More

    ಹೂಲಿ ಗ್ರಾಮದಲ್ಲಿ ಬೆಂಕಿ ಅವಘಡ

    ಸವದತ್ತಿ: ಶಾರ್ಟ್ ಸರ್ಕ್ಯೂಟ್‌ನಿಂದ ಸುಮಾರು 9 ಬಣವೆಗಳು ಬೆಂಕಿಗೆ ಆಹುತಿಯಾದ ಘಟನೆ ಹೂಲಿ ಗ್ರಾಮದಲ್ಲಿ ಬುಧವಾರ ನಡೆದಿದೆ. ಗ್ರಾಮದ ಗಂಗಪ್ಪ ಭಜಂತ್ರಿ, ಫಕೀರಪ್ಪ ಗುಡದಾರ ಎಂಬುವರ ಹೊಲದಲ್ಲಿ ವಿದ್ಯುತ್ ತಂತಿ ಮರಕ್ಕೆ ಸ್ಪರ್ಶವಾಗಿ 5 ತೆಂಗಿನ ಮರ, 5 ಮೆಕ್ಕೆಜೋಳದ ಬಣವೆ ಹಾಗೂ 4 ಹೊಟ್ಟಿನ ಬಣವೆಗಳು ಸುಟ್ಟು ಭಸ್ಮವಾಗಿವೆ. ಬೆಂಕಿ ಕಂಡ ಕೂಡಲೇ ಸ್ಥಳೀಯ ರೈತರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ದಳದ ಅಧಿಕಾರಿ ಡಿ.ಎ. ಬೆಣ್ಣಿ ಹಾಗೂ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts