More

    18ರ ಯುವತಿಯ ಮರ್ಯಾದಾ ಹತ್ಯೆ : ಕೋರ್ಟ್ ಆದೇಶವಿದ್ದರೂ ರಕ್ಷಿಸಲು ವಿಫಲರಾದ ಪೊಲೀಸರು

    ಜೈಪುರ: ಜಾತಿಯ ಭೇದ ಮೀರಿ ಪ್ರೀತಿಯ ದಾರಿ ಹಿಡಿದ ಯುವತಿಯೊಬ್ಬಳನ್ನು, ಮರ್ಯಾದಾ ಹತ್ಯೆಯ ಪ್ರಕರಣವೊಂದರಲ್ಲಿ, ತಂದೆಯೇ ಸಾಯಿಸಿರುವ ಘಟನೆ ರಾಜಸ್ತಾನದಿಂದ ವರದಿಯಾಗಿದೆ. ವಿಪರ್ಯಾಸವೆಂದರೆ, ಯುವಜೋಡಿಗೆ ರಕ್ಷಣೆ ನೀಡಬೇಕೆಂದು ರಾಜಸ್ತಾನ ಹೈಕೋರ್ಟ್​ ಆದೇಶವಿದ್ದರೂ ಕೂಡ ಪೊಲೀಸರು ಆಕೆಯನ್ನು ರಕ್ಷಿಸುವಲ್ಲಿ ವಿಫಲರಾಗಿದ್ದಾರೆ.

    ರಾಜಸ್ತಾನದ ದೌಸ್ವ ಪಟ್ಟಣದ ನಿವಾಸಿ ಪಿಂಕಿ ಸೈನಿ ಎಂಬ 18 ವರ್ಷದ ಯುವತಿಯು 23 ವರ್ಷ ವಯಸ್ಸಿನ ರೋಶನ್ ಮಹವರ್​ ಎಂಬ ದಲಿತ ಯುವಕನನ್ನು ಪ್ರೀತಿಸುತ್ತಿದ್ದಳು. ಆದರೆ, ಈ ಬಗ್ಗೆ ಒಪ್ಪಿಗೆಯಿಲ್ಲದ ಪಿಂಕಿಯ ಮನೆಯವರು ಅವಳಿಗೆ ಬಲವಂತವಾಗಿ ಫೆಬ್ರವರಿ 16 ಕ್ಕೆ ಬೇರೆ ಮದುವೆ ಮಾಡಿದರು. ಮದುವೆಯಾಗಿ ಐದೇ ದಿನಕ್ಕೆ ಪಿಂಕಿ ತನ್ನ ಪ್ರೇಮಿಯೊಂದಿಗೆ ಓಡಿಹೋಗಿದ್ದಳು.

    ಇದನ್ನೂ ಓದಿ: ನಿಧಿ ಸುಬ್ಬಯ್ಯ ಮನೆಗೆ ಪಟಾಕಿ ಎಸೆದ ಸ್ಟಾರ್ ನಟನ ಹೆಸರು ಕೇಳಿ ಬೆರಗಾದ ಸ್ಪರ್ಧಿಗಳು..!

    ಫೆಬ್ರವರಿ 26 ಕ್ಕೆ ರಾಜಸ್ತಾನದ ಹೈಕೋರ್ಟ್​ ಮೊರೆ ಹೋದ ಈ ಯುವಜೋಡಿ, ತಮಗೆ ರಕ್ಷಣೆ ಒದಗಿಸಬೇಕೆಂದು ಕೋರಿತ್ತು. ತನ್ನ ಇಷ್ಟಕ್ಕೆ ವಿರುದ್ಧವಾಗಿ ಮದುವೆ ಮಾಡಿದ್ದು, ತಾನು ತನ್ನ ಪ್ರೇಮಿಯೊಂದಿಗೇ ಬದುಕಲು ಇಚ್ಛಿಸುತ್ತೇನೆ ಎಂದು ಪಿಂಕಿ ನ್ಯಾಯಾಲಯದ ಮುಂದೆ ಹೇಳಿಕೊಂಡಿದ್ದಳು. ಈ ಜೋಡಿಗೆ ರಕ್ಷಣೆ ನೀಡಿ ಅವರ ಇಷ್ಟದಂತೆ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುವಂತೆ ರಾಜಸ್ತಾನ ಪೊಲೀಸರಿಗೆ ಆದೇಶಿಸಿದ ನ್ಯಾಯಾಲಯ, ಪಿಂಕಿ ಪಾಲಕರಿಗೆ ಯಾವುದೇ ಕಾನೂನು ವಿರೋಧಿ ಕ್ರಮ ತೆಗೆದುಕೊಳ್ಳದಂತೆ ಸಲಹೆ ನೀಡಿತ್ತು.

    ಕೋರ್ಟ್​ ಆದೇಶದ ಹಿನ್ನೆಲೆಯಲ್ಲಿ ಮಾರ್ಚ್​ 1 ರಂದು ದೌಸ ಪಟ್ಟಣದಲ್ಲಿರುವ ರೋಶನ್ ಮನೆಗೆ ಪೊಲೀಸರೊಂದಿಗೆ ಜೋಡಿ ತೆರಳಿದೆ. ಆದರೆ ಅದೇ ದಿನ ಪಿಂಕಿಯ ತಂದೆ ಗುಂಪು ಕಟ್ಟಿಕೊಂಡು ಬಂದು ಅವಳನ್ನು ಬಲವಂತವಾಗಿ ಕರೆದುಕೊಂಡು ಹೋಗಿದ್ದಾರೆ. ಪಿಂಕಿಯನ್ನು ಹುಡುಕಲು ಪೊಲೀಸರು ಪ್ರಯತ್ನ ಮಾಡಿದರೋ ಇಲ್ಲವೋ.. ದುರಂತವಂತೂ ನಡೆದೇ ಹೋಯಿತು. ಪಿಂಕಿಯ ತಂದೆ ಶಂಕರಲಾಲ್ ಸೈನಿ ಮಾರ್ಚ್​ 3 ರಂದು ತಾನು ತನ್ನ ಮಗಳನ್ನು ಸಾಯಿಸಿರುವುದಾಗಿ ಖುದ್ದು ಪೊಲೀಸ್ ಠಾಣೆಗೆ ಬಂದು ತಿಳಿಸಿದ್ದಾರೆ. ಪಿಂಕಿಯ ಮೃತದೇಹವು ಅವಳ ತಂದೆಯ ಮನೆಯಲ್ಲಿ ಸಿಕ್ಕಿದ್ದು, ಕತ್ತು ಹಿಚುಕಿ ಸಾಯಿಸಿರುವುದು ಕಂಡುಬಂದಿದೆ.

    ಇದನ್ನೂ ಓದಿ: ಹದಿನೇಳರ ಹುಡುಗಿಯ ಮೇಲೆ ಗ್ಯಾಂಗ್ ರೇಪ್… ಸ್ನೇಹಿತೆ ಮನೆಗೆ ಹೋಗಿದ್ದೇ ತಪ್ಪಾಯಿತು!

    ಪಿಂಕಿಯನ್ನು ಕಳೆದುಕೊಂಡು ದುಃಖಪಡುತ್ತಿರುವ ರೋಶನ್​, ಈ ದುರಂತಕ್ಕೆ ಪೊಲೀಸರ ನಿರ್ಲಕ್ಷ್ಯವೇ ಕಾರಣ ಎಂದು ದೂರಿದ್ದಾನೆ. ಪಿಂಕಿಯನ್ನು ಅಪಹರಿಸಿದ ಬಗ್ಗೆ ತಕ್ಷಣ ದೂರು ನೀಡಿದರೂ, ಆಕೆಯನ್ನು ರಕ್ಷಿಸಲು ಪೊಲೀಸರು ಕ್ರಮ ತೆಗೆದುಕೊಳ್ಳಲಿಲ್ಲ. ಅದರಿಂದಾಗಿ ಪಿಂಕಿಯ ಪ್ರಾಣವೇ ಹೋಯಿತು. ಇದೀಗ ತನ್ನ ಪ್ರಾಣವನ್ನೂ ತೆಗೆಯಲು ಪಿಂಕಿ ಕುಟುಂಬ ಸಂಚು ನಡೆಸುತ್ತಿದೆ ಎಂದು ರೋಶನ್ ಆರೋಪಿಸಿದ್ದಾನೆ. ಕೋರ್ಟ್ ಆದೇಶವಿದ್ದರೂ ಯುವಜೋಡಿಗೆ ಸೂಕ್ತ ರಕ್ಷಣೆ ನೀಡದ ಪೊಲೀಸರ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳುವಂತೆ ವಕೀಲರು, ನಾಗರೀಕ ಹಕ್ಕುಗಳ ಚಳುವಳಿಕಾರರು ಆಗ್ರಹಿಸಿದ್ದಾರೆ.(ಏಜೆನ್ಸೀಸ್)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    “ಬರೀ ಯೂನಿಫಾರಂ ಧರಿಸಿದರೆ ಸಾಲಲ್ಲ”…. ಅಂತ ಸೇನಾ ತರಬೇತಿಯ ರುಚಿ ನೋಡುತ್ತಿರುವ ಕಂಗನಾ!

    ಬಾಯ್​ಫ್ರೆಂಡ್​ ಭೇಟಿಗಾಗಿ ಈಕೆ ಸೃಷ್ಟಿಸಿದ್ದು ಅಂತಿಂಥ ಕತೆಯಲ್ಲ: ಈಕೆಯ ಡ್ರಾಮಾ ನೋಡಿ ಪೊಲೀಸರೇ ಕಂಗಾಲು!

    “ಮೋದಿಗೆ ತಮಿಳುನಾಡು ಟಿವಿ ಥರ… ರಿಮೋಟ್​ನಿಂದ ಸಿಎಂನ ಕಂಟ್ರೋಲ್ ಮಾಡ್ತಾರೆ !”

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts