More

    ರಾಜಸ್ಥಾನದಲ್ಲಿ ‘ಕುದುರೆ ವ್ಯಾಪಾರ’ಕ್ಕೆ ಅನ್​ಲಿಮಿಟೆಡ್​ ಆಫರ್​; ವಿಧಾನಸಭೆ ಅಧಿವೇಶನ ನಿಗದಿ ಬಳಿಕ ಬೆಲೆಯಲ್ಲಿ ಭಾರಿ ಏರಿಕೆ

    ಜೈಪುರ: ರಾಜಸ್ಥಾನ ವಿಧಾನಸಭೆ ಅಧಿವೇಶನ ವಿಳಂಬಗೊಳಿಸಿದ್ದರ ಹಿಂದೆ ಬಿಜೆಪಿಗೆ ಕುದುರೆ ವ್ಯಾಪಾರ ನಡೆಸಲು ಅವಕಾಶ ಕಲ್ಪಿಸುವ ಉದ್ದೇಶ ಹೊಂದಲಾಗಿದೆ ಎಂದು ಸಿಎಂ ಅಶೋಕ್​ ಗೆಹ್ಲೋಟ್​ ಟೀಕಿಸಿದ್ದಾರೆ.

    ಭಾರತೀಯ ಜನತಾ ಪಕ್ಷ, ರಾಜ್ಯಪಾಲ ಕಲ್ರಾಜ್​ ಮಿಶ್ರಾ ಹಾಗೂ ಸಚಿನ್​ ಪೈಲಟ್​ ಬಣದ ವಿರುದ್ಧ ಹರಿಹಾಯ್ದಿರುವ ಗೆಹ್ಲೋಟ್​, ವಿಧಾನಸಭೆ ಅಧಿವೇಶನ ದಿನಾಂಕ ನಿಗದಿಯಾಗುತ್ತಿದ್ದಂತೆ ಕುದುರೆ ವ್ಯಾಪಾರದ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.

    ಇದನ್ನೂ ಓದಿ; ರಿಲಯನ್ಸ್​ನಿಂದ 27,000 ಕೋಟಿ ರೂ.ಗೆ ಬಿಗ್​ ಬಜಾರ್​ ಖರೀದಿ? ರಿಟೇಲ್​ ಕ್ಷೇತ್ರದಲ್ಲಿ ಸಂಚಲನ

    ಅಧಿವೇಶನ ದಿನಾಂಕ ನಿಗದಿಯಾಗುವ ಮುನ್ನ ಮೊದಲ ಕಂತಾಗಿ 10 (ಕೋಟಿ ರೂ.), ಎರಡನೆಯ ಕಂತಿನಲ್ಲಿ 25 ನೀಡಲಾಗುತ್ತಿತ್ತು. ಈಗ ಅನ್​ಲಿಮಿಟೆಡ್​ ಆಗಿದೆ. ಶಾಸಕರೇ ನಿಮಗೆಷ್ಟು ಬೇಕೆಂದು ನೀವೇ ಹೇಳಿ ಎಂದು ಕೇಳಲಾಗುತ್ತಿದೆ. ಅಂದರೆ 25ಕ್ಕಿಂತಲೂ ಹೆಚ್ಚಾಗಿದೆ ಎಂದೇ ಅರ್ಥ. ಇದನ್ನೆಲ್ಲ ಯಾರು ನಿರ್ವಹಿಸುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಗೆಹ್ಲೋಟ್​ ಬಹಿರಂಗವಾಗಿಯೇ ಹೇಳಿದ್ದಾರೆ.

    ಅಧಿವೇಶನವನ್ನು ವಿಳಂಬ ಮಾಡಿದ್ದೇಕೆ ಎಂದರೆ, ಕುದುರೆ ವ್ಯಾಪಾರದ ಗುತ್ತಿಗೆಯನ್ನು ಬಿಜೆಪಿಯವರು ವಹಿಸಿಕೊಂಡಿದ್ದಾರೆ. ಅವರೊಂದಿಗೆ ನಮ್ಮವರೇ ಕೆಲವರು ಸೇರಿಕೊಂಡು ಈ ವ್ಯಾಪಾರ ನಡೆಸುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ

    ಇದನ್ನೂ ಓದಿ; ಮುಂಬೈನಲ್ಲಿ ಮಾಯವಾಗುತ್ತಿದೆ ಕರೊನಾ…! ಮೂರು ತಿಂಗಳ ಬಳಿಕ ದಾಖಲೆ ಪ್ರಮಾಣದಲ್ಲಿ ಕುಸಿತ 

    ಕೊನೆಗೂ ರಾಜ್ಯಪಾಲರು ನಮ್ಮ ಮನವಿ ಒಪ್ಪಿಕೊಂಡಿದ್ದಾರೆ. ಆದಷ್ಟು ಬೇಗನೆ ಅಧಿವೇಶನ ನಡೆಸಬೇಕು ಎಂಬುದು ಬೇಡಿಕೆಯಾಗಿತ್ತು. ಇನ್ನೂ ವಿಳಂಬವಾಗಿದ್ದರೆ, ಕುದುರೆ ವ್ಯಾಪಾರ ಭಾರಿ ಜೋರಾಗುತ್ತಿತ್ತು ಎಂದು ಹೇಳಿದ್ದಾರೆ. ಬಂಡಾಯವೆದ್ದಿರುವ ಶಾಸಕರು ಕೂಡ ಕಲಾಪಕ್ಕೆ ಹಾಜರಾಗಿ ಸರ್ಕಾರದ ಪರ ನಿಲ್ಲುತ್ತಾರೆಂಬ ಆಶಯವನ್ನು ಗೆಹ್ಲೋಟ್​ ವ್ಯಕ್ತಪಡಿಸಿದ್ದಾರೆ.

    ಮತ್ತೊಂದು ಆಘಾತಕಾರಿ ಹಂತ ತಲುಪಿದ ಕರೊನಾ; ಭಾರತದ ಮೊದಲ ಪ್ರಕರಣ ವರದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts