More

    ತುರ್ತು ಪರಿಸ್ಥಿತಿಯಲ್ಲಿ 112 ಕ್ಕೆ ಕರೆ ಮಾಡಿ

    ಹೊನ್ನಾಳಿ: ಸಾರ್ವಜನಿಕರು ಎಂತಹದ್ದೇ ತುರ್ತು ಪರಿಸ್ಥಿತಿಯಲ್ಲೂ ಹೊಯ್ಸಳ ವಾಹನದ ಸಂಖ್ಯೆಗೆ ಕರೆ ಮಾಡಿ ಸಹಾಯ ಪಡೆಯಬಹುದು ಎಂದು ಸಿಪಿಐ ಟಿ.ವಿ. ದೇವರಾಜ್ ತಿಳಿಸಿದರು.

    ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಹೊಯ್ಸಳ ವಾಹನದ ಸಹಾಯವಾಣಿ ಸಂಖ್ಯೆ 112 ಅನಾವರಣಗೊಳಿಸಿ ಮಾತನಾಡಿದರು.

    ಇಲಾಖೆಯು ಹೊನ್ನಾಳಿ ಹಾಗೂ ನ್ಯಾಮತಿ ಪೊಲೀಸ್‌ಠಾಣೆ ವ್ಯಾಪ್ತಿಗೆ ಎರಡು ಹೊಯ್ಸಳ ವಾಹನ ನೀಡಿದೆ. ಇವುಗಳಿಗೆ ಜಿಲ್ಲೆ ಅಥವಾ ತಾಲೂಕೆಂಬ ಗಡಿ ವ್ಯಾಪ್ತಿ ಇಲ್ಲ. ಹೊಯ್ಸಳ ವಾಹನಕ್ಕೆ ದೂರವಾಣಿ ಕರೆ ಮಾಡಿದರೆ ಸಮೀಪದಲ್ಲಿರುವ ಸ್ಥಳದಿಂದ ತಕ್ಷಣವೇ ಘಟನಾ ಸ್ಥಳಕ್ಕೆ ಬಂದು ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ಮಾಡುತ್ತದೆ ಎಂದು ತಿಳಿಸಿದರು.

    ಯಾರೇ ಆಗಲಿ ತೊಂದರೆಗೊಳಗಾಗಿದ್ದ ವೇಳೆ ಅಥವಾ ತುರ್ತು ಪರಿಸ್ಥಿತಿ ಎದುರಾದಾಗ ಹೊಯ್ಸಳ ವಾಹನ ಸಹಾಯ ಪಡೆಯಬಹುದು ಎಂದರು.

    ದೀಪಾವಳಿ, ಈದ್ ಮಿಲಾದ್, ಮಹಾಪುರುಷರ ಜಯಂತಿ ಕಾರ್ಯಕ್ರಮಗಳನ್ನು ಸರಳವಾಗಿ ಆಚರಿಸಲು ಸರ್ಕಾರ ನಿರ್ದೇಶನ ನೀಡಿದೆ. ಎಲ್ಲರೂ ನಿಯಮದಂತೆ ನಡೆದು ಇಲಾಖೆಯೊಂದಿಗೆ ಸಹಕರಿಸಬೇಕು ಎಂದರು.

    ಮಸೀದಿಗಳಲ್ಲಿ ಪರಸ್ಪರ ಅಂತರದೊಂದಿಗೆ ಪ್ರಾರ್ಥನೆ ಮಾಡಬೇಕು. ಈದ್ ಮಿಲಾದ್ ಸಂದರ್ಭದಲ್ಲಿ ಸಾಮೂಹಿಕ ಪ್ರಾರ್ಥನೆ, ಮೆರವಣಿಗೆ, ಡಿಜೆ ಬಳಕೆಗೆ ಅವಕಾಶ ಇಲ್ಲ. ಇದನ್ನು ಮನಗಂಡು ಸರಳವಾಗಿ ಹಬ್ಬ ಆಚರಿಸಬೇಕು ಎಂದರು.

    ತಾಲೂಕು ವೈದ್ಯಾಧಿಕಾರಿ ಡಾ. ಕೆಂಚಪ್ಪ ಮಾತನಾಡಿ, ಅವಳಿ ತಾಲೂಕಿನ ಪ್ರತಿಯೊಬ್ಬರೂ ಸ್ವಯಂಪ್ರೇರಿತರಾಗಿ ಕರೊನಾ ಪರೀಕ್ಷೆ ಮಾಡಿಸಿಕೊಳ್ಳಬೇಕು. ಕೋವಿಡ್ ಕಡಿಮೆಯಾಗಿದೆ ಎಂಬ ನಿರ್ಲಕ್ಷೃ ಬೇಡ. ಮನೆಯಿಂದ ಹೊರಗಡೆ ಹೋಗುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಿ ಎಂದು ಸಲಹೆ ನೀಡಿದರು.

    ಪಿಎಸ್‌ಐ ತಿಪ್ಪೇಸ್ವಾಮಿ, ಪೊಲೀಸ್ ಪೇದೆ ನಾಗರಾಜ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts