More

    ಹೊಸ ಮನೆ ಖರೀದಿಸಿ ಗೃಹಪ್ರವೇಶಿಸಿದ ಮೊದಲ ದಿನವೇ ಮಹಿಳೆಗೆ ಕಾದಿತ್ತು ಶಾಕ್..!​

    ನ್ಯೂಯಾರ್ಕ್​: ಹೊಸ ಮನೆ ಖರೀದಿಸುವ ಮುನ್ನ ಮಾಲೀಕರು ಮನೆಯ ವಾತಾವರಣ ಸೇರಿದಂತೆ ಅದರ ಪೂರ್ವಾಪರವನ್ನು ತಿಳಿದುಕೊಂಡ ಬಳಿಕ ಮನೆಯನ್ನು ಕೊಂಡುಕೊಳ್ಳುತ್ತಾರೆ. ಆದರೆ, ಹೊಸ ಮನೆಯನ್ನು ಖರೀದಿಸಿದ ಖುಷಿಯಲ್ಲಿದ್ದ ಮಹಿಳೆಯೊಬ್ಬರಿಗೆ ಮರು ಘಳಿಗೆಯಲ್ಲಿ ಶಾಕ್​ ಒಂದು ಎದುರಾಗಿತ್ತು.

    ನ್ಯೂಯಾರ್ಕ್​ನಲ್ಲಿ ಈ ವಿಚಿತ್ರ ಪ್ರಸಂಗ ನಡೆದಿದೆ. ಮನೆ ಖರೀದಿಸಿದ ಮಹಿಳೆ ತನ್ನ ಹೊಸ ನಿವಾಸಕ್ಕೆ ಪ್ರವೇಶ ನೀಡುತ್ತಾಳೆ. ಬಳಿಕ ಇಡೀ ಮನೆಯನ್ನು ಒಂದು ಸುತ್ತು ನೋಡಿ ಬರುವಾಗ ಮನೆಯ ಬೇಸ್​ಮೆಂಟ್​ನ ಗೋಡೆಯಲ್ಲಿ ತಲೆ ಕಾಣುವಂತೆ ಸಮಾಧಿ ಮಾಡಿರುವ ಬೊಂಬೆ ನೋಡಿ ಒಮ್ಮೆಲೆ ದಿಗಿಲು ಬಡಿದಂತೆ ನಿಂತುಬಿಡುತ್ತಾಳೆ.

    ಇದಕ್ಕೆ ಸಂಬಂಧಿಸಿದ ಚಿತ್ರವನ್ನು ಮಾಲಕಿ ತನ್ನ ಜಾಲತಾಣದಲ್ಲಿ ಶೇರ್​ ಮಾಡಿಕೊಂಡಿದ್ದು, 3 ಲಕ್ಷಕ್ಕೂ ಹೆಚ್ಚು ಬಾರಿ ಶೇರ್​ ಆಗಿ, ವೈರಲ್​ ಆಗಿರುವ ಚಿತ್ರಕ್ಕೆ ಪ್ರತಿಕ್ರಿಯೆ ನೀಡಿರುವ ನೆಟ್ಟಿಗರು ತಕ್ಷಣ ಮನೆಯನ್ನು ಖಾಲಿ ಮಾಡಿ ಸಲಹೆ ನೀಡಿದ್ದಾರೆ.

    ಹೊಸ ಮನೆ ಖರೀದಿಸಿ ಗೃಹಪ್ರವೇಶಿಸಿದ ಮೊದಲ ದಿನವೇ ಮಹಿಳೆಗೆ ಕಾದಿತ್ತು ಶಾಕ್..!​

    ಇನ್ನು ಬೊಂಬೆಯನ್ನು ಈ ರೀತಿ ಸಮಾಧಿ ಮಾಡುವುದು 60 ಮತ್ತು 70ರ ದಶಕದಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಟ್ರೆಂಡ್​ ಆಗಿತ್ತು. ಇದರಲ್ಲಿ ಹೆದರುವಂಥದ್ದು ಏನಿಲ್ಲ ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ. ಆದರೆ, ಅನೇಕರು ಮನೆಯನ್ನು ಖಾಲಿ ಮಾಡುವುದೇ ಒಳಿತು ಎಂದಿದ್ದಾರೆ. ಮನೆಗೂ ಬರುವ ಮುನ್ನ ಬೇಸ್​ಮೆಂಟ್​​ ಏಕೆ ಪರಿಶೀಲಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ.

    ಇತ್ತ ಫೋಟೋ ವೈರಲ್​ ಆದ ಬಳಿಕ ಪ್ರತಿಕ್ರಿಯೆ ನೀಡಿರುವ ಎಲ್ಲರಿಗೂ ಧನ್ಯವಾದ ತಿಳಿಸಿರುವ ಮನೆ ಮಾಲಕಿ, ನನ್ನ ಸಹೋದರಿಯ ನ್ಯೂ ಬೇಬಿಗೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಕ್ಕೆ ನಿಮಗೆಲ್ಲ ಧನ್ಯವಾದಗಳು ಎಂದಿದ್ದಾರೆ. ಆದರೂ, ಈ ರೀತಿ ಅಚಾನಕ್​ ಆಗಿ ಗೋಡೆಯಲ್ಲಿ ಬೊಂಬೆ ಪತ್ತೆಯಾದರೆ ಯಾರಿಗೆ ತಾನೇ ಭಯವಾಗಲ್ಲ ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದು, ನೆಟ್ಟಿಗರ ಸಲಹೆಯಂತೆ ಮನೆ ಖಾಲಿ ಮಾಡುತ್ತಾರಾ ಎಂಬುದೇ ಇದೀಗ ಪ್ರಶ್ನೆಯಾಗಿದೆ. (ಏಜೆನ್ಸೀಸ್​)

    ಗರ್ಭಿಣಿ ಅಂದುಕೊಂಡ ಪೊಲೀಸರು, ಆದ್ರೂ ಅನುಮಾನ ಪರಿಹರಿಸಿಕೊಳ್ಳಲು ಮುಂದಾದಾಗ ಕಾದಿತ್ತು ಅಚ್ಚರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts