಮೂಲಕ ಇಷ್ಟಾರ್ಥಸಿದ್ಧಿಗಾಗಿ ಪ್ರಾರ್ಥಿಸಿದರು.

    ಉಪವಾಸ ವ್ರತಾಚರಣೆಯಲ್ಲಿದ್ದ ನೂರಾರು ಭಕ್ತರು ಕೆಂಡ ಹಾದು ಭಕ್ತಿ ಸಮರ್ಪಿಸಿದರು. ಮಹಾಮಂಗಳಾರತಿ, ರಾಜಬೀದಿ ಉತ್ಸವ ಹಾಗೂ ಅನ್ನ ಸಂತರ್ಪಣೆ ನಡೆಸಲಾಯಿತು. ಹೆಚ್ಚಿನ ಸಂಖ್ಯೆಯ ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

    ಗುಗ್ಗಳ ಸೇವೆ: ಉಪವಾಸ ವ್ರತದಲ್ಲಿದ್ದ ಭಕ್ತರು ತಲೆ ಮೇಲೆ ಗುಗ್ಗಳ ಕೊಡ ಹೊತ್ತು ಸಾಗಿದರು. ಅಗ್ನಿಕುಂಡದಲ್ಲಿ ಕೆಂಡದ ಮೇಲೆ ನಡೆದು ಭಕ್ತಿ ಮೆರೆದರು. ಈ ಮೂಲಕ ಶ್ರೀ ವೀರಭದ್ರಸ್ವಾಮಿ ಹಾಗೂ ಭದ್ರ ಕಾಳಮ್ಮ ದೇವಿಗೆ ಗುಗ್ಗಳ ಸೇವೆ ನೆರವೇರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts