More

    ಐತಿಹಾಸಿಕ ಪ್ರದೇಶಗಳ ಅಭಿವೃದ್ಧಿಗೆ ಕ್ರಿಯಾ ಯೋಜನೆ ರೂಪಿಸಿ ಸರ್ಕಾರಕ್ಕೆ ಶೀಘ್ರಪ್ರಸ್ತಾವನೆ- ಡಿಸಿ ಸುರಳ್ಕರ್ ವಿಕಾಸ ಕಿಶೋರ್

    ಗಂಗಾವತಿ: ಅಂಜನಾದ್ರಿ ಸೇರಿ ಸುತ್ತ್ತಲಿನ ಐತಿಹಾಸಿಕ ಪ್ರದೇಶಗಳ ಅಭಿವೃದ್ಧಿಗೆ 20 ಕೋಟಿ ರೂ. ವಿಶೇಷ ಅನುದಾನ ಮಂಜೂರಾಗಿದ್ದು, ಕ್ರಿಯಾ ಯೋಜನೆ ರೂಪಿಸಿ ಸರ್ಕಾರಕ್ಕೆ ಶೀಘ್ರವೇ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಡಿಸಿ ಸುರಳ್ಕರ್ ವಿಕಾಸ ಕಿಶೋರ್ ಹೇಳಿದರು.

    ಪಂಪಾಸರೋವರದಲ್ಲಿ ಜಿಲ್ಲಾಡಳಿತ ಮಂಗಳವಾರ ಆಯೋಜಿಸಿದ್ದ ವಿವಿಧ ಇಲಾಖೆ ಅಧಿಕಾರಿಗಳ ವಿಶೇಷ ಸಭೆಯಲ್ಲಿ ಮಾತನಾಡಿದರು. ಅಭಿವೃದ್ಧಿ ವಿಚಾರದಲ್ಲಿ ಯುನೆಸ್ಕೋ, ಅರಣ್ಯ ಮತ್ತು ಹಂಪಿ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿ, ಪರವಾನಗಿ ಮತ್ತು ಪಾತ್ರ ಕುರಿತು ಚರ್ಚಿಸಲಾಗಿದೆ. ಪ್ರವಾಸೋದ್ಯಮ ಬೆಳೆಯಬೇಕಾದರೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬೇಕಿದೆ.ವನ್ಯ ಪ್ರಾಣಿಗಳ ರಕ್ಷಣೆ ಕುರಿತಂತೆ ಈಗಾಗಲೇ ಡಿಎ್ಒ ಸೂಚನೆ ನೀಡಲಾಗಿದ್ದು, ಅರಣ್ಯಾಧಿಕಾರಿಗಳು ನಿಗಾವಹಿಸಲಿದ್ದಾರೆ ಎಂದರು.

    1988ರ ನೋಟಿಫಿಕೇಶನ್‌ನಂತೆ ಪ್ರಾಧಿಕಾರ ವ್ಯಾಪ್ತಿ ಹೊರತು ಪಡಿಸಿ ಉಳಿದ ಪ್ರದೇಶ ಡಿನೋಟಿಫಿಕೇಶನ್ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಲಾಯಿತು.

    ಕೇಬಲ್ ಕಾರ್: ಅಂಜನಾದ್ರಿ ಬೆಟ್ಟದಲ್ಲಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಕೇಬಲ್ ಕಾರ್ ಅಳವಡಿಕೆ ಬಗ್ಗೆ ಯೋಚಿಸಲಾಗುತ್ತಿದೆ. ಸ್ಮಾರಕಗಳ ರಕ್ಷಣೆಗೆ ನೀಲಿನಕ್ಷೆ ತಯಾರಿಸಿದ್ದು, ವ್ಯಾಖ್ಯಾನ ಕೇಂದ್ರ, ಯಾತ್ರಿ ನಿವಾಸ, ಪ್ರದಕ್ಷಿಣೆ ಪಥ ನಿರ್ಮಾಣ ಕುರಿತು ಅಯಾ ಇಲಾಖೆ ಅಧಿಕಾರಿಗಳಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ ಎಂದರು.

    ಸಹಾಯಕ ಆಯುಕ್ತ ನಾರಾಯಣರೆಡ್ಡಿ ಕನಕರೆಡ್ಡಿ, ಪಿಡಿ ಸಿದ್ಧರಾಮೇಶ್ವರ, ನಿರ್ಮಿತಿ ಕೇಂದ್ರದ ವ್ಯವಸ್ಥಾಪಕ ಶಶಿಧರ, ಪ್ರಾಧಿಕಾರ ಆಯುಕ್ತ ಬಿ.ಎನ್.ಲೋಕೇಶ, ಪಿಡಬ್ಲುೃಡಿ ಇಇ ತಿರುಮಲರಾವ್ ಕುಲ್ಕರ್ಣಿ, ಎಇಇ ಸುರೇಶ ಐಲಿ, ತಹಸೀಲ್ದಾರ್ ಎಂ.ರೇಣುಕಾ, ತಾಪಂ ಇಒ ಡಾ.ಮೋಹನ್, ಕೈಗಾರಿಕೆ ಜಂಟಿ ನಿರ್ದೇಶ ಪ್ರಶಾಂತ ಬಾರಿಗಿಡದ್, ಆರ್‌ಐ ಮಂಜುನಾಥ ಹಿರೇಮಠ ಇತರರಿದ್ದರು.

    ಅಂಜನಾದ್ರಿ ಬೆಟ್ಟದಲ್ಲಿ ಪೂಜೆ ಸಲ್ಲಿಸಲು ಹೈಕೋರ್ಟ್ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಮಹಾಂತ ವಿದ್ಯಾದಾಸ ಬಾಬಾರಿಗೆ ಬೆಟ್ಟದಲ್ಲಿರುವ ಅವಕಾಶ ನೀಡಲಾಗಿದೆ. 2 ವರ್ಷಗಳಿಂದ ಪೂಜೆ ಹಕ್ಕಿಗಾಗಿ ನಡೆದ ಕಾನೂನು ಸಮರ ಕೊನೆಗೂ ತಾರ್ಕೀಕ ಅಂತ್ಯ ಕಂಡಿದ್ದು, ಕೆಲ ಷರತ್ತಿನೊಂದಿಗೆ ಅವಕಾಶ ಕಲ್ಪಿಸಲಾಗಿದೆ.
    | ಸುರಳ್ಕರ್ ವಿಕಾಸ ಕಿಶೋರ, ಡಿಸಿ, ಕೊಪ್ಪಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts