More

    ಹಿರೇಹಳ್ಳಕ್ಕೆ ಬ್ಯಾರೇಜ್ ನಿರ್ಮಾಣ

    ಹೊಳಲ್ಕೆರೆ: ಕ್ಷೇತ್ರದಲ್ಲಿನ ಜಲಮೂಲಗಳ ಸಂರಕ್ಷಣೆಗೆ ಆದ್ಯತೆ ನೀಡಲಾಗಿದೆ ಎಂದು ಶಾಸಕ ಎಂ.ಚಂದ್ರಪ್ಪ ಹೇಳಿದರು.

    ತಾಲೂಕಿನ ಮಲ್ಲಾಡಿಹಳ್ಳಿ, ಶಿವಪುರ ಮಾರ್ಗದಲ್ಲಿನ ಹಿರೇಹಳ್ಳಕ್ಕೆ 2 ಕೋಟಿ ರೂ. ಅನುದಾನದಲ್ಲಿ ನಿರ್ಮಿಸುತ್ತಿರುವ ಬ್ಯಾರೇಜ್ ಕಾಮಗಾರಿ ಪರಿಶೀಲಿಸಿ ಮಾತನಾಡಿದರು.

    ಹಿರೇಹಳ್ಳ ರೈತರ ಜೀವನಾಡಿ. ಮಳೆಗಾಲದಲ್ಲಿ ಸಾಕಷ್ಟು ನೀರು ಹಳ್ಳದಿಂದ ಹರಿದು ಹೋಗುತ್ತವೆ. ಆದ್ದರಿಂದ ಬ್ಯಾರೇಜ್ ನಿರ್ಮಾಣಕ್ಕೆ ಮುಂದಾಗಲಾಗಿದೆ. ಕ್ಷೇತ್ರದಲ್ಲಿರುವ ಜಲಮೂಲಗಳ ಅಭಿವೃದ್ಧಿಗೆ ಈಗಾಗಲೇ ನೂರು ಕೋಟಿ ರೂ. ಅನುದಾನ ನೀಡಿದೆ. ಕೆರೆಗಳ ಅಭಿವೃದ್ಧಿ, ಚೆಕ್ ಡ್ಯಾಮ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದರು.

    ಜೀವ ಸಂಕುಲದ ಅಸ್ತಿತ್ವ ನೀರಿನ ಮೇಲೆ ಅವಲಂಬಿಸಿದೆ. ಕೃಷಿಗೆ ನೀರೇ ಮುಖ್ಯ, ಜಿಲ್ಲೆಯಲ್ಲಿ ಸಾಕಷ್ಟು ಮಳೆಯಾಗುತ್ತಿದ್ದರೂ ನೀರಿನ ಸಂಗ್ರಹವಿಲ್ಲದೆ ಬರಗಾಲಕ್ಕೆ ತುತ್ತಾಗುತ್ತಿದೆ. ಅರೆಮಲೆನಾಡು ಎಂಬ ಖ್ಯಾತಿ ಇದ್ದರು ನೀರಿನ ಸೌಲಭ್ಯ ಸಿಗುತ್ತಿಲ್ಲ ಎಂದರು.

    ಅಪ್ಪರ್‌ಭದ್ರಾ ಯೋಜನೆ ಕಾಮಗಾರಿ ತತ್ವರಿತಗತಿಯಲ್ಲಿ ನಡೆಯುತ್ತಿದೆ. ಪೈಪ್‌ಲೈನ್ ಮೂಲಕ ಕೆರೆಗಳಿಗೆ ನೀರು ತುಂಬಿಸಲಾಗುತ್ತದೆ. ಕ್ಷೇತ್ರದಲ್ಲಿರುವ ತೋಟಗಾರಿಕೆ ಮತ್ತು ಕೃಷಿಗೆ ಅಗತ್ಯವಿರುವ ನೀರು ಸಂಗ್ರಹಿಸಿ ರೈತರಿಗೆ ನೆರವು ನೀಡಲಾಗುತ್ತಿದೆ ಎಂದರು.

    ಮಾಜಿ ಶಾಸಕ ಪಿ.ರಮೇಶ್, ಜಿಪಂ ಮಾಜಿ ಅಧ್ಯಕ್ಷ ಪಿ.ಆರ್.ಶಿವಕುಮಾರ್, ಮುಖಂಡರಾದ ಪರಮೇಶ್ವರಪ್ಪ, ಮರುಳಸಿದ್ದೇಶ್ವರ ಇದ್ದರು.

    ಗಂಗಾಸಮುದ್ರ, ರಾಮಗಿರಿ, ಹೊಸೂರು, ತಾಳಿಕಟ್ಟೆ, ಹನುಮಲಿ, ದೊಗ್ಗನಾಳ್, ಮಲ್ಲಾಡಿಹಳ್ಳಿ, ಶಿವಪುರ ಭಾಗದಲ್ಲಿ ಹರಿಯುವ ಹಿರೇಹಳ್ಳ ನೂರಾರು ಗ್ರಾಮಗಳ ಮೂಲಕ ಶಾಂತಿಸಾಗರ ಸೇರಲಿದೆ. ಅನಗತ್ಯವಾಗಿ ಹರಿಯುವ ನೀರನ್ನು ತಡೆದು ರೈತರಿಗೆ ಅನುಕೂಲ ಮಾಡಿಕೊಡಲಾಗುವುದು.
    ಎಂ.ಚಂದ್ರಪ್ಪ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts