More

    ಪೌರ ಕಾರ್ವಿುಕರಿಗೆ ತಲುಪದ ಗೃಹ ಭಾಗ್ಯ

    ರಾಣೆಬೆನ್ನೂರ: ಇಲ್ಲಿಯ ನಗರಸಭೆ ಪೌರ ಕಾರ್ವಿುಕರಿಗೆ ಆಶ್ರಯ ನೀಡುವ ಉದ್ದೇಶದಿಂದ ಕೂನಬೇವು ಪ್ಲಾಟ್​ನಲ್ಲಿ ಜಿ ಪ್ಲಸ್ ಒನ್ ಮಾದರಿಯಲ್ಲಿ ವಸತಿ ಗೃಹಗಳನ್ನು ನಿರ್ವಿುಸಲಾಗಿದೆ. ಉದ್ಘಾಟನೆಯೂ ಆಗಿದೆ. ಆದರೆ, ಈತನಕ ಅವುಗಳನ್ನು ವಿತರಣೆ ಮಾಡದಿರುವುದು ಫಲಾನುಭವಿಗಳ ಆಕ್ರೋಶಕ್ಕೆ ಕಾರಣವಾಗಿದೆ.

    ನಗರಸಭೆ ವತಿಯಿಂದ ಪೌರ ಕಾರ್ವಿುಕರ ಗೃಹ ಭಾಗ್ಯ ಯೋಜನೆಯಡಿ 2 ಕೋಟಿ ರೂಪಾಯಿಗೂ ಅಧಿಕ ಅನುದಾನದಲ್ಲಿ ಜಿ ಪ್ಲಸ್ ಒನ್ ಮಾದರಿಯಲ್ಲಿ ಒಟ್ಟು 30 ಮನೆಗಳನ್ನು ನಿರ್ವಿುಸಲಾಗಿದೆ. 2020 ನವೆಂಬರ್ 23ರಂದು ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿಯವರು ಮನೆಗಳನ್ನು ಉದ್ಘಾಟಿಸಿದ್ದಾರೆ.

    ನಗರಸಭೆಯ 30 ಪೌರ ಕಾರ್ವಿುಕ ಫಲಾನುಭವಿಗಳಿಗೆ ಮನೆಗಳ ಹಂಚಿಕೆ ಮಾಡಲಾಗಿದೆ. ಈ ಎಲ್ಲ ಕಾರ್ಯ ಮುಗಿದು ಐದು ತಿಂಗಳು ಕಳೆಯುತ್ತ ಬಂದರೂ ಮನೆಗಳಿಗೆ ವಿದ್ಯುತ್ ಸಂಪರ್ಕ, ಒಳಚರಂಡಿ ಸಂಪರ್ಕ ಕಲ್ಪಿಸದ ಕಾರಣ ಇಂದಿಗೂ ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿಲ್ಲ.

    ಪೌರ ಕಾರ್ವಿುಕರು ಮನೆಗಳ ಉದ್ಘಾಟನೆಯಾದ ಕೂಡಲೆ ತಮಗೆ ಸೇರಿದ ಮನೆಗಳಲ್ಲಿ ಪೂಜೆ ಸಹ ಮಾಡಿದ್ದರು. ಆದರೆ, ನಗರಸಭೆ ಅಧಿಕಾರಿಗಳು ನಾನಾ ಕಾರಣ ಹೇಳಿ ಮನೆ ಹಸ್ತಾಂತರ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದ್ದಾರೆ. ಇದರಿಂದ ಪೌರ ಕಾರ್ವಿುಕರು ನಗರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಪೌರ ಕಾರ್ವಿುಕರು ಸದ್ಯ ಹೆಂಚಿನ ಚಿಕ್ಕಪುಟ್ಟ ಮನೆಗಳಲ್ಲಿ ವಾಸ ಮಾಡುತ್ತಿದ್ದಾರೆ. ಒಂದೇ ಮನೆಯಲ್ಲಿ ಎರಡ್ಮೂರು ಕುಟುಂಬಗಳು ಜೀವನ ನಡೆಸುತ್ತಿದ್ದಾರೆ. ಹೀಗಾಗಿ ನೂತನ ಮನೆಗಳು ‘ಯಾವಾಗ ನಮ್ಮ ಕೈ ಸೇರಲಿವೆ’ ಎಂದುಕೊಂಡು ಪೌರ ಕಾರ್ವಿುಕರು ಕಾಯುತ್ತಿದ್ದಾರೆ. ಅಲ್ಲದೆ, ನಗರಸಭೆ ಅಧಿಕಾರಿಗಳು ವಿದ್ಯುತ್ ಸಂಪರ್ಕ ತೆಗೆದುಕೊಳ್ಳುವುದು ಫಲಾನುಭವಿಗಳ ಜವಾಬ್ದಾರಿ ಎಂದು ಹೇಳುತ್ತಿದ್ದಾರೆ. ಸರ್ಕಾರ ಮನೆ ನಿರ್ವಣದ ಸಂಪೂರ್ಣ ಅನುದಾನವನ್ನು ನೀಡಿದೆ. ಆದ್ದರಿಂದ ನಗರಸಭೆಯವರು ವಿದ್ಯುತ್ ಸಂಪರ್ಕ ಸೇರಿ ಎಲ್ಲ ರೀತಿಯ ಸೌಲಭ್ಯಗಳ ವೆಚ್ಚವನ್ನು ಭರಿಸಬೇಕು ಎಂದು ಫಲಾನುಭವಿಗಳು ಆಗ್ರಹಿಸಿದ್ದಾರೆ.

    ನಗರಸಭೆಯಿಂದ ಕೋಟ್ಯಂತರ ರೂ. ಖರ್ಚು ಮಾಡಿ ಪೌರ ಕಾರ್ವಿುಕರಿಗಾಗಿ ಮನೆ ನಿರ್ವಿುಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿಯವರು ಮನೆಗಳ ಹಸ್ತಾಂತರಕ್ಕೆ ಚಾಲನೆ ನೀಡಿದ್ದಾರೆ. ಆದರೆ, ನಗರಸಭೆಯವರು ನಾನಾ ಕಾರಣದ ನೆಪ ಹೇಳಿ ಇಂದಿಗೂ ನಮಗೆ ವಿತರಿಸಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೆ ಸೂಕ್ತ ಕ್ರಮ ಕೈಗೊಂಡು ಮನೆ ಹಸ್ತಾಂತರಿಸಬೇಕು.

    | ಹೆಸರು ಹೇಳಲ್ಚಿಸದ ಫಲಾನುಭವಿ

    ಪೌರ ಕಾರ್ವಿುಕರಿಗಾಗಿ ನಿರ್ವಿುಸಿದ ಮನೆಗಳಿಗೆ ಒಳಚರಂಡಿ ಸಂಪರ್ಕ ಇರಲಿಲ್ಲ. ಇದೀಗ ಒಳಚರಂಡಿ ಕಾಮಗಾರಿ ಮಾಡಲಾಗಿದೆ. ಎರಡ್ಮೂರು ದಿನಗಳಲ್ಲಿ ಎಲ್ಲವನ್ನೂ ಸರಿಪಡಿಸಿ ಆದಷ್ಟು ಬೇಗ ಫಲಾನುಭವಿಗಳಿಗೆ ನೀಡಲಾಗುವುದು. ವಿದ್ಯುತ್ ಮೀಟರ್ ಅಳವಡಿಕೆ ಆಯಾ ಮನೆಯ ಫಲಾನುಭವಿ ಹೆಸರಿನಲ್ಲಿ ತೆಗೆದುಕೊಳ್ಳುವ ಕಾರಣ ವಿದ್ಯುತ್ ಸಂಪರ್ಕವನ್ನು ಆಯಾ ಮನೆಯವರೇ ತೆಗೆದುಕೊಳ್ಳಬೇಕು.

    | ಡಾ. ಎನ್. ಮಹಾಂತೇಶ, ನಗರಸಭೆ ಆಯುಕ್ತ ರಾಣೆಬೆನ್ನೂರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts