More

    ಭಕ್ತಿಯಿಂದ ದೇವರನ್ನು ಸ್ಮರಿಸಿದರೆ ಕಷ್ಟ ಕಾರ್ಪಣ್ಯ ದೂರ

    ಹೊನ್ನಾಳಿ: ಸಂಕಟಬಂದಾಗಷ್ಟೇ ವೆಂಕಟರಮಣನ ಮೊರೆ ಹೋಗದೆ ಭಕ್ತಿಯಿಂದ ಸದಾ ದೇವರನ್ನು ಸ್ಮರಿಸಿದರೆ ಕಷ್ಟ ಕಾರ್ಪಣ್ಯಗಳು ದೂರವಾಗುತ್ತವೆ ಎಂದು ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

    ಹಿರೇಕಲ್ಮಠದಲ್ಲಿ ಹಮ್ಮಿಕೊಂಡಿದ್ದ ಶರನ್ನವರಾತ್ರಿ ಮತ್ತು ದಸರಾ ಮಹೋತ್ಸವದ ಸಾನ್ನಿಧ್ಯವಹಿಸಿ ಮಾತನಾಡಿ, ಹಬ್ಬ ಹರಿದಿನಗಳು ಬಂದಾಗ ಮಾತ್ರ ಧಾರ್ಮಿಕ ಚಿಂತನೆಗಳನ್ನು ಮಾಡಿ ನಂತರ ಗಾಳಿಗೆ ತೂರಬಾರದು. ನಮ್ಮ ಚಿಂತನೆಗಳು ಹಾಗೂ ಕಾರ್ಯಗಳು ಸಾಂದರ್ಭಿಕವಾಗಿರದೇ ಸಾರ್ವತ್ರಿಕವಾಗಿರಬೇಕು ಎಂದರು.

    ಭಕ್ತರು ತಮ್ಮನ್ನು ತಾವು ಸಂಪೂರ್ಣವಾಗಿ ನನಗೆ ಅರ್ಪಿಸಿಕೊಂಡರೆ ಕಷ್ಟ-ಕಾರ್ಪಣ್ಯಗಳಿಗೆ ಮುಕ್ತಿ ಲಭಿಸಲಿದೆ ಎಂದು ಭಗವದ್ಗೀತೆಯಲ್ಲಿ ಶ್ರೀಕೃಷ್ಣನೇ ಹೇಳಿದ್ದಾನೆ. ಇದರಂತೆ ನಡೆದುಕೊಳ್ಳಬೇಕು. ಭಕ್ತಿ ತೋರಿಕೆಯದ್ದಾಗಬಾರದು ಎಂದರು.

    ಶಿವಾಚಾರ್ಯ ರತ್ನ ಬಿರುದಾಂಕಿತ ಲಿಂ.ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹಾಕಿಕೊಟ್ಟ ಮಾರ್ಗದಲ್ಲೇ ಶ್ರೀಮಠದ ಧರ್ಮ, ಧಾರ್ಮಿಕ ಕಾರ್ಯಗಳು ನಡೆಯುತ್ತಿವೆ. ಇವನ್ನು ಮುಂದೆ ನಡೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

    ಗೃಹಿಣಿಯರು ಟಿವಿ ನೋಡುವುದನ್ನು ಬಿಟ್ಟು ಶ್ರೀಮಠದಲ್ಲಿ ನಡೆವ ಶರನ್ನವರಾತ್ರಿ ಮತ್ತು ದಸರಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಲವು ವಿಷಯಗಳ ಜ್ಞಾನ ಪಡೆದುಕೊಳ್ಳಬೇಕು ಎಂದರು.

    ನಿವೃತ್ತ ಮುಖ್ಯೋಪಾಧ್ಯಾಯ ಜಿ.ಎಂ.ಹಿರೇಮಠ, ಶ್ರೀದೇವಿ ಪುರಾಣ ಪ್ರವಚನ ಮಾಡಿದರು. ಮುಖ್ಯೋಪಾಧ್ಯಾಯ ಜಿ.ದೊಡ್ಡಪ್ಪ, ಬೆನಕಯ್ಯಶಾಸ್ತ್ರಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts