More

    ಗೌರವಧನವನ್ನು ಹೆಚ್ಚಿಸುವಂತೆ ಸಂಡೂರು ತಾಲೂಕು ಗ್ರಾಪಂ ಸದಸ್ಯರ ಒಕ್ಕೂಟ ಆಗ್ರಹ

    ಸಂಡೂರು: ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರ ಗೌರವಧನವನ್ನು ಹೆಚ್ಚಿಸುವಂತೆ ಸಿಎಂ ಬಸವರಾಜ ಬೊಮ್ಮಾಯಿ, ಪಂಚಾಯತ್ ರಾಜ್ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಕೆ.ಎಂ.ಗುರುಬಸವರಾಜಗೆ ಸಂಡೂರು ತಾಲೂಕು ಗ್ರಾಪಂ ಸದಸ್ಯರ ಒಕ್ಕೂಟದ ಅಧ್ಯಕ್ಷ ಎಂ.ಬಾಬುರೆಡ್ಡಿ ಸಲ್ಲಿಸಿದರು.

    ಶೇ.80ಕ್ಕೂ ಹೆಚ್ಚು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದವರೇ ಆಗಿರುವ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಜನಪ್ರತಿನಿಧಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರಿಗೆ ನೀಡುವ ಗೌರವ ಧನ ಅತ್ಯಂತ ಕನಿಷ್ಠವಾಗಿದೆ. 2017ರಲ್ಲಿ ಅಂದಿನ ಸರ್ಕಾರ ಅಧ್ಯಕ್ಷರಿಗೆ 1000ರೂ.ಯನ್ನು ಮೂರು ಸಾವಿರಕ್ಕೆ, ಉಪಾಧ್ಯಕ್ಷರಿಗೆ ನೀಡುತ್ತಿದ್ದ 600 ರೂ.ಯಿಂದ ಎರಡು ಸಾವಿರ ರೂ.ಗೆ ಹಾಗೂ ಸದಸ್ಯರಿಗೆ ನೀಡುತ್ತಿದ್ದ ಗೌರವಧನವನ್ನೂ 500ರೂ.ಯಿಂದ ಒಂದು ಸಾವಿರ ರೂ.ಗೆ ಹೆಚ್ಚಿಸಿತ್ತು.

    ಜೀವನ ವೆಚ್ಚದಲ್ಲಿ ಗಣನೀಯವಾಗಿ ಹೆಚ್ಚಳವಾಗಿರುವ ಆಂಶಗಳನ್ನು ಪರಿಗಣಿಸಿ ಮಂತ್ರಿಗಳು, ಶಾಸಕರಿಗೆ ಭತ್ಯೆಗಳನ್ನು ಹೆಚ್ಚಿಸಲು ಕೋರಲಾಗಿತ್ತು. ಮಾಸಿಕ ಕೇರಳ ಮಾದರಿ ಹೆಚ್ಚಳವನ್ನು ಮಾಡಿ ಗೌರವಧನವನ್ನು ಅರಣ್ಯ ಸಿಬ್ಬಂದಿಗೆ ನೀಡಬೇಕು. ಗ್ರಾಪಂ ಅಧ್ಯಕ್ಷರಿಗೆ 13200 ರೂ, ಉಪಾಧ್ಯಕ್ಷರಿಗೆ 10600ರೂ. ಹಾಗೂ ಸದಸ್ಯರಿಗೆ 7000 ರೂ.ಗೆ ಹೆಚ್ಚಿಸಲು ಒತ್ತಾಯಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts