More

    ಹೋಮಿಯೋಪಥಿ ದಿನಾಚರಣೆ, ಹ್ಯಾನೆಮನ್ ಪ್ರತಿಮೆ ಅನಾವರಣ

    ಬೆಳಗಾವಿ: ನಗರದ ಯಳ್ಳೂರ ರಸ್ತೆಯ ಕೆಎಲ್‌ಇ ಆಸ್ಪತ್ರೆಯಲ್ಲಿರುವ ಕೆಎಲ್‌ಇ ಹೋಮಿಯೋಪಥಿ ಮೆಡಿಕಲ್ ಕಾಲೇಜ್‌ನಲ್ಲಿ ಶನಿವಾರ ವಿಶ್ವ ಹೋಮಿಯೋಪಥಿ ದಿನ ಆಚರಿಸಲಾಯಿತು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರು ಹೋಮಿಯೋಪಥಿ ಪಿತಾಮಹ ಡಾ.ಸ್ಯಾಮುವೆಲ್ ಹ್ಯಾನೆಮನ್ ಪ್ರತಿಮೆ ಅನಾವರಣಗೊಳಿಸಿದರು.

    ವಿದ್ಯಾರ್ಥಿನಿ ಅಕ್ಷತಾ ಪಾಟೀಲ ಅವರು, ಡಾ.ಹ್ಯಾನೆಮನ್ ಅವರ ಜೀವನ ಚರಿತ್ರೆ ವಿವರಿಸಿದರು. ಶಾಸಕ ಅಭಯ ಪಾಟೀಲ, ಕೆಎಲ್‌ಇ ವಿವಿ ಕುಲಪತಿ ಡಾ.ವಿವೇಕ ಸಾವೋಜಿ, ಕೆಎಲ್‌ಇ ಸೆಂಟೇನರಿ ಚಾರಿಟೆಬಲ್ ಆಸ್ಪತ್ರೆ ಸಂಚಾಲಕ ಡಾ. ಎಸ್.ಸಿ. ಧಾರವಾಡ, ಯುಎಸ್‌ಎಂ ಕೆಎಲ್‌ಇ ಕಾಲೇಜ್ ಸಂಚಾಲಕ ಡಾ. ಎಚ್.ಬಿ. ರಾಜಶೇಖರ ಉಪಸ್ಥಿತರಿದ್ದರು. ಪ್ರಾಚಾರ್ಯ ಡಾ.ಮುಕುಂದ ಉಡಚಣಕರ ಸ್ವಾಗತಿಸಿದರು. ಡಾ.ಸುಪ್ರಿಯಾ ಕುಲಕರ್ಣಿ ಅತಿಥಿ ಪರಿಚಯಿಸಿದರು. ಡಾ.ಸ್ವರೂಪಾ ಪಾಟೀಲ ವಂದಿಸಿದರು. ಡಾ.ನಿಲೇಶ ಚಾಧರಿ ನಿರೂಪಿಸಿದರು.

    ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗುವಂತೆ 5 ಎಕರೆ ಜಾಗದಲ್ಲಿ ಪ್ರತ್ಯೇಕವಾಗಿ ಕೆಎಲ್‌ಇ ಹೋಮಿಯೋಪಥಿ ಮೆಡಿಕಲ್ ಕಾಲೇಜ್ ಕಟ್ಟಡ ನಿರ್ಮಿಸಲಾಗುವುದು. ಕಾಮಗಾರಿಗೆ ಶೀಘ್ರ ಶಂಕುಸ್ಥಾಪನೆ ನೆರವೇರಿಸಲಾಗುವುದು.
    | ಡಾ.ಪ್ರಭಾಕರ ಕೋರೆ ಕಾರ್ಯಾಧ್ಯಕ್ಷ, ಕೆಎಲ್‌ಇ ಸಂಸ್ಥೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts