More

    ಬಡವರ ಬದುಕಿಗೆ ಕರೊನಾ ಕೊಳ್ಳಿ

    ಹೊಳಲ್ಕೆರೆ: ಜಿಲ್ಲೆಯ ಯಾವ ಭಾಗದಲ್ಲಿಯೇ ಆಗಲಿ ಹೊಸಬರು ಕಂಡುಬಂದರೆ ತಕ್ಷಣ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿ, ಕರೊನಾ ನಿರ್ಮೂಲನೆಗೆ ಸಹಕರಿಸಿ ಎಂದು ಜನರಲ್ಲಿ ಮಾಜಿ ಸಚಿವ ಎಚ್.ಆಂಜನೇಯ ಮನವಿ ಮಾಡಿದರು.

    ತಾಲೂಕಿನ ರಾಮಗಿರಿ ಹೊರವಲಯದಲ್ಲಿರುವ ಸಿದ್ದರಾಮಯ್ಯ ಬಡಾವಣೆಯಲ್ಲಿನ ಸುಡುಗಾಡು ಸಿದ್ದರು, ಅಲೆಮಾರಿ 60 ಕುಟುಂಬಗಳಿಗೆ ಅಗತ್ಯ ಸಾಮಗ್ರಿಗಳ ಕಿಟ್ ವಿತರಿಸಿ ಮಾತನಾಡಿದರು.

    ಕರೊನಾ ಮಹಾಮಾರಿ ಬಡವರು, ನಿರ್ಗತಿಕರು, ಅಲೆಮಾರಿಗಳು, ಕೃಷಿಕರ ಬದುಕಿಗೆ ಕೊಳ್ಳಿ ಇಟ್ಟಿದೆ. ಈ ಸಂಕಷ್ಟಕ್ಕೆ ಸಿಲುಕಿ ಹಸಿವಿನಿಂದ ಬಹಳಷ್ಟ ಜನ ಬಳಲುತ್ತಿದ್ದಾರೆ. ಇಂತಹವರ ನೆರವಿಗೆ ಉಳ್ಳವರು ಬರಬೇಕು. ಕೈಲಾದಷ್ಟು ತಮ್ಮ ಸುತ್ತಲಿನ ಬಡವರು ಉಪವಾಸದಿಂದ ಇರದಂತೆ ಸಾಮಾಜಿಕ ಕಾಳಜಿ ವಹಿಸಬೇಕು ಎಂದು ತಿಳಿಸಿದರು.

    ಯಾರೊಬ್ಬರೂ ಹಸಿವಿನಿಂದ ಬಳಲಬಾರದು ಎಂಬ ದೃಷ್ಟಿಯಿಂದ ಸಿದ್ದರಾಮಯ್ಯನವರು ಅನ್ನಭಾಗ್ಯ ಸೇರಿ ಅನೇಕ ಸೌಲಭ್ಯಗಳನ್ನು ನೀಡಿದ್ದರು. ಅವರ ಯೋಜನೆ ಎಷ್ಟು ಪ್ರಯೋಜನವಾಗುತ್ತಿದೆ ಎಂಬುದು ಪ್ರಸ್ತುತ ಅರಿವಿಗೆ ಬಂದಿದೆ ಎಂದರು.

    ಜಿಲ್ಲೆಯ ಕಾಂಗ್ರೆಸ್ ಜನಪ್ರತಿನಿಧಿಗಳು, ಮುಖಂಡರು, ಕಾರ್ಯಕರ್ತರು ತಮ್ಮ ಊರುಗಳಲ್ಲಿರುವ ಬಡ ಕುಟುಂಬದವರನ್ನು ಗುರುತಿ ಆಹಾರ, ಧಾನ್ಯ, ಅಗತ್ಯ ಸಾಮಗ್ರಿ ವಿತರಿಸಿ ಎಂದು ತಿಳಿಸಿದರು.

    ಪಪಂ ಮಾಜಿ ಸದಸ್ಯ ಹಾಲೇಶ್, ಮುಖಂಡ ಪಾಡಿಗಟ್ಟೆ ಸುರೇಶ್, ವದಿಗೆರೆ ರಾಜಪ್ಪ, ಎಂ.ಎಸ್.ನಾಗಪ್ಪ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts