More

    ಅನ್ನದಾತನಿಗೆ ತಪ್ಪದ ಸಂಕಷ್ಟ

    ಹೊಳಲ್ಕೆರೆ: ದೇಶಕ್ಕೆ ಅನ್ನ ಕೊಡುವ ರೈತರಲ್ಲಿ ಶೇ.80ರಷ್ಟು ಮಂದಿ ಸಂಕಷ್ಟದಲ್ಲಿದ್ದಾರೆ ಎಂದು ಶಾಸಕ ಎಂ.ಚಂದ್ರಪ್ಪ ಆತಂಕ ವ್ಯಕ್ತಪಡಿಸಿದರು.

    ತಾಲೂಕಿನ ಬಾಣಗೆರೆ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಣ್ಣು ಆರೋಗ್ಯ ಚೀಟಿ ಯೋಜನೆ, ರೈತರ ಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಸರ್ಕಾರ ಸಬ್ಸಿಡಿ ಬೀಜ, ಗೊಬ್ಬರ, ಔಷಧ, ಕೃಷಿ ಸಾಮಗ್ರಿ ವಿತರಿಸುವಂತೆ ಬೆಳೆಗಳಿಗೆ ಸೂಕ್ತ ಬೆಲೆ ಕೊಟ್ಟರೆ ರೈತರ ಬದುಕು ಹಸನಾಗುತ್ತದೆ. ಅದೆಷ್ಟೋ ಕೃಷಿಕರು ಮನೆ ಮರ್ಯಾದೆ ಉಳಿಸಿಕೊಳ್ಳಲು ಆಭರಣ ಅಡವಿಟ್ಟು ಸಾಲ ಪಡೆದು ಜೀವನ ನಡೆಸುತ್ತಿದ್ದಾರೆ. ಈ ಬಗ್ಗೆ ನನಗೆ ಅರಿವಿದೆ. ಇದನ್ನು ಸರ್ಕಾರದ ಗಮನಕ್ಕೂ ತರುವ ಪ್ರಯತ್ನ ಮಾಡುತ್ತೇನೆ ಎಂದರು.

    12 ಸಾವಿರ ಕೋಟಿ ರೂ. ವೆಚ್ಚದ ಅಪ್ಪರ್ ಭದ್ರಾ ಯೋಜನೆಯಿಂದ ತಾಲೂಕಿನ ಕೆರೆಗಳಿಗೆ ನೀರು ಹರಿಸಲು ಪೈಪ್‌ಲೈನ್ ಕೆಲಸ ನಡೆಯುತ್ತಿದೆ. 65 ಸಾವಿರ ಮೀ. ಪೈಪ್‌ಲೈನ್ ಅಳವಡಿಸಲಾಗಿದೆ. ಅಂತರ್ಜಲ ವೃದ್ಧಿಗಾಗಿ ಬಾಣಗೆರೆಯಲ್ಲಿ ಕೆರೆ ಹೂಳೆತ್ತುವ, ಚೆಕ್‌ಡ್ಯಾಮ್ ನಿರ್ಮಾಣ ಕಾರ್ಯ ಪ್ರಾರಂಭಿಸಲಾಗುತ್ತದೆ. ಶೆ.60 ರಷ್ಟು ರಸ್ತೆಗಳ ನಿರ್ಮಾಣ ಮುಗಿದಿದೆ ಎಂದು ತಿಳಿಸಿದರು.

    ಸಹಾಯಕ ಕೃಷಿ ಅಧಿಕಾರಿ ಶ್ರೀನಿವಾಸಲು ಮಾತನಾಡಿ, ಮಾದರಿ ಗ್ರಾಮವಾಗಿ ಆಯ್ಕೆಯಾಗಿರುವ ಬಾಣಗೆರೆಯಲ್ಲಿ 227 ರೈತರು ಮಣ್ಣಿ ಪರೀಕ್ಷೆ ಮಾಡಿಸಿ ಮಾದರಿಯಾಗಿದ್ದಾರೆ. ಇದರಿಂದ ಮುಂಗಾರಿಗೆ ಮೆಕ್ಕೆಜೋಳ, ರಾಗಿ, ಅಡಕೆ ಬೆಳೆ ಬೆಳೆಗೆ ಶಿಫಾರಸು ಗೊಬ್ಬರ ಉಪಯೋಗಿಸಲು ಸಾಧ್ಯವಾಗುತ್ತದೆ. ಜತೆಗೆ ಶೇ.5ರಷ್ಟು ಇಳುವರಿ ಸಹ ಹೆಚ್ಚುತ್ತದೆ ಎಂದರು.

    ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಈಚಘಟ್ಟದ ಸಿದ್ಧವೀರಪ್ಪ, ಪ್ರದೀಪ್, ಸುದರ್ಶನ್ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಡಿ. ಸಿ. ಮೋಹನ್, ರೈತ ಸಂಘದ ತಾಲೂಕು ಅಧ್ಯಕ್ಷ ಕೊಟ್ರೇಶ್, ಗ್ರಾಪಂ ಸದಸ್ಯರಾದ ಸಾವಿತ್ರಮ್ಮ, ಯೋಗೀಶ್, ಲೋಹಿತ್ ಕುಮಾರ್ ಉಪಸ್ಥಿತರಿದ್ದರು.

    ರೈತರ ಮೇಳದಲ್ಲಿ ಸಿರಿ ಧಾನ್ಯಗಳ ಮಳಿಗೆ, ಜೇನು ಕೃಷಿ, ಟ್ರಾೃಕ್ಟರ್, ಕೃಷಿ ಪರಿಕರಗಳ ಮಾರಾಟ ಮತ್ತು ಪ್ರದರ್ಶನ ಏರ್ಪಡಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts