More

    ಕೌಶಲ ಕಾರ್ಯಾಗಾರದಿಂದ ಉದ್ಯೋಗ

    ಹೊಳಲ್ಕೆರೆ: ನಿರುದ್ಯೋಗ ಸಮಸ್ಯೆ ನಿವಾರಣೆಗಾಗಿ ಯುವ ಕೌಶಲ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಪಟ್ಟಣದ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಸಿ.ಸುರೇಶ್ ತಿಳಿಸಿದರು.

    ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಯುವ ಕೌಶಲ ಕಾರ್ಯಕ್ರಮದಲ್ಲಿ ಮಾತನಾಡಿ, ಶಿಕ್ಷಣದ ಜತೆ ಬದುಕುವ ಕಲೆ ಕಲಿಸಿದಾಗ ಮಾತ್ರ ಶಿಕ್ಷಣ ಪರಿಪೂರ್ಣವಾಗುತ್ತದೆ ಎಂದರು.

    ಕಾರ್ಯಾಗಾರದಲ್ಲಿ ಪಾಲ್ಗೊಳ್ಳುವ ದ್ವಿತೀಯ ಪಿಯುಸಿ, ಐಟಿಐ, ಪದವೀಧರರಿಗೆ ಮಾರ್ಗದರ್ಶನ, ಸಮಾಲೋಚನೆ, ಮೌಲ್ಯಮಾಪನ, ಮೃದು ಕೌಶಲ ಮತ್ತು ಉದ್ಯೋಗಾವಕಾಶ ಕುರಿತು ತರಬೇತಿ ನೀಡಿ ಉದ್ಯೋಗಾರ್ಹತೆ ಮಟ್ಟ ಹೆಚ್ಚಿಸಲಾಗುವುದು ಎಂದು ತಿಳಿಸಿದರು.

    ಸರ್ಕಾರಿ ಐಟಿಐ ಕಾಲೇಜಿನ ಪ್ರಾಂಶುಪಾಲ ಎಚ್.ಕೆ.ನಾಗರಾಜ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಬದುಕಿನ ಕಲೆ ಕಲಿಸಿದಾಗ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿ ಜೀವನ ನಿರ್ವಹಣೆ ಸುಲಭವಾಗುತ್ತದೆ ಎಂದರು.

    ಜಿಲ್ಲಾ ಕೌಶಲಾಧಿಕಾರಿ ಬಿ.ಸುರೇಶ್, ಪ್ರೊ.ಮಾದಾನಾಯ್ಕೊ, ಪ್ರಾಧ್ಯಾಪಕರಾದ ಲೋಕೇಶ್, ರುದ್ರಸ್ವಾಮಿ, ವಿಶ್ವನಾಥ್, ಸಿ.ಕೃಷ್ಣಮೂರ್ತಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts