More

    ಪೊಲೀಸರಿಗೆ ಸಹಕರಿಸುವ ಗೃಹರಕ್ಷಕ ದಳ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಹೇಳಿಕೆ

    ಮಂಡ್ಯ: ಗೃಹರಕ್ಷಕ ಇಲಾಖೆಯು 1946ರಲ್ಲಿ ಪ್ರಾರಂಭಗೊಂಡಿತು. ಗಲಾಟೆ, ದೊಂಬಿಯಾದಂತಹ ಸಂದರ್ಭಗಳಲ್ಲಿ ಪೊಲೀಸ್ ಇಲಾಖೆಗೆ ಸಹಾಯ ಮಾಡುವ ಒಂದು ಸಂಸ್ಥೆಯಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಹೇಳಿದರು.
    ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಜಿಲ್ಲಾ ಗೃಹರಕ್ಷಕ ದಳದಿಂದ ಭಾನುವಾರ ಆಯೋಜಿಸಿದ್ದ 60ನೇ ಉತ್ಥಾನ ದಿನಾಚರಣೆಯಲ್ಲಿ ಮಾತನಾಡಿದರು. ಕೇಂದ್ರ ಸರ್ಕಾರ ಗೃಹರಕ್ಷಕ ದಳದವರ ಸಹಕಾರ ಪಾತ್ರವನ್ನು ಮನಗೊಂಡು ಪ್ರತಿ ರಾಜ್ಯದಲ್ಲಿಯೂ ಇಂತಹ ಸಂಸ್ಥೆ ಸ್ಥಾಪನೆಯಾಗಬೇಕೆಂದು ತೀರ್ಮಾನಿಸಿತು. ಪ್ರತಿ ರಾಜ್ಯದಲ್ಲಿಯೂ ಪೊಲೀಸ್ ಇಲಾಖೆಗಷ್ಟೇ ಅಲ್ಲದೆ ಬೇರೆ ಇಲಾಖೆಗಳಿಗೂ ಸಹಕಾರ ದೊರಕಬೇಕು ಎಂಬ ಅಂಶದ ಆಧಾರದ ಮೇಲೆ ಪ್ರತಿ ಜಿಲ್ಲೆ, ತಾಲೂಕಿನಲ್ಲೂ 1962ರಲ್ಲಿ ಗೃಹರಕ್ಷಕ ದಳ ಪ್ರಾರಂಭಗೊಂಡಿತು. ಗೃಹರಕ್ಷಕದಳದವರು ಸಹ ಪೊಲೀಸ್ ಸಿಬ್ಬಂದಿಯವರಂತೆ ಶ್ರಮ ವಹಿಸಿ ಕೆಲಸ ಮಾಡುತ್ತಾರೆ. ಸಮಾಜದಲ್ಲಿ ಒಳ್ಳೆಯ ಹೆಸರು ಇದೆ ಎಂದರು.
    ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ಡಿ.ವಿನೋದ್ ಖನ್ನಾ, ಸೀನಿಯರ್ ಪ್ಲಟೂನ್ ಕಮಾಂಡೆಂಟ್ ಯೋಗೇಶ್, ಜಿಲ್ಲಾ ಗೃಹರಕ್ಷಕ ದಳದ ಸಹಾಯಕ ಆಡಳಿತಾಧಿಕಾರಿ ಸೂರ್ಯನಾರಾಯಣ ಉಡುಪ, ಡೆಪ್ಯೂಟಿ ಕಮಾಂಡೆಂಟ್ ಎ.ಪುರುಷೋತ್ತಮರಾವ್ ಇತರರಿದ್ದರು.
    ಇದಕ್ಕೂ ಮುನ್ನ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಮೆರವಣಿಗೆಗೆ ಚಾಲನೆ ನೀಡಿದ ಅಪರ ಪೊಲೀಸ್ ವರಿಷ್ಠಾಧಿಕಾರಿ ವೇಣುಗೋಪಾಲ್, ಬಹಳ ನಿಷ್ಠೆಯಿಂದ ಕೆಲಸಗಳನ್ನು ಗೃಹರಕ್ಷಕ ದಳದ ಸಿಬ್ಬಂದಿ ಮಾಡುತ್ತಿದ್ದಾರೆ. ಅದೇ ರೀತಿ ಶಿಸ್ತು ಮತ್ತು ನಿಷ್ಠೆಯಿಂದ ಕೆಲಸ ಮಾಡಿ ಎಂದು ಹಾರೈಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts