More

    ಹೊಳಲ್ಕೆರೆ ತಾಲೂಕಲ್ಲಿ ಬಿರುಗಾಳಿ ಮಳೆಗೆ ಅಪಾರ ನಷ್ಟ

    ಹೊಳಲ್ಕೆರೆ: ತಾಲೂಕಿನಾದ್ಯಂತ ಮಂಗಳವಾರ ಸಂಜೆ ಸುರಿದ ಗಾಳಿಸಹಿತ ಮಳೆಗೆ ಫಲಕ್ಕೆ ಬಂದ ಬೆಳೆ, ದೇವಸ್ಥಾನ, ಅಂಗಡಿ ಮುಂಗಟ್ಟು, ಮನೆಗಳ ಮೇಲೆ ಮರಗಳು ಉರುಳಿ ಬಿದ್ದಿದ್ದು, ಛಾವಣಿ ಸಿಮೆಂಟ್ ಶೀಟ್‌ಗಳು ಹಾರಿ ಹೋಗಿ ಅಪಾರ ನಷ್ಟವಾಗಿದೆ.

    ತಾಲೂಕಿನ ರಾಮಘಟ್ಟದ ರೈತ ಮಲ್ಲಿಕಾರ್ಜುನ ಇವರ ಮೂರು ಎಕರೆ ಪ್ರದೇಶದಲ್ಲಿ ಬೆಳೆ ಫಸಲು ಗಾಳಿ ಹೊಡೆತಕ್ಕೆ ನೆಲಕಚ್ಚಿ ಲಕ್ಷಾಂತರ ರೂ. ನಷ್ಟವಾಗಿದೆ. ಚಿಕ್ಕಜಾಜೂರಿನ ದೇವಸ್ಥಾನ ಹಾಗೂ ಗ್ಯಾರೇಜ್ ಮೇಲೆ ಮರಗಳು ಉರುಳಿಬಿದ್ದಿವೆ. ಅಪ್ಪರಸನಹಳ್ಳಿಯಲ್ಲಿ ಮನೆಯ ಛಾವಣಿಗೆ ಹಾಕಿದ್ದ ತಗಡು ಹಾರಿಹೋಗಿವೆ.

    ಹುಳೆಮಳಲಿ ಗ್ರಾಮದ ನ್ಯಾಯಬೆಲೆ ಅಂಗಡಿಯ ಛಾವಣಿ ಸೀಟ್ ಗಾಳಿಗೆ ಹಾರಿ ಹೋಗಿದ್ದು, ಹೊಸಹಳ್ಳಿ, ಆಗ್ರಹಾರ, ಹುಳೆಮಳಿಲಿಗೆ ಹಂಚಬೇಕಿದ್ದ ಹತ್ತು ಚೀಲ ಅಕ್ಕಿ ನೀರುಪಾಲಾಗಿವೆ. ಸ್ಥಳೀಯ ಸಹಕಾರ ಸಂಘದ ಸದಸ್ಯರು ಪಡಿತರ ಧಾನ್ಯವನ್ನು ಬೇರೆಡೆಗೆ ಸ್ಥಳಾಂತರಿಸಿ ಆಗುತ್ತಿದ್ದ ನಷ್ಟವನ್ನು ತಪ್ಪಿಸಿದ್ದಾರೆ.

    ತಾಲೂಕಿನಲ್ಲಿ ಮಳೆ -ಗಾಳಿಗೆ ಆದ ನಷ್ಟದ ವರದಿ ತರಿಸಿಕೊಂಡು ಸರ್ಕಾರದ ಮಾರ್ಗದರ್ಶಿ ಪ್ರಕಾರ ಪರಿಹಾರ ನೀಡಲಾಗುತ್ತದೆ ಎಂದು ತಹಸೀಲ್ದಾರ್ ನಾಗರಾಜ್ ತಿಳಿಸಿದ್ದಾರೆ.

    ಸಹಕಾರ ಸಂಘದ ಸದಸ್ಯ ಮಾರುತೇಶ್ ಹೇಳಿಕೆ: ನ್ಯಾಯಬೆಲೆ ಅಂಗಡಿಯ ಛಾವಣಿಗೆ ಹೊದಿಸಿದ್ದ ತಗಡುಗಳು ಗಾಳಿಗೆ ಹಾರಿ ಹೋಗಿದ್ದು, ಇದನ್ನು ತಕ್ಷಣ ಸರಿಪಡಿಸಲು ಸಂಘದ ಸದಸ್ಯರ 2 ಲಕ್ಷ ರೂ. ಸಹಾಯಧನದಿಂದ ಬಳಸಿಕೊಳ್ಳಲಾಗುವುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts