More

    ಕರಿಸಿದ್ದೇಶ್ವರ ಪಲ್ಲಕ್ಕಿ ಉತ್ಸವ ಇಂದು

    ಹೊಳಲ್ಕೆರೆ: ತಾಲೂಕಿನ ರಾಮಗಿರಿ ಗ್ರಾಮದ ಬೆಟ್ಟದ ತಪ್ಪಲಿನಲ್ಲಿ ನೆಲೆಸಿರುವ ಶ್ರೀ ಕರಿಸಿದ್ದೇಶ್ವರಸ್ವಾಮಿ ರಥೋತ್ಸವದ ನೆನಪಿಗಾಗಿ ಮಾ.8ರಂದು ಹೂವಿನ ಪಲ್ಲಕ್ಕಿ ಉತ್ಸವ ಜರುಗಲಿದೆ.

    ಹಲವು ವರ್ಷಗಳ ಹಿಂದೆ ಅದ್ದೂರಿಯಾಗಿ ಕರಿಸಿದ್ದೇಶ್ವರಸ್ವಾಮಿ ರಥೋತ್ಸವ ನಡೆಯುತಿತ್ತು. ಕಾರಣಾಂತರಗಳಿಂದ ನಿಂತು ಹೋಗಿತ್ತು. ಅದರ ನೆನಪಿಗಾಗಿ ಕಳೆದ ವರ್ಷದಿಂದ ಸ್ವಾಮಿಯ ಪಲ್ಲಕ್ಕಿ ಉತ್ಸವ ನಡೆಸಲಾಗುತ್ತಿದೆ. ಆಂಜನೇಯಸ್ವಾಮಿ, ಕರಿಯಮ್ಮ ಅಮ್ಮನವರ ಹೂವಿನ ಪಲ್ಲಕ್ಕಿ ಉತ್ಸವ ಕೂಡ ಜರುಗಲಿವೆ.

    ಬೆಳ್ಳಿ ರಥೋತ್ಸವಕ್ಕೆ ಅಪ್ಪಣೆ: ಶಿಥಿಲಾವಸ್ಥೆ ತಲುಪಿರುವ ರಥದ ಮರು ನಿರ್ಮಾಣಕ್ಕೆ ಕರಿಸಿದ್ದೇಶ್ವರಸ್ವಾಮಿಯ ಅಪ್ಪಣೆ ಕೇಳಲಾಗಿದ್ದು, ಮಂತ್ರಾಲಯದಲ್ಲಿರುವ ರಾಘವೇಂದ್ರ ಸ್ವಾಮೀಜಿ ಅವರ ಬೆಳ್ಳಿ ರಥದ ಮಾದರಿ ತೇರು ನಿರ್ಮಾಣಕ್ಕೆ ದೇವರ ಸಮ್ಮತಿ ದೊರೆತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts