More

    ಮಹಿಳಾ ದಿನಕ್ಕೆ ಕ್ರಿಕೆಟ್‌ಗೆ ಮಣೆ ! ದೇಸಿ ಕ್ರೀಡೆ ನಿರ್ಲಕ್ಷಿಸಿದ ಗ್ರಾಮೀಣಾಭಿವೃದ್ಧಿ ಇಲಾಖೆ 

     ತುಮಕೂರು: ದೇಸಿ ಎಂದೆಲ್ಲ ಬೊಬ್ಬೆ ಹೊಡೆಯುವ ಬಿಜೆಪಿ ಸರ್ಕಾರವು ಈ ಬಾರಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಗೆ ಗ್ರಾಮೀಣ ಹೆಣ್ಣುಮಕ್ಕಳಿಗೆ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿರುವುದು ಹಲವರ ಕಣ್ಣು ಕೆಂಪಾಗಿಸಿದೆ. ಗ್ರಾಮೀಣಾಭಿವೃದ್ಧಿ ಇಲಾಖೆಯೇ ಗ್ರಾಮೀಣ ಕ್ರೀಡೆಗಳಿಗೆ ಮನ್ನಣೆ ನೀಡದಿರುವುದು ಸಾಕಷ್ಟು ಚರ್ಚೆಗೆ ಗ್ರಾಸ ಒದಗಿಸಿದೆ. ಗ್ರಾಮೀಣಾಭಿವೃದ್ಧಿ ಇಲಾಖೆಯು ಈ ಬಾರಿ ಮಹಿಳಾ ದಿನಕ್ಕೆ ತರಾತುರಿಯಲ್ಲಿ ಕ್ರಿಕೆಟ್ ಪಂದ್ಯಾವಳಿ ಏರ್ಪಡಿಸಿದ್ದು, ಈವರೆಗೆ ಯಾವುದೇ ಹೆಣ್ಣುಮಕ್ಕಳ ತಂಡಗಳು ಕ್ರಿಕೆಟ್ ಆಡಲು ಆಸಕ್ತಿ ತೋರಿಲ್ಲ.

    ಕಬಡ್ಡಿ, ಖೋ-ಖೋ, ಥ್ರೋಬಾಲ್ ಸೇರಿ ದೇಸಿ ಕ್ರೀಡೆಗಳನ್ನು ಕೈಬಿಟ್ಟು 19 ವರ್ಷದೊಳಗಿನ ಗ್ರಾಮೀಣ ಹೆಣ್ಣುಮಕ್ಕಳಿಗೆ ಕ್ರಿಕೆಟ್ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ. ದ್ವಿತೀಯ ಪಿಯು, ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಹತ್ತಿರವಿದ್ದು, ಪರೀಕ್ಷಾ ಕಾಲದಲ್ಲಿ ಕಾಟಾಚಾರಕ್ಕೆ ಪಂದ್ಯಾವಳಿ ಆಯೋಜಿಸುವುದು ಆರ್‌ಡಿಪಿಆರ್ ಉದ್ದೇಶ ಎಂಬಂತಾಗಿದೆ.

    ಮಾ.8ರೊಳಗೆ ಹೆಣ್ಣು ಮಕ್ಕಳಿಗೆ ಕ್ರಿಕೆಟ್ ಪಂದ್ಯ ಆಯೋಜಿಸಲು ಫೆ.21ರಂದೇ ಪಂಚಾಯತ್ ರಾಜ್ ಆಯುಕ್ತಾಲಯವು ಆದೇಶ ಹೊರಡಿಸಿತ್ತು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಕ್ರಿಕೆಟ್ ಪಂದ್ಯ ನಡೆಸಲು ಸೂಚನೆ ನೀಡಲಾಗಿತ್ತಾದರೂ ಇಲಾಖೆಗಳ ನಡುವಿನ ಸಮನ್ವಯತೆ ಕೊರತೆಯಿಂದ ಕ್ರಿಕೆಟ್ ಪಂದ್ಯಾವಳಿ ಸಂಘಟನೆಗೆ ದೊಡ್ಡ ಹಿನ್ನೆಡೆಯಾಗಿದೆ. ಅಲ್ಲದೆ, ತಾಲೂಕು, ಜಿಲ್ಲಾಮಟ್ಟದಲ್ಲೂ ಯಾರೊಬ್ಬರು ಕ್ರಿಕೆಟ್ ಆಡುವ ಆಸಕ್ತಿ ತೋರದಿರುವುದು ಇಲಾಖೆಯ ಎಡವಟ್ಟಿನ ನಿರ್ಧಾರಕ್ಕೆ ಸಾಕ್ಷಿಯಾಗಿದೆ.

    ಹೆಣ್ಮಕ್ಕಳಿಗೆ ಟ್ರಾೃಕ್ ಸೂಟ್ !: ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ (ಡಿವೈಎಸ್‌ಒ) ವತಿಯಿಂದ ಟ್ರಾೃಕ್ ಸೂಟ್ ಒದಗಿಸಬೇಕಿದೆ. ಇನ್ನೂ ಜಿಪಂ, ತಾಪಂ ವತಿಯಿಂದ ವಿಜೇತ ತಂಡಗಳಿಗೆ ಬಹುಮಾನ, ಭಾಗವಹಿಸುವ ಕ್ರೀಡಾಪಟುಗಳಿಗೆ ಸರ್ಟಿಫಿಕೇಟ್ ನೀಡಬೇಕಿದೆ.

    ಗ್ರಾಮೀಣ ಹೆಣ್ಣು ಮಕ್ಕಳಲ್ಲಿ ಆತ್ಮವಿಶ್ವಾಸದ ಜತೆಗೆ ಮನರಂಜನೆಗಾಗಿ ಮಹಿಳಾ ದಿನದಂದು ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ. ಸರ್ಕಾರದ ಆದೇಶದಂತೆ ತಾಲೂಕು ಮಟ್ಟದಲ್ಲಿ ಇಒಗಳು ಪಂದ್ಯಾವಳಿ ಸಂಘಟಿಸುತ್ತಿದ್ದು, ಜಿಲ್ಲಾಮಟ್ಟದಲ್ಲೂ ಏರ್ಪಡಿಸಲಾಗಿದೆ.
    | ಡಾ.ಕೆ.ವಿದ್ಯಾಕುಮಾರಿ, ಜಿಪಂ ಸಿಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts