More

    15 ಮಂದಿ ಸಾಂಸ್ಥಿಕ ಕ್ವಾರಂಟೈನ್

    ಹೊಸದುರ್ಗ: ಬೆಂಗಳೂರಿನಲ್ಲಿ ಮೇ 22ರಂದು ಕರೊನಾ ಸೋಂಕು ದೃಢಪಟ್ಟಿರುವ ಪಿ-1692 ವ್ಯಕ್ತಿ ತಾಲೂಕಿನ ಜಾನಕಲ್ಲು ಗ್ರಾಮಕ್ಕೆ ಭೇಟಿ ನೀಡಿದ್ದ ಹಿನ್ನೆಲೆಯಲ್ಲಿ ಭಾನುವಾರ ವ್ಯಕ್ತಿಯ ನೇರ ಸಂಪರ್ಕದಲ್ಲಿದ್ದ 15 ಜನರನ್ನು ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

    ತಾಲೂಕಿನ ಜಾನಕಲ್ಲು ನಾಯಕರಹಟ್ಟಿಯ ಮೂಲದ ವ್ಯಕ್ತಿಯು ಬೆಂಗಳೂರಿನ ಪ್ರೆಜರ್‌ಟೌನ್ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿದ್ದು, ಮೇ 5, 6ರಂದು ಗ್ರಾಮದ ನಾಯಕರಹಟ್ಟಿಯ ಸಂಬಂಧಿಕರ ಮನೆಗೆ ಭೇಟಿ ನೀಡಿ ಜನ್ಮದಿನದ ಆಚರಣೆಯಲ್ಲಿ ಪಾಲ್ಗೊಂಡಿದ್ದರು.

    ಈ ವ್ಯಕ್ತಿಗೆ ಮೇ 22ರಂದು ಬೆಂಗಳೂರಿನಲ್ಲಿ ನಡೆಸಿದ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿದೆ. ಅತನ ಟ್ರಾವೆಲ್ ಹಿಸ್ಟರಿ ಪರಿಶೀಲಿಸಿದಾಗ ಜಾನಕಲ್ಲು, ಹೊಳಲ್ಕೆರೆ ತಾಲೂಕಿನ ಗಟ್ಟಿಹೊಸಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿರುವುದು ತಿಳಿದು ಬಂದಿದೆ.

    ಭಾನುವಾರ ಗ್ರಾಮಕ್ಕೆ ಭೇಟಿ ನೀಡಿದ ಟಿಎಚ್‌ಒ ಡಾ.ಚಂದ್ರಶೇಖರ ಕಂಬಾಳಿಮಠ್ ನೇತೃತ್ವದ ಆರೋಗ್ಯ ಇಲಾಖೆ ತಂಡ ರೋಗಿಯ ನೇರ ಸಂಪರ್ಕದಲ್ಲಿದ್ದ ಕುಟುಂಬದ 15 ಜನರನ್ನು ಗುರುತಿಸಿ ಅವರಿಂದ ಗಂಟಲು ದ್ರವ ಪಡೆದು ಪರೀಕ್ಷೆಗಾಗಿ ರವಾನಿಸಿದೆ.

    ಶಂಕಿತರನ್ನು ತಾಲೂಕು ಆಡಳಿತದ ನಿರ್ದೇಶನದಂತೆ ಮಾಡದಕೆರೆ ಬಳಿ ವಸತಿ ಶಾಲೆಯಲ್ಲಿ ಸಾಂಸ್ಥಿಕ ಕ್ವಾರಟೈನ್ ಮಾಡಲಾಗಿದೆ. ಸ್ಥಳಕ್ಕೆ ತಹಸೀಲ್ದಾರ್ ತಿಪ್ಪೇಸ್ವಾಮಿ, ಪಿಎಸ್‌ಐ ಶಿವಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts