More

    ಭತ್ತ ಕಟಾವಿಗೆ ನಿಗದಿಗಿಂತ ಹೆಚ್ಚು ಹಣ ವಸೂಲಿ

    ಹೊನ್ನಾಳಿ: ಭತ್ತ ಕಟಾವು ಯಂತ್ರಗಳ ಮಾಲೀಕರು ರೈತರಿಂದ ಅಧಿಕ ಹಣ ಪಡೆದು ಅವರನ್ನು ಸಂಕಷ್ಟಕ್ಕೆ ದೂಡುತ್ತಿದ್ದಾರೆ ಎಂದು ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಆರೋಪಿಸಿದರು.

    ಬುಧವಾರ ವಿಜಯವಾಣಿಯೊಂದಿಗೆ ಮಾತನಾಡಿದ ಅವರು, ಜಿಲ್ಲಾಧಿಕಾರಿ ನಿಗದಿಪಡಿಸಿರುವ ದರದಲ್ಲಿ ಎಲ್ಲಿಯೂ ಭತ್ತದ ಕಟಾವು ಕಾರ್ಯ ಆಗುತ್ತಿಲ್ಲ. ಜಿಲ್ಲಾಡಳಿತ ಪ್ರತಿ ಎಕರೆ ಭತ್ತ ಕಟಾವಿಗೆ 1,500 ರೂ. ನಿಗದಿ ಮಾಡಿ ಆದೇಶ ಹೊರಡಿಸಿದೆ. ಆದರೆ ವಾಸ್ತವವಾಗಿ ರೈತರಿಂದ 2,500 ರೂ. ಪಡೆಯಲಾಗುತ್ತಿದೆ. ಟೈರ್ ಯಂತ್ರಗಳಾದರೆ ಪ್ರತಿ ಎಕರೆಗೆ 2,000-2,200 ರೂ., ಚೈನ್ ಯಂತ್ರಗಳಾದರೆ 2,200-2,500 ರೂ. ವಸೂಲಿ ಮಾಡಲಾಗುತ್ತಿದೆ. ಇದೇ ರೀತಿ ಮೆಕ್ಕೆಜೋಳ ಒಡೆಯುವ ಯಂತ್ರಕ್ಕೂ ಹೆಚ್ಚಿನ ಬಾಡಿಗೆ ವಸೂಲಿ ಮಾಡುತ್ತಿದ್ದಾರೆ ಎಂದು ವಿವರಿಸಿದರು.

    ಕ್ವಿಂಟಾಲ್ ಮೆಕ್ಕೆಜೋಳ ಒಡೆಯಲು ಜಿಲ್ಲಾಡಳಿತ 1 ಸಾವಿರದಿಂದ 1,200 ರೂ. ನಿಗದಿಪಡಿಸಿದೆ. ಆದರೆ ರೈತರಿಂದ 1,500-1,800 ರೂ. ವಸೂಲಿ ಮಾಡಲಾಗುತ್ತಿದೆ. ಏತನ್ಮಧ್ಯೆ ಮೆಕ್ಕೆಜೋಳದ ಬೆಲೆ ಸಹ ಕುಸಿದಿರುವುದು ಕೃಷಿಕರನ್ನು ಚಿಂತೆಗೀಡು ಮಾಡಿದೆ ಎಂದರು.

    ಕೂಡಲೇ ಜಿಲ್ಲಾಡಳಿತ ಮಧ್ಯೆ ಪ್ರವೇಶಿಸಿ ರೈತರಿಂದ ನಿಗದಿತ ದರ ಪಡೆಯುವಂತೆ ಯಂತ್ರಗಳ ಮಾಲೀಕರಿಗೆ ಸೂಚಿಸಬೇಕು ಮತ್ತು ಹೆಚ್ಚಿನ ಹಣ ಪಡೆದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts