More

    ಭೂಮಿಯಿಂದ ಕೇಳಿಸಿತು ಭಾರಿ ಶಬ್ದ; ಭೂಕಂಪನದ ಅನುಭವ, ಶಬ್ದಕ್ಕೆ ಬೆದರಿ ಮನೆಯಿಂದ ಹೊರಗೋಡಿ ಬಂದ ಗ್ರಾಮಸ್ಥರು

    ಕಲಬುರಗಿ: ಇದ್ದಕ್ಕಿದ್ದಂತೆ ಭಾರಿ ಶಬ್ದ ಕೇಳಿಸುವುದು, ಮನೆಯಲ್ಲಿದ್ದ ಪಾತ್ರೆಗಳೆಲ್ಲ ಅಲುಗಾಡಿ ಬೀಳುವುದು, ಜನರು ಬೆಚ್ಚಿ ಮನೆಯಿಂದ ಹೊರಗೋಡಿ ಬರುವುದು ರಾಜ್ಯದಲ್ಲಿ ಆಗಾಗ ಕೇಳಿಬರುತ್ತಲೇ ಇರುತ್ತಿದ್ದು, ಈಗ ಅಂಥದ್ದೇ ಒಂದು ಪ್ರಕರಣ ಮತ್ತೆ ವರದಿಯಾಗಿದೆ. ಭೂಮಿಯಿಂದ ಭಾರಿ ಶಬ್ದ ಕೇಳಿಬಂದಿದ್ದರಿಂದ ಬೆಚ್ಚಿದ ಜನರು ಮನೆಯಿಂದ ಹೊರಗೋಡಿ ಬಂದಿದ್ದರು.

    ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಗಡಿಕೇಶ್ವರ ಗ್ರಾಮದಲ್ಲಿ ಹೀಗೆ ಭಾರಿ ಶಬ್ದ ಕೇಳಿ ಭೂಮಿ ಕಂಪಿಸಿದ್ದರಿಂದ ಜನರು ಬೆದರಿ ಗಡಿಬಿಡಿಯಿಂದ ಮನೆಯಿಂದ ಹೊರಬಂದಿದ್ದಾರೆ. ರಾತ್ರಿ 8.20ರ ಸುಮಾರಿಗೆ ಈ ಜೋರಾದ ಸದ್ದು ಕೇಳಿಸಿದ್ದು, ಜನರಿಗೆ ಭೂಮಿ ಕಂಪಿಸಿದಂಥ ಅನುಭವವೂ ಆಗಿದೆ.

    ಶಬ್ದದ ಬೆನ್ನಿಗೇ ಭೂಮಿಯೂ ಕಂಪಿಸಿದ್ದರಿಂದ ಮನೆಯಲ್ಲಿದ್ದ ಪಾತ್ರೆಗಳೆಲ್ಲ ಅಲುಗಾಡಿ ಕೆಳಗುರುಳಿವೆ ಎಂದು ಜನರು ತಿಳಿಸಿದ್ದಾರೆ. ಬಾಂಬ್​ ಬ್ಲಾಸ್ಟ್​ ಆದ ರೀತಿಯಲ್ಲಿ ಶಬ್ದ ಕೇಳಿಬಂದಿದೆ. ಜನರೆಲ್ಲ ಆತಂಕದಲ್ಲಿದ್ದಾರೆ. ಅದರಲ್ಲೂ ಈ ಗಡಿಕೇಶ್ವರ ಗ್ರಾಮದಲ್ಲಿ ಫೆ. 21ರಂದು ಮೂರು ಸಲ ಇಂಥದ್ದೇ ಶಬ್ದ ಕೇಳಿಬಂದಿದ್ದು, ಇದೀಗ ಮತ್ತೆ ಶಬ್ದ ಮರುಕಳಿಸಿದ್ದು, ಸ್ಥಳೀಯರು ಈ ರಾತ್ರಿಯನ್ನು ಆತಂಕದಲ್ಲೇ ಕಳೆಯುವಂತಾಗಿದೆ.

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಪ್ರಾಗ್ಜ್ಯೋತಿಷಪುರದ ರಾಣಿ ಸಿಟ್ಟಾಗಿದ್ದೇಕೆ? ನಟ್ಟಿರುಳಲಿ ಪ್ರಸಂಗದ ನಡುವೆ ಆಯ್ತು ರಸಭಂಗ!

    ರಾಮನನ್ನು ನೀವು ಗುತ್ತಿಗೆ ಪಡೆದಿದ್ದೀರಾ? ನನ್ನ ಹೆಸರಲ್ಲೇ ರಾಮನಿದ್ದಾನೆ: ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts