More

    ಬಜೆಟ್​ ಅಧಿವೇಶನದಲ್ಲಿ ಹೆಚ್ಚಾಗಿ ಆರ್ಥಿಕ ವಿಚಾರಗಳ ಬಗ್ಗೆ ವಿವರವಾದ ಚರ್ಚೆ ನಡೆಯುವ ಭರವಸೆ ಇದೆ: ಪ್ರಧಾನಿ ಮೋದಿ

    ನವದೆಹಲಿ: ಕೇಂದ್ರ ಬಜೆಟ್​ಗೆ ಕ್ಷಣಗಣನೆ ಆರಂಭವಾಗಿದೆ. ಶನಿವಾರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್​ ಮಂಡಿಸಲಿರುವ ಬಜೆಟ್​ ಕುರಿತು ಚರ್ಚಿಸಲು ಇಂದು ಬಜೆಟ್​ ಅಧಿವೇಶನ ಆರಂಭವಾಗಿ. ಇನ್ನು ಕೆಲವೇ ಕ್ಷಣಗಳಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅಧಿವೇಶನ ಉದ್ದೇಶಿಸಿ ಮಾತನಾಡಲಿದ್ದಾರೆ. ಇದಕ್ಕೂ ಪ್ರಧಾನಿ ನರೇಂದ್ರ ಮೋದಿ ಮಾತನಾಡಿ, ಅಧಿವೇಶನದಲ್ಲಿ ಆರ್ಥಿಕತೆ ಮತ್ತು ಜನರ ಸಬಲೀಕರಣ ಬಗ್ಗೆ ವಿವರವಾಗಿ ಚರ್ಚಿಸುವ ಭರವಸೆ ಇದೆ ಎಂದರು.

    ನಮ್ಮ ಅಧಿವೇಶನದಲ್ಲಿ ಆರ್ಥಿಕ ವಿಚಾರಗಳು ಮತ್ತು ಪ್ರಸ್ತುತ ಜಾಗತಿಕ ಆರ್ಥಿಕ ಪರಿಸ್ಥಿತಿಯಲ್ಲಿ ಭಾರತ ಹೇಗೆ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎಂಬುದರ ಬಗ್ಗೆ ಹೆಚ್ಚು ಗಮನ ಕೊಡುತ್ತೇವೆ ಎಂದು ಹೇಳಿದರು.

    ಈ ಅಧಿವೇಶನದ ಬಗ್ಗೆ ಒಂದನ್ನು ಖಚಿತಪಡಿಸಲು ಇಚ್ಛಿಸುತ್ತೇನೆ. ಮುಂದಿನ ದಶಕಗಳಿಗೆ ಬಲವಾದ ಅಡಿಪಾಯವನ್ನು ಇಡುತ್ತೇವೆ. ಹೆಚ್ಚಾಗಿ ಆರ್ಥಿಕ ವಿಚಾರಗಳ ಬಗ್ಗೆಯೇ ಚರ್ಚಿಸುತ್ತೇವೆ. ಸಂಸತ್ತಿನ ಎರಡು ಮನೆಯು ಬಜೆಟ್​ ವಿಚಾರದಲ್ಲಿ ಒಳ್ಳೆಯ ಚರ್ಚೆ ನಡೆಸುತ್ತವೆ ಎಂದು ಬಯಸಿದ್ದೇನೆ ಎಂದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts