More

    ಬೀಜ, ಗೊಬ್ಬರ ಉಚಿತವಾಗಿ ವಿತರಿಸಿ

    ಹೂವಿನಹಡಗಲಿ: ಮುಂಗಾರು ಮಳೆ ಕೊರತೆ ಹಿನ್ನೆಲೆಯಲ್ಲಿ ಬರಪೀಡಿತ ತಾಲೂಕುಗಳನ್ನು ಘೋಷಣೆ ಮಾಡಬೇಕೆಂದು ಆಗ್ರಹಿಸಿ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ ನಡೆಸಿತು.

    ಇದನ್ನೂ ಓದಿರಿ: ಬಿಜೆಪಿ ರೈತ ಮೋರ್ಚಾ ವತಿಯಿಂದ ಪ್ರತಿಭಟನೆ

    ಬಿಜೆಪಿ ಜಿಲ್ಲಾ ಪ್ರಕೋಷ್ಠ ಸಂಚಾಲಕ ಓದೋ ಗಂಗಪ್ಪ ಮಾತನಾಡಿ, ಗ್ಯಾರಂಟಿ ಯೋಜನೆಗಳ ಘೋಷಿಸಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ನಾಲ್ಕು ತಿಂಗಳಾದರೂ ಯಾವ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿಲ್ಲ.

    ಗ್ಯಾರಂಟಿಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸದೆ ಜನರನ್ನು ಮೋಸ ಮಾಡಿದೆ. ಬಿಜೆಪಿ ಸರ್ಕಾರದ ರೈತಪರ ಯೋಜನೆಗಳನ್ನು ಸ್ಥಗಿತಗೊಳಿಸಿ ರೈತವಿರೋಧಿ ನೀತಿ ಅನುಸರಿಸಿದೆ. ವಿದ್ಯುತ್ ಶುಲ್ಕ ಏರಿಸಿ ಗ್ರಾಹಕರಿಗೆ ಬರೆ ಹಾಕಿದೆ ಎಂದು ಟೀಕಿಸಿದರು.

    ಬಿಜೆಪಿ ಮಂಡಲ ಅಧ್ಯಕ್ಷ ಎಸ್.ಸಂಜೀವರೆಡ್ಡಿ ಮಾತನಾಡಿ, ಕಾಂಗ್ರೆಸ್ ನಾಯಕರು ಜನಹಿತ ಮರೆತು ಕುರ್ಚಿ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ.

    ತಾಲೂಕನ್ನು ಬರಪೀಡಿತ ಎಂದು ಘೋಷಿಸಿ, ಎಕರೆಗೆ 25 ಸಾವಿರ ರೂ. ಪರಿಹಾರ ನೀಡಬೇಕು. ಹಿಂಗಾರು ಬಿತ್ತನೆಗಾಗಿ ಬೀಜ, ಗೊಬ್ಬರ ಉಚಿತವಾಗಿ ಪೂರೈಸಬೇಕು ಎಂದು ಒತ್ತಾಯಿಸಿದರು.

    ರೈತ ಮೋರ್ಚಾ ಅಧ್ಯಕ್ಷ ಶಿವನಗೌಡ, ಜಿಲ್ಲಾ ಒಬಿಸಿ ಮೋರ್ಚಾ ಈಟಿ.ಲಿಂಗರಾಜ, ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಬಿ.ಸಿರಾಜ್, ಮಂಡಲ ಕಾರ್ಯದರ್ಶಿಗಳಾದ ಜೆ.ಪರಶುರಾಮ,

    ಜ್ಯೋತಿ ಪ್ರದೀಪ್, ಪುರಸಭೆ ಸದಸ್ಯ ಎ.ಜೆ.ವೀರೇಶ, ಮುಖಂಡರಾದ ಹೊಳೆಯಾಚೆ ಕೊಟ್ರಪ್ಪ, ಮೀರಾಬಾಯಿ, ಯು.ಕೊಟ್ರೇಶನಾಯ್ಕ, ಆರ್.ಟಿ.ನಾಗರಾಜ, ವಿನೋದ್, ಸಂತೋಷ್, ಶಿವಪುತ್ರ, ಮಲ್ಲನಗೌಡ, ನಾಗರಾಜ ಉತ್ತಂಗಿ, ಅಶೋಕ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts