More

    ಮಲ್ಲಾಡಿಹಳ್ಳಿಯಲ್ಲಿ ಸೂರ್ಯಥಾನ್

    ಹೊಳಲ್ಕೆರೆ: ತಾಲೂಕಿನ ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದಲ್ಲಿ ವಿದ್ಯಾರ್ಥಿ ನಿಲಯದ ಸಾವಿರ ಮಕ್ಕಳಿಂದ ಏಕಕಾಲಕ್ಕೆ ಸೂರ್ಯ ನಮಸ್ಕಾರ ಮಾಡಿಸಿ ರಥಸಪ್ತಮಿಯನ್ನು ವಿಶೇಷವಾಗಿ ಆಚರಿಸಲಾಯಿತು.

    ವಿದ್ಯಾರ್ಥಿಗಳು ಹಿಂದು ಸಂಪ್ರದಾಯದಂತೆ ಎಕ್ಕೆಯ ಎಲೆಗಳನ್ನು ತಲೆಯ ಮೇಲಿಟ್ಟುಕೊಂಡು ಸ್ನಾನಾದಿಗಳನ್ನು ಪೂರೈಸಿ ಸೂರ್ಯನಿಗೆ ಅಭಿಮುಖವಾಗಿ ನಿಂತು ದ್ವಾದಶ ನಾಮಾವಳಿ ಸಮೇತ ಸೂರ್ಯ ನಮಸ್ಕಾರ ಮಾಡಿದರು.

    ಯೋಗ ತರಬೇತುದಾರ ಸಂತೋಷ್ ಕುಮಾರ್, ಸೂರ್ಯ ನಮಸ್ಕಾರದ ಆಚರಣೆ, 12 ಆಸನಗಳಿಂದಾಗುವ ಲಾಭಗಳ ಬಗ್ಗೆ ತಿಳಿಸಿಕೊಟ್ಟರು.

    ಕ್ಷೇಮಪಾಲಕ ಮಲ್ಲಪ್ಪ, ದೇವರಾಜು, ಈರಮ್ಮ ಮತ್ತು ಶಿಕ್ಷಕ ಸೋಮಶೇಖರ್ ಮತ್ತಿತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts