More

    ಬಣ್ಣದಲ್ಲಿ ಮಿಂದೆದ್ದ ಜನತೆ

    ಕೊಪ್ಪಳ: ನಗರ ಸೇರಿ‌ ಜಿಲ್ಲಾದ್ಯಂತ ಹೋಳಿ ಹಬ್ಬದ ಅಂಗವಾಗಿ ಬುಧವಾರ ಜನರು ಬಣ್ಣದಲ್ಲಿ ಮಿಂದೆದ್ದರು.

    ಗ್ರಾಮೀಣ ಹಬ್ಬಗಳಲ್ಲಿ‌ ಹೋಳಿ ಹಬ್ಬವು ಪ್ರಮುಖ ಸ್ಥಾನ ಪಡೆದಿದೆ. ಮಂಗಳವಾರ ರಾತ್ರಿ ಕಾಮದಹನ ಮಾಡಿದ ಜನತೆ ಬುಧವಾರ ಬೆಳಗಿನಿಂದಲೇ ಓಕುಳಿ ಆಡಲು ಶುರು ಮಾಡಿದರು. ನಗರದ ಗಡಿಯಾರ ಕಂಬ, ಜವಾಹರ ರಸ್ತೆ, ಪ್ಯಾಟಿ ಈಶ್ವರ ದೇವಸ್ಥಾನ, ಶಾರದಾ ಟಾಕೀಸ್ ಹತ್ತಿರ, ಟಾಂಗಾಕೂಟ ಇತರೆಡೆ ಕಾಮದಹನ ಮಾಡಲಾಯಿತು. ಯುವಕರು, ಮಕ್ಕಳು ಕಾಮಣ್ಣನ ನೆನೆದು ಬಗೆ ಬಗೆಯಲ್ಲಿ ಹಾಡಿದರು.

    ಬಣ್ಣದಲ್ಲಿ ಮಿಂದೆದ್ದ ಜನತೆ

    ಇಂದು ಬೆಳಗ್ಗೆಯಿಂದಲೇ ಮಕ್ಕಳು, ಯುವಕರು, ಗಣ್ಯರು ಬಗೆ ಬಗೆ ಬಣ್ಣಗಳಲ್ಲಿ ಮಿಂದೆದ್ದರು. ಪರಸ್ಪರ ರಂಗು ಎರಚಿ ಶುಭಾಶಯ ಕೋರಿದರು. ಗುಂಪು ಗುಂಪಾಗಿ ಮನೆ ಮನೆಗೆ ತೆರಳಿ ಸ್ನೇಹಿತರು,‌ಆತ್ಮೀಯರಿಗೆ ಬಣ್ಣ ಹಾಕಿದರು. ಕೆಲ ಯುವಕರು ಬೈಕ್ ರೈಡ್ ಮಾಡಿ ಹರ್ಷ ಪಟ್ಟರು.

    ಬಣ್ಣದಲ್ಲಿ ಮಿಂದೆದ್ದ ಜನತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts