More

    ಟೀಕೆ ಮಾಡೋದ್ರಲ್ಲಿ ಸಿದ್ದರಾಮಯ್ಯ ಅವರು ಯಾರನ್ನೂ ಬಿಡಲ್ಲ: ಸಚಿವ ಆರಗ ಜ್ಞಾನೇಂದ್ರ

    ಶಿವಮೊಗ್ಗ: ದೇಶದಲ್ಲಿ ತಾವೊಬ್ಬರೇ ಸರಿ ಎಂದು ಸಿದ್ದರಾಮಯ್ಯ ಅವರು ಅಂದುಕೊಂಡಿದ್ದಾರೆ, ತಮ್ಮನ್ನು ಬಿಟ್ಟು ಬೇರೆಲ್ಲರನ್ನೂ ಟೀಕೆ ಮಾಡುವುದೇ ಅವರ ಕೆಲಸವಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

    ರಾಷ್ಟ್ರಪತಿ ಎನ್ ಡಿಎ ಅಭ್ಯರ್ಥಿ ಕುರಿತು ಸಿದ್ದರಾಮಯ್ಯ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ತಮ್ಮನ್ನು ಬಿಟ್ಟು, ಬೇರೆ ಎಲ್ಲರನ್ನೂ ಟೀಕೆ ಮಾಡೋ ಒಬ್ಬ ರಾಜಕಾರಣಿ ದೇಶದಲ್ಲಿ ಇದ್ದಾರೆ ಅಂದರೆ ಅದು ಸಿದ್ದರಾಮಯ್ಯನವರು. ಹೀಗೆ ಹೇಳ್ತಾ ಹೋಗ್ತಾ ಇರ್ತಾರೆ. ಅವರು ಸರಿ ಇಲ್ಲ. ಇವರು ಸರಿ ಇಲ್ಲ ಎಂದು,ಎಲ್ಲವೂ ಸರಿ ಇರೋದು ಅವರೊಬ್ಬರೇ ಮಾತ್ರ ಎಂದು ವ್ಯಂಗ್ಯವಾಡಿದರು. ಕಾಂಗ್ರೆಸ್ ಗೆಲ್ಲೋದಿಲ್ಲ ಅನ್ನೋದು ಸಿದ್ದರಾಮಯ್ಯಗೆ ಗೊತ್ತು. ಹಾಗಾಗಿ ಎಲ್ಲರನ್ನೂ ಟೀಕಿಸುತ್ತ ಕಾಲ ಕಳೆಯುತ್ತಿದ್ದಾರೆ ಎಂದರು.

    ಪಿಎಸ್​ಐ ಮರುಪರೀಕ್ಷೆ ಸದ್ಯಕ್ಕಿಲ್ಲ: ಪಿಎಸ್​​ಯ ಮರುಪರೀಕ್ಷೆ ದಿನಾಂಗ ಇನ್ನೂ ನಿಗದಿಯಾಗಿಲ್ಲ. ತನಿಖೆ ಪೂರ್ಣಗೊಂಡ ಬಳಿಕವೇ ಪ್ರಕಟಿಸಲಾಗುವುದು ಎಂದು ತಿಳಿಸಿದರು.ಯಾರನ್ನೂ ಪ್ರಕರಣದಿಂದ ಕೈಬಿಡುವ ಪ್ರಶ್ನೆ ಇಲ್ಲ, ಯಾರ ಒತ್ತಡವೂ ನಡೆಯುವುದಿಲ್ಲ, ಸಿಐಡಿಗೆ ಮುಕ್ತ ಅವಕಾಶ ನೀಡಿದ್ದೇವೆ ಎಂದರು.

    ಪೊಲೀಸರಿಂದಲೇ ಜನಜಾಗೃತಿ ಆಗಬೇಕು: ಶಿವಮೊಗ್ಗದಲ್ಲಿ ಕರ್ತವ್ಯ ನಿರತ ಪೊಲೀಸ್ ಮೇಲೆ ಹಲ್ಲೆ ವಿಚಾರದ ಬಗ್ಗೆ ಮಾತನಾಡಿದ ಅವರು, ಆರೋಪಿಯನ್ನು ಬಂಧಿಸಲಾಗಿದ್ದು, ಸೂಕ್ತ ಕಾನೂನು ಕ್ರಮ ಕೈಗೊಳ್ತೇವೆ. ಕೆಲವರಿಗೆ ಪೋಲಿಸ್ ಅಂದ್ರೆನೇ ಭಯ, ಗೌರವ ಇಲ್ಲದಿರೋ ಸನ್ನಿವೇಶ ಇರುತ್ತೆ, ಆಗ ಪೊಲೀಸ್​ ಏನು ಎಂಬ ಬಗ್ಗೆ ಪೊಲೀಸರಿಂದಲೇ ಹೇಳಿಸುವ ಕೆಲಸ ಆಗಲಿದೆ ಎಂದರು. (ದಿಗ್ವಿಜಯ ನ್ಯೂಸ್​)

    ಮದುವೆ ಸಮಾರಂಭದಲ್ಲಿ ತನ್ನದೇ ಬಂದೂಕಿಗೆ ಬಲಿಯಾದ ಸೈನಿಕ! ಮದುಮಗನ ವಿರುದ್ಧ ದೂರು ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts