More

    ಲಂಡನ್‌ನಲ್ಲಿ ಬಸವೇಶ್ವರ ಪ್ರತಿಮೆಗೆ ಬ್ರಿಟನ್‌ನ ಭಾರತೀಯ ರಾಯಭಾರಿ ಗಾಯತ್ರಿ ಇಸ್ಸಾರ್ ಗೌರವಾರ್ಪಣೆ

    ಲಂಡನ್: ಹನ್ನೆರಡನೇ ಶತಮಾನದ ಸಮಾಜ ಸುಧಾರಕ ಶ್ರೀ ಬಸವೇಶ್ವರರ 887ನೇ ಜಯಂತಿಯ ಅಂಗವಾಗಿ ಇಲ್ಲಿರುವ ಬಸವೇಶ್ವರ ಪ್ರತಿಮೆಗೆ ಭಾರತೀಯ ರಾಯಭಾರಿ ಗಾಯತ್ರಿ ಇಸ್ಸಾರ್ ಕುಮಾರ್ ಮತ್ತು ಉಪ ರಾಯಭಾರಿ ಚರಣ್‌ಜೀತ್ ಸಿಂಗ್ ಶುಕ್ರವಾರ ಗೌರವ ಅರ್ಪಿಸಿದರು. ಸಮಾರಂಭವನ್ನು ಬ್ರಿಟನ್‌ನ ಸ್ವಯಂಸೇವಾ ಸಂಸ್ಥೆಯಾದ ಲ್ಯಾಂಬೆತ್ ಬಸವೇಶ್ವರ ಪ್ರತಿಷ್ಠಾನ ಆಯೋಜಿಸಿತ್ತು.

    ಈ ಐತಿಹಾಸಿಕ ಪ್ರತಿಮೆಯನ್ನು ಥೇಮ್ಸ್ ನದಿಯ ದಂಡೆಯಲ್ಲಿ 2015ರ ನ. 14ರಂದು ಬ್ರಿಟನ್ ಸಂಸತ್ತಿನ ಸಭಾಧ್ಯಕ್ಷ ಜಾನ್ ಬರ್ಕೊ ಅವರ ಉಪಸ್ಥಿತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಿದ್ದರು. ಇದು ಬ್ರಿಟನ್‌ನಲ್ಲಿರುವ ಏಕೈಕ ಬಸವೇಶ್ವರ ಪ್ರತಿಮೆಯಾಗಿದ್ದು, ಸಂಸತ್ತಿನ ಆವರಣದಲ್ಲಿ ಸ್ಥಾಪನೆ ಮಾಡಲು ಅನುಮತಿ ಪಡೆದ ಮೊತ್ತಮೊದಲ ‘ಪರಿಕಲ್ಪನಾ’ ಪ್ರತಿಮೆ ಕೂಡ ಹೌದು.

    ಪ್ರತಿಮೆ ಯೋಜನೆಯ ಪ್ರಸ್ತಾವನೆಯನ್ನು ಮೊದಲು ಲ್ಯಾಂಬೆತ್‌ನ ಯೋಜನಾ ಇಲಾಖೆ ಅನುಮೋದಿಸಿತ್ತು. ನಂತರ 1854ರ ಸಾರ್ವಜನಿಕ ಪ್ರತಿಮೆಗಳ ಕಾಯ್ದೆಯ ನಿಯಮಗಳ ಅನ್ವಯ ಬ್ರಿಟನ್‌ನ ಸಂಸ್ಕೃತಿ, ವಾರ್ತಾ ಮತ್ತು ಕ್ರೀಡಾ ಸಚಿವರು ಅನುಮೋದಿಸಿದ್ದರು. ಬಸವೇಶ್ವರ ಪ್ರತಿಮೆ ಮತ್ತು ಅದರ ಸುತ್ತಮುತ್ತಲಿನ ಸ್ಥಳವು ಈಗ ಲ್ಯಾಂಬೆತ್ ಬಸವೇಶ್ವರ ಪ್ರತಿಷ್ಠಾನದ ವ್ಯಾಪ್ತಿಯಲ್ಲಿದೆ.

    ಲಂಡನ್‌ನಲ್ಲಿ ಬಸವೇಶ್ವರ ಪ್ರತಿಮೆಗೆ ಬ್ರಿಟನ್‌ನ ಭಾರತೀಯ ರಾಯಭಾರಿ ಗಾಯತ್ರಿ ಇಸ್ಸಾರ್ ಗೌರವಾರ್ಪಣೆ
    ಉಪ ರಾಯಭಾರಿ ಚರಣ್‌ಜೀತ್ ಸಿಂಗ್ ಅವರಿಂದ ಗೌರವಾರ್ಪಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts