More

    ಐಎಎಸ್, ಕೆಎಎಸ್ ಪರೀಕ್ಷೆ ತಯಾರಿಗೆ ತರಬೇತಿ ಪೂರಕ: ಪ್ರಾಚಾರ್ಯ ಎಸ್.ಎಸ್.ಪಾಟೀಲ್ ಅಭಿಪ್ರಾಯ

    ಹೂವಿನಹಡಗಲಿ: ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲರಿಗೂ ಸ್ಪರ್ಧಿಸುವ ಅವಕಾಶವಿದ್ದು, ಗ್ರಾಮೀಣ ಭಾಗದ ಮಹಿಳೆಯರು, ಯುವಕರು ಸ್ಫೂರ್ತಿ-2022 ಯೋಜನೆಯ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜಿಬಿಆರ್ ಪದವಿ ಕಾಲೇಜಿನ ಪ್ರಾಚಾರ್ಯ ಎಸ್.ಎಸ್.ಪಾಟೀಲ್ ಹೇಳಿದರು.

    ವಿಜಯನಗರ ಜಿಲ್ಲಾಡಳಿತ ಪಟ್ಟಣದ ಜಿಬಿಆರ್ ಕಾಲೇಜು ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಸ್ಫೂರ್ತಿ-2022 ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

    ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳು ಐಎಎಸ್ ಮತ್ತು ಕೆಎಎಸ್ ಪರೀಕ್ಷೆಗಳಿಗೆ ತಯಾರಿ ನಡೆಸುವ ಕುರಿತು ಮತ್ತು ಪರೀಕ್ಷೆಗಳನ್ನು ಬರೆದು ಉನ್ನತ ಹುದ್ದೆಯನ್ನು ಹೊಂದಬೇಕೆಂಬ ಉದ್ದೇಶದಿಂದ ಜಿಲ್ಲೆಯ ಖನಿಜ ನಿಧಿಯನ್ನು ಬಳಸಿಕೊಂಡು ಈ ಕಾರ್ಯಕ್ರಮವನ್ನು ಜಾರಿಗೆ ತರಲಾಗಿದೆ. ತರಬೇತಿಯು 10 ತಿಂಗಳ ಕಾಲ ಪ್ರತಿ ಭಾನುವಾರ ನಡೆಯಲಿದೆ ಎಂದರು.

    ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ತರಬೇತಿ ಕಾರ್ಯಕ್ರಮದ ಸಂಯೋಜಕ ಜಾವಿದ್ ಬಾಷಾ ಡಿ., ಸಂಪನ್ಮೂಲ ವ್ಯಕ್ತಿ ನಂಜಾನಾಯ್ಕ, ಉಪನ್ಯಾಸಕರಾದ ಬಿ.ಪ್ರಕಾಶ್, ಡಾ.ವೈ.ಚಂದ್ರಬಾಬು, ಪರಶುರಾಮ ನಾಗೋಜಿ ಮತ್ತು ಉಚಿತ ತರಬೇತಿಗೆ ಹಾಜರಾಗಿದ್ದ ವಿದ್ಯಾರ್ಥಿಗಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts