More

    ಹೊನ್ನಾಳಿಯಲ್ಲಿ ಶೀತಕ್ಕೆ ಸೊರಗಿದ ಬೆಳೆ ; ಮತ್ತೆ ಸಂಕಷ್ಟಕ್ಕೆ ಸಿಲುಕಿದ ಅನ್ನದಾತ

    ಹೊನ್ನಾಳಿ: ಅತಿವೃಷ್ಟಿಯ ಕಾರಣಕ್ಕೆ ತಾಲೂಕಿನ ಅನ್ನದಾತರು ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಾರಿಯಾದರೂ ಉತ್ತಮ ಫಸಲು ಬಂದು ನಾಲ್ಕು ಕಾಸು ಕೈಸೇರುತ್ತದೆ ಎಂಬ ಉತ್ಸಾಹದಲ್ಲಿ ಬಿತ್ತನೆ ಮಾಡಿದ್ದ ಹಲವು ರೈತರಿಗೆ ನಿರಾಸೆ ಮೂಡಿಸಿದೆ.

    ಕಳೆದ 15 ದಿನಗಳ ಹಿಂದೆ ಸುರಿದ ಸತತ ಮಳೆಯಿಂದ ಸಾವಿರಾರು ಎಕ್ಕರೆ ಮೆಕ್ಕೆಜೋಳ, ಅಡಕೆ, ಹತ್ತಿ ಸೇರಿ ವಿವಿಧ ಬೆಳೆಗಳಿಗೆ ಶೀತ ಆವರಿಸಿತ್ತು. ನಂತರ ಒಂದೆರಡು ದಿನ ಬಿಡುವು ನೀಡಿ ಮತ್ತೆ ಗುರುವಾರ, ಶುಕ್ರವಾರ ಇಡೀ ರಾತ್ರಿ ಮಳೆ ಬಂದ ಪರಿಣಾಮ ಹಲವು ಜಮೀನುಗಳಿಗೆ ನೀರು ನುಗ್ಗಿದೆ.

    ಅರಕೆರೆ ಸಮೀಪ 1800 ಎಕರೆ ಪ್ರದೇಶದಲ್ಲಿನ ಮೆಕ್ಕೆಜೋಳ, ಹತ್ತಿ ಹಾಗೂ ಅಡಕೆ ಸಸಿಗಳು ಜಲಾವೃತವಾಗಿವೆ. ಅಡಕೆ ಬೆಳೆಗಾರರಿಗೆ ಕೊಳೆ ರೋಗದ ಆತಂಕ ಆವರಿಸಿದೆ.

    ಒಂದು ಎಕರೆ ಮೆಕ್ಕೆಜೋಳ ಬಿತ್ತನೆಗೆ 12 ರಿಂದ 15 ಸಾವಿರ ರೂ. ಖರ್ಚಾಗುತ್ತದೆ. ಮಳೆಯ ಕಾರಣಕ್ಕೆ ಈ ವರ್ಷ ಎರಡನೇ ಬಾರಿ ಬಿತ್ತನೆ ಮಾಡಿದ್ದೇವೆ. ಆದರೂ ಬೆಳೆ ಕೈಸೇರದ ಪರಿಸ್ಥಿತಿ ಎದುರಾಗಿದೆ ಎಂದು ರೈತರಾದ ಶಿವನಗೌಡ, ಗುರುಬಸಪ್ಪ, ಚನ್ನಬಸಪ್ಪ ಅಳಲು ತೋಡಿಕೊಂಡರು.

    ಅರಕೆರೆ, ನರಸಗೊಂಡನಹಳ್ಳಿ, ಮಾಸಡಿ ಸೇರಿ ಅನೇಕ ಕಡೆಗಳಲ್ಲಿ ಸಮೀಕ್ಷೆ ನಡೆಸಲಾಗಿತ್ತು. ಈಗ ಮತ್ತೆ ಮಳೆಯಿಂದ ಹಾನಿಯಾಗಿರುವುದರಿಂದ ಅಧಿಕಾರಿಗಳು ಪುನಃ ಸರ್ವೇ ನಡೆಸುವ ಅನಿವಾರ್ಯತೆ ಎದುರಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts