ನವದೆಹಲಿ: ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಜಯಿಸಿದ ಭಾರತಕ್ಕೆ ಮರಳಿದ ಜಾವೆಲಿನ್ ಎಸೆತಗಾರರಾದ ಸುಮಿತ್ ಆಂಟಿಲ್ ಮತ್ತು ದೇವೇಂದ್ರ ಜಜಾರಿಯಾ ಅವರನ್ನು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಶುಕ್ರವಾರ ಸನ್ಮಾನಿಸಿದರು. ಶೀಘ್ರದಲ್ಲೇ ಭಾರತದಲ್ಲಿ ಕ್ರಿಕೆಟ್ ಆಟದಷ್ಟೇ ಜಾವೆಲಿನ್ ಎಸೆತವೂ ಜನಪ್ರಿಯವಾಗಲಿದೆ ಎಂದು ಅವರು ಇದೇ ವೇಳೆ ಭರವಸೆ ವ್ಯಕ್ತಪಡಿಸಿದರು.
ನೀರಜ್ ಚೋಪ್ರಾ ಒಲಿಂಪಿಕ್ಸ್‌ನಲ್ಲಿ ಚಿನ್ನ ಜಯಿಸಿದ ಬೆನ್ನಲ್ಲೇ ಪ್ಯಾರಾಲಿಂಪಿಕ್ಸ್‌ನಲ್ಲಿ ಸುಮಿತ್ ಚಿನ್ನ, ಜಜಾರಿಯಾ ಬೆಳ್ಳಿ ಮತ್ತು ಸುಂದರ್ ಸಿಂಗ್ ಗುರ್ಜರ್ ಕಂಚು ಜಯಿಸಿ ಜಾವೆಲಿನ್ ಎಸೆತದಲ್ಲಿ ಭಾರತಕ್ಕೆ ಮತ್ತಷ್ಟು ಕೀರ್ತಿ ತಂದಿದ್ದರು.
‘ಭಾರತದಲ್ಲಿ ಕ್ರಿಕೆಟ್ ಬ್ಯಾಟ್‌ನಷ್ಟೇ ಜಾವೆಲಿನ್ ಕೂಡ ಜನಪ್ರಿಯತೆ ಪಡೆಯುವ ಆಶಾವಾದದಲ್ಲಿರುವೆ’ ಎಂದು ಅನುರಾಗ್ ಠಾಕೂರ್ ಹೇಳಿದರು. ಡಿಸ್ಕಸ್ ಮತ್ತು ಹೈಜಂಪ್‌ನಲ್ಲಿ ಪದಕ ಜಯಿಸಿದ ಯೋಗೇಶ್ ಕಥುನಿಯ ಮತ್ತು ಶರದ್ ಕುಮಾರ್ ಅವರನ್ನೂ ಇದೇ ವೇಳೆ ಸನ್ಮಾನಿಸಲಾಯಿತು.
Our Champions are back home 🇮🇳!
Wonderful speaking to everyone about their personal journey, inspiration & plans ahead! https://t.co/NtIp9BCAkN
— Anurag Thakur (@ianuragthakur) September 3, 2021
VIDEO| ಫೀಲ್ಡಿಂಗ್, ಬ್ಯಾಟಿಂಗ್ ಬಳಿಕ ಓವಲ್‌ನಲ್ಲಿ ಭಾರತ ಪರ ಬೌಲಿಂಗ್‌ಗೆ ಬಂದ ಇಂಗ್ಲೆಂಡ್ ಪ್ರೇಕ್ಷಕ!