More

    ನಾಟಿ ಪದ್ಧತಿ ಪಾಲಿಸಿದರೆ ಅಧಿಕ ಇಳುವರಿ

    ಹೊಳಲ್ಕೆರೆ: ರೈತರು ಸಾಲು ರಾಗಿ ಬಿತ್ತನೆ ಪದ್ಧತಿ ಬದಲು ಗುಳಿ (ನಾಟಿ) ಪದ್ಧತಿ ಅಳವಡಿಸಿಕೊಂಡು ಹೆಚ್ಚಿನ ಇಳುವರಿ ಪಡೆಯಬಹುದು ಎಂದು ಕೃಷಿ ತಾಂತ್ರಿಕ ಸಹಾಯಕ ಗೋಪಿಕೃಷ್ಣ ಹೇಳಿದರು.

    ತಾಲೂಕಿನ ಬೊಮ್ಮನಹಳ್ಳಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಾಗಿ ಬೆಳೆ ಕ್ಷೇತ್ರೋತ್ಸವದಲ್ಲಿ ಮಾತನಾಡಿದರು.

    ರಾಗಿ ಸಾಲು ಬಿತ್ತನೆಗೆ ಎಕರೆಗೆ 20-25 ಸೇರು ಕಾಳು ಬೇಕಾಗುತ್ತದೆ. ಆದರೆ, ಭತ್ತ ಮಾದರಿಯಲ್ಲಿ ರಾಗಿ ಬಿತ್ತನೆ ಮಾಡಿದರೆ ಕೇವಲ ಒಂದು ಸೇರು ಬೀಜ ಸಾಕಾಗುತ್ತದೆ. ಪ್ರತಿ ಗಿಡದಲ್ಲೂ 30ರಿಂದ ತೆನೆ ಬಿಡುತ್ತವೆ. ಈ ಪದ್ಧತಿ ಅನುಸರಿಸಿದರೆ ನಾಲ್ಕು ಎಕರೆಯ ಇಳುವರಿಯನ್ನು ಒಂದೇ ಎಕರೆಯಲ್ಲೇ ಪಡೆಯಬಹುದು. ಹಾಗೆಯೇ ರಾಸುಗಳಿಗೂ ಉತ್ತಮ ಮೇವು ಸಿಗುತ್ತದೆ ಎಂದರು.

    ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ವೆಂಕಟೇಶ್ ಮಾತನಾಡಿ, ತಾಲೂಕು ಗಡಿಭಾಗದ ರೈತರಿಗೆ ಇಲಾಖೆಯ ಅಗತ್ಯ ಮಾಹಿತಿ, ಸೌಲಭ್ಯ ದೊರಕಿಸಿಕೊಡುವ ಉದ್ದೇಶದಿಂದ ಆಯಾ ಗ್ರಾಪಂ ವ್ಯಾಪ್ತಿಯಲ್ಲಿ ರೈತರ ವಾಟ್ಸ್‌ಆ್ಯಪ್ ಗ್ರೂಪ್ ರಚಿಸಲಾಗಿದೆ. ರೈತರು ಕೇಂದ್ರಕ್ಕೆ ಬಂದಾಗ ತಮ್ಮ ಮೊಬೈಲ್ ಸಂಖ್ಯೆಯನ್ನು ನೀಡಬೇಕು ಎಂದು ತಿಳಿಸಿದರು.

    ಆತ್ಮ ಯೋಜನೆಯ ತಾಂತ್ರಿಕ ಸಹಾಯಕ ಕುಮಾರ್ ಮಾತನಾಡಿ, ಪ್ರತಿ ರೈತನು ವಿಜ್ಞಾನಿಗಳಾದಾಗ ಮಾತ್ರ ಅಭಿವೃದ್ಧಿ ಸಾಧ್ಯ. ಬಿತ್ತನೆಗೂ ಮುನ್ನ ಬೀಜೋಪಚಾರ ಮಾಡಬೇಕು. ಪ್ರತಿ ಮೂರು ವರ್ಷಕ್ಕೊಮ್ಮೆ ಜಮೀನಿನ ಮಣ್ಣಿನ ಪರೀಕ್ಷೆ ಮಾಡಿಸಬೇಕು. ರೈತ ಸಂಪರ್ಕ ಕೇಂದ್ರಗಳಿಗೆ ಪದೇ ಪದೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬೇಕು ಎಂದರು.

    ಡಾ.ಹನುಮಂತಪ್ಪ, ಗ್ರಾಪಂ ಮಾಜಿ ಸದಸ್ಯ ಆನಂದ್, ಹಳದಪ್ಪ, ವಿಎಸ್‌ಎಸ್‌ಬಿಎನ್ ಉಪಾಧ್ಯಕ್ಷೆ ಗೀತಾ, ಸದಸ್ಯೆ ರೇಣುಕಮ್ಮ, ರೈತರಾದ ತಿಮ್ಮಣ್ಣ, ಯಲ್ಲಮ್ಮ, ಲೋಕೇಶ್, ಆಶಾ ಬೊಮ್ಮನಹಳ್ಳಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts