More

    ಲಾಳನಕೆರೆಯಲ್ಲಿ ಚಂಡಿಕಾ ಹೋಮ ಸಂಪನ್ನ

    ಗಂಡಸಿ : ವರುಣ ದೇವನ ಕೃಪೆ ಕೋರಿ ಮಳೆಯನ್ನು ಕರುಣಿಸುವಂತೆ ಅರಸೀಕೆರೆ ತಾಲೂಕಿನ ಲಾಳನಕೆರೆಯಲ್ಲಿ ಗ್ರಾಮಸ್ಥರು ಗ್ರಾಮದೇವತೆಯಾದ ಶ್ರೀ ಮಾರಿಕಾಂಬಾ ದೇವಿ ಸನ್ನಿಧಿಯಲ್ಲಿ ಶ್ರೀ ನವ ಚಂಡಿಕಾ ಹೋಮ ನಡೆಸಿದರು.
    ಮಳೆಯ ಕೊರತೆಯಿಂದ ಬರಗಾಲ ಆವರಿಸಿದ್ದು, ಮಳೆ-ಬೆಳೆ ಇಲ್ಲದೆ ರೈತ ಕುಟುಂಬಗಳು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿವೆ. ಮೇವಿನ ಕೊರತೆಯಿಂದ ಜಾನುವಾರುಗಳನ್ನು ನಿರ್ವಹಣೆ ಮಾಡುವುದು ಕಷ್ಟವಾಗುತ್ತಿದೆ. ಜಾನುವಾರು ಸಂತೆಗಳಲ್ಲಿ ದನಗಳ ಮಾರಾಟ ಮಾಡಲು ಹೋದರೆ ಕಡಿಮೆ ಬೆಲೆಗೆ ಕೇಳುತ್ತಿದ್ದಾರೆ. ಅಗ್ಗದ ಬೆಲೆಗೆ ದನ-ಕರುಗಳನ್ನು ಮಾರಾಟ ಮಾಡಿ ಕೈ ತೊಳೆದುಕೊಳ್ಳುವ ಪರಿಸ್ಥಿತಿ ಉದ್ಭವವಾಗಿದೆ. ಈ ಪರಿಸ್ಥಿತಿಯಿಂದ ಹೊರಬರಲು
    ಮಳೆ ಕರುಣಿಸುವಂತೆ ಗ್ರಾಮಸ್ಥರು ದೇವಿಯಲ್ಲಿ ಪ್ರಾರ್ಥಿಸಿಕೊಂಡರು. ಚಂಡಿಕಾ ಹೋಮಕ್ಕೆ ಆಗಮಿಸಿದ್ದ ಸಾವಿರಾರು ಭಕ್ತರಿಗೆ ಅನ್ನ ದಾಸೋಹ ಮಾಡಲಾಯಿತು. ತಿಪಟೂರು ತಾಲೂಕಿನ ಕೆರಗೋಡಿ ರಂಗಾಪುರ ಮಠದ ಶ್ರೀ ಪರದೇಶಿಕೇಂದ್ರ ಸ್ವಾಮೀಜಿ ದೇವಿಯ ದರ್ಶನ ಪಡೆದು ಭಕ್ತರಿಗೆ ಆಶೀರ್ವದಿಸಿದರು. ಪೂಜಾ ಕಾರ್ಯಕ್ರಮದಲ್ಲಿ ಗುಡಿ ಗೌಡ ಶಿವಣ್ಣ, ತೋಟದ ಮನೆ ಸಣ್ಣೇಗೌಡ, ಮಾರಿಕಾಂಬಾ ಸಮಿತಿ ಅಧ್ಯಕ್ಷ ಆಗ್ರೋ ಬಾಬು, ಕಾರ್ಯದರ್ಶಿ ತಮ್ಮಯ್ಯ ಇತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts